More

    ಪತ್ರಕರ್ತನ ಮೇಲೆ ದಾಳಿ ಪ್ರಕರಣ; ಇಬ್ಬರು ಹೈಬ್ರಿಡ್​ ಉಗ್ರರ ಬಂಧನ

    ಶ್ರೀನಗರ: ಕಳೆದ ವರ್ಷ ಡಿಸೆಂಬರ್​ 25ರಂದು ಪತ್ರಕರ್ತ ವಸೀಮ್​​ ಅಹ್ಮದ್​ ವಾನಿ(27) ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ದ ರೆಸಿಸ್ಟೆಂಟ್​​​ ಫ್ರಂಟ್​ ಸಂಘಟನೆಗೆ(TRF) ಸೇರಿದ್ದ ಇಬ್ಬರು ಹೈಬ್ರಿಡ್​ ಉಗ್ರರನ್ನು ಜಮ್ಮು-ಕಾಶ್ಮೀರದ ಶೋಫಿಯಾನ್​ನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಪತ್ರಕರ್ತನ ಮೇಲಿನ ದಾಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ(SIT)ಅನ್ನು ರಚಿಸಲಾಗಿತ್ತು. ತಾಂತ್ರಿಕ ಸಾಕ್ಷಿಗಳ ಆಧಾರದ ಮೇಲೆ ಹಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ತನಿಖಾ ದಳದ ಸದಸ್ಯರೊಬ್ಬರು ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಮ್ಮು-ಕಾಶ್ಮೀರ ಪೊಲೀಸ್​ ಇಲಾಖೆಯ ವಕ್ತಾರರು ಶೋಫಿಯಾನ್​ ಜಿಲ್ಲೆಯ ಸೈದಾಪೋರಾ ಪಯೀನ್​ ಗ್ರಾಮದ ಸುಹೈಬ್​ ರಿಯಾಜ್​​ ಹಾಗೂ ಅನಾಯತ್​ ಉಲ್ಲಾ ಇಕ್ಬಾಲ್​ ಪತ್ರಕರ್ತನ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ಧಾರೆ.

    ಪತ್ರಕರ್ತನ ಮೇಲೆ ದಾಳಿ ಪ್ರಕರಣ; ಇಬ್ಬರು ಹೈಬ್ರಿಡ್​ ಉಗ್ರರ ಬಂಧನ

    ಇದನ್ನೂ ಓದಿ: VIDEO| ರಾಮನವಮಿ ವೇಳೆ ಹಿಂಸಾಚಾರ; ರಾಜ್ಯಪಾಲರಿಂದ ವರದಿ ಕೇಳಿದ ಅಮಿತ್​ ಷಾ

    ಈ ಇಬ್ಬರು ಯುವಕರು ನಿಷೇಧಿತ ಉಗ್ರ ಸಂಘಟನೆ ಲಷ್ಕರ್​-ಇ-ತೋಯ್ಬಾ(LET)ದ ಉಪ ಸಂಘಟನೆಯಾದ ದ ರೆಸಿಸ್ಟೆಂಟ್​ ಫ್ರಂಟ್​(TRF)ನಲ್ಲಿ ಹೈಬ್ರಿಡ್​ ಭಯೋತ್ಪಾದಕರಾಗಿ ಕೆಲಸ ಮಾಡುತ್ತಿದ್ದರು. ಆರೋಪಿಗಳಿಂದ ಪಿಸ್ತೂಲ್​, ಐದು ಗುಂಡು, ಒಂದು ಸುಧಾರಕ ಸ್ಪೋಟಕ(IED)ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್​ ಇಲಾಖೆಯ ವಕ್ತಾರರು ತಿಳಿಸಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts