More

    ಮಣ್ಣಿನಲ್ಲಿ ಹುದುಗಿದ್ದ ಎರಡು ಶಿಲಾಶಾಸನ ಪತ್ತೆ

    ಬಂಕಾಪುರ: ಪಟ್ಟಣದ ಪ್ರಾಚೀನ ಜಮಾಸಿ ಬಾವಿ ಸ್ವಚ್ಛತೆ ಕಾರ್ಯ ನಡೆಸುತ್ತಿದ್ದಾಗ ಬಾವಿಯಲ್ಲಿ ಹಳೆಗನ್ನಡದ ಎರಡು ಶಿಲಾಶಾಸನಗಳು ಪತ್ತೆಯಾಗಿವೆ.

    ಆರ್​ಎಸ್​ಎಸ್ ಮುಖಂಡ ಗಂಗಾಧರ ಮಾಮ್ಲೇಪಟ್ಟಣಶೆಟ್ಟರ, ಶಿವಾನಂದ ದೇವಸೂರ, ಹೊನ್ನಪ್ಪ ಹೂಗಾರ, ಸೋಮಶೇಖರ ಗೌರಿಮಠ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್) ಸೇವಕರು ಪಟ್ಟಣದ ಜಲಮೂಲಗಳ ಸ್ವಚ್ಛತಾ ಕಾರ್ಯ ಆರಂಭಿಸಿದ್ದರು. ಅದರಂತೆ ಇತ್ತೀಚೆಗೆ ಪ್ರಾಚೀನ ಜಮಾಸಿ ಬಾವಿಯಲ್ಲಿ ಸ್ವಚ್ಛತೆ ನಡೆಸುತ್ತಿದ್ದಾಗ ಮಣ್ಣಿನಲ್ಲಿ ಹುದುಗಿದ್ದ ಶಿಲಾಶಾಸನಗಳು ಕಣ್ಣಿಗೆ ಬಿದ್ದಿವೆ. ಇದರಿಂದ ಪ್ರೇರಿತರಾದ ಯುವಕರು, ಐತಿಹಾಸಿಕ ಬಾವಿಯ ಸಂಪೂರ್ಣ ಸ್ವಚ್ಛತೆಗೆ ಮುಂದಾಗಿದ್ದಾರೆ.

    ಈಗಾಗಲೇ ದೊರೆತಿರುವ ಎರಡು ಶಿಲಾಶಾಸನ ಅವಲೋಕಿಸಿರುವ ಇತಿಹಾಸ ತಜ್ಞರು, ಈ ಬಾವಿ ಜಮಾಸಿ ಬಾವಿಯಲ್ಲ. ಇದು ದೇಮರಸಿ ಬಾವಿಯಾಗಿದೆ. ಕ್ರಿ.ಶ. 1476ರಲ್ಲಿ ಮದನಸಿಂಗ ನಾಯಕ, ಬಾಬಲಿ ನಾಯಕಿ ದಂಪತಿ, ಮಗಳು ದೇಮರಸಿ ಚಿಕ್ಕ ವಯಸ್ಸಿನಲ್ಲಿಯೇ ದುರ್ಮರಣಕ್ಕೀಡಾಗಿದ್ದರಿಂದ ಅವಳಿಗೆ ಪುಣ್ಯಲೋಕ ಬಯಸಿ ವಿವಿಧ ದಾನ ಮಾಡಿದ್ದರು. ಕೊನೆಗೆ ವಿದ್ವಾಂಸರ ಸಲಹೆಯಂತೆ ನೀರಿನ ದಾನ (ಉದಕ ದಾನ) ಮಾಡುವ ಉದ್ದೇಶದಿಂದ ಮಗಳು ದೇಮರಸಿ ಹೆಸರಿನಲ್ಲಿ ನಿರ್ವಿುಸಿರುವ ಬಾವಿ ಇದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಬಾವಿಯ ಸಂಪೂರ್ಣ ಸ್ವಚ್ಛತೆ ಕೈಗೊಂಡರೆ, ಇನ್ನೂ ಕೆಲ ಕುರುಹು, ಶಾಸನಗಳು ಪತ್ತೆಯಾಗಬಹುದು. ಹಳೆಗನ್ನಡ ದಲ್ಲಿರುವ ಶಿಲಾಶಾಸನಗಳನ್ನು ಇತಿಹಾಸ ತಜ್ಞರು ಅಧ್ಯಯನ ಮಾಡಿ ವಿಷಯ ಬಹಿರಂಗಪಡಿಸಬೇಕಿದೆ.

    15ನೇ ಶತಮಾನದಲ್ಲಿ ನಿರ್ವಿುಸಿರುವ ಪುರಾತನ ಬಾವಿಯನ್ನು ಪ್ರಾಚ್ಯವಸ್ತು ಇಲಾಖೆ ಅನುಮತಿ ಮೇರೆಗೆ, ಪುರಸಭೆ ವ್ಯಾಪ್ತಿಗೊಳಪಡಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಅಭಿವೃದ್ಧಿಪಡಿಸಬೇಕು. ಕೋಟಿ ರೂ. ಖರ್ಚು ಮಾಡಿದರೂ ಇಂದಿನ ದಿನಗಳಲ್ಲಿ ಇಂತಹ ಬಾವಿ ನಿರ್ವಿುಸಲು ಸಾಧ್ಯವಿಲ್ಲ. ಪುರಸಭೆಯವರು ಕಾರಣ ಹೇಳದೆ ಅಭಿವೃದ್ಧಿಗೆ ಮುಂದಾಗಬೇಕು.

    | ಗಂಗಾಧರ ಮಾಮ್ಲೇಪಟ್ಟಣಶೆಟ್ಟರ ಜಿಲ್ಲಾ ಆರ್​ಎಸ್​ಎಸ್ ಸಂಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts