More

    ಹಾಡು ‘ಚಿಂದಿ’!; ಕಸ ಸಂಗ್ರಹಿಸುವರಿಬ್ಬರಿಂದ ‘ಮಹಿಂದ್ರ’ರಿಗೂ ‘ಆನಂದ’…

    ನವದೆಹಲಿ: ‘ಕಸದಿಂದ ರಸ’ ಎಂಬ ಮಾತನ್ನು ಬಹುತೇಕ ಎಲ್ಲರೂ ಕೇಳಿರುತ್ತಾರೆ, ಆದರೆ ಇದು ಅದಕ್ಕೂ ಮೀರಿದ್ದು. ಏಕೆಂದರೆ ಇಲ್ಲಿ ಕಸ ಸಂಗ್ರಹಿಸುವ ಇಬ್ಬರ ಗಾಯನ ರಸಾಮೃತವನ್ನೇ ಹರಿಸಿದ್ದು, ಮಹಿಂದ್ರರಿಗೂ ಆನಂದವನ್ನು ತಂದಿದೆ. ಅಂದರೆ, ಉದ್ಯಮಿ ಆನಂದ ಮಹಿಂದ್ರ ಅವರು ಇವರಿಬ್ಬರ ಗಾಯನಕ್ಕೆ ಮಾರುಹೋಗಿ, ಇವರಿಗೆ ಸೂಕ್ತ ತರಬೇತಿ ಕೊಡಿಸುವ ವ್ಯವಸ್ಥೆ ಮಾಡಿಸಲಿಕ್ಕೂ ಮುಂದಾಗಿದ್ದಾರೆ.

    ಅಂದಹಾಗೆ ಕಸ ಸಂಗ್ರಹಿಸುವ ಈ ಇಬ್ಬರು ಪ್ರತಿಭಾವಂತರ ಹೆಸರು ಹಫೀಜ್​ ಮತ್ತು ಹಬಿಬುರ್. ನವದೆಹಲಿಯ ಫ್ರೆಂಡ್ಸ್ ಕಾಲನಿಯಲ್ಲಿ ನಿತ್ಯ ಕಸ ಸಂಗ್ರಹಿಸುವ ಕೆಲಸ ಮಾಡಿಕೊಂಡಿರುವ ಇವರಿಬ್ಬರು ಹಾಡಿರುವ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಸಂಗೀತ ಪ್ರೇಮಿಗಳಷ್ಟೇ ಅಲ್ಲದೆ ಇತರ ಸಾರ್ವಜನಿಕರ ಗಮನವನ್ನೂ ಸೆಳೆಯಲಾರಂಭಿಸಿದೆ. ಇವರಿಬ್ಬರು ಹಿಂದಿಯ ‘ಅನ್​ಮೋಲ್ ಮೋತಿ’ ಚಿತ್ರದ ‘ಏ ಜಾನ್​ ಏ ಚಮನ್​’ ಹಾಗೂ ‘ಮೈ ನೇಮ್​ ಈಸ್ ಖಾನ್​’ ಸಿನಿಮಾದ ‘ಸಜ್ದಾ’ ಗೀತೆಗಳನ್ನು ಹಾಡಿದ್ದಾರೆ.

    ಉದ್ಯಮಿ ಆನಂದ ಮಹಿಂದ್ರ ಅವರಿಗೆ ಸ್ನೇಹಿತ ರೋಹಿತ್ ಖಟ್ಟರ್ ಅವರ ಮೂಲಕ ಈ ವಿಡಿಯೋ ತುಣುಕುಗಳು ತಲುಪಿದ್ದು, ಇವರಿಬ್ಬರ ಗಾಯನ ಮೆಚ್ಚಿಕೊಂಡಿರುವ ಆನಂದ ಮಹಿಂದ್ರ ಅವರೂ ಈ ವಿಡಿಯೋ ತುಣುಕುಗಳನ್ನು ಟ್ವೀಟ್​ ಮಾಡಿದ್ದಾರೆ. ‘ಇನ್​ಕ್ರೆಡಿಬಲ್ ಇಂಡಿಯಾ.. ನನ್ನ ಗೆಳೆಯ ರೋಹಿತ್ ಖಟ್ಟರ್ ಸೋಷಿಯಲ್ ಮೀಡಿಯಾ ಮೂಲಕ ಸಿಕ್ಕ ಈ ಎರಡು ವಿಡಿಯೋ ತುಣುಕುಗಳನ್ನು ನನಗೆ ಕೊಟ್ಟು ಕಳುಹಿಸಿದ್ದಾರೆ. ಹಫೀಜ್​ ಹಾಗೂ ಹಬಿಬುರ್ ಎಂಬ ಈ ಇಬ್ಬರು ದೆಹಲಿಯ ನ್ಯೂ ಫ್ರೆಂಡ್ಸ್​ ಕಾಲನಿಯಲ್ಲಿ ಕಸ ಸಂಗ್ರಹಿಸುವವರಾಗಿದ್ದು, ಅದ್ಭುತವಾಗಿ ಹಾಡಿದ್ದಾರೆ. ಪ್ರತಿಭೆ ಎಲ್ಲಿಂದ ಹೊರಹೊಮ್ಮುತ್ತದೆ ಎಂಬುದಕ್ಕೆ ಮಿತಿಯೇ ಇಲ್ಲ’ ಎಂಬುದಾಗಿ ಆನಂದ ಮಹಿಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇವರಿಬ್ಬರಿಗೆ ಸರಿಯಾದ ತರಬೇತಿ ಸಿಕ್ಕರೆ ಒಳ್ಳೆಯ ಗಾಯಕರಾಗಬಲ್ಲರು. ನಾನು ಮತ್ತು ರೋಹಿತ್ ಇಬ್ಬರೂ ಇವರಿಬ್ಬರ ಸಂಗೀತಾಭ್ಯಾಸಕ್ಕೆ ನೆರವಾಗಬಲ್ಲೆವು. ಈ ಇಬ್ಬರು ಹಗಲಿಡೀ ಕೆಲಸ ಮಾಡುವವರಾದ್ದರಿಂದ ಸಂಜೆ ಹೊತ್ತು ಇವರಿಬ್ಬರಿಗೆ ಸಂಗೀತ ತರಬೇತಿ ನೀಡುವ ಯಾರಾದರೂ ಇದ್ದರೆ ನಮಗೆ ತಿಳಿಸಿ ಎಂಬುದಾಗಿ ಆನಂದ ಮಹಿಂದ್ರ ಕೇಳಿಕೊಂಡಿದ್ದಾರೆ. ಇನ್ನು ಈ ವಿಡಿಯೋಗಳು ವೈರಲ್​ ಆಗಿದ್ದು, ಇದನ್ನು ನೋಡಿದ ಬಹಳಷ್ಟು ಮಂದಿ ‘ಹಾಡು ಚಿಂದಿ’ ಎಂಬ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಪ್ರೇಮಿಗಳ ದಿನದಂದು ಪತ್ನಿ ಜತೆ ಹೊಸ ಬೈಕಲ್ಲಿ ಜಾಲಿರೈಡ್ ಹೋದ ನಟ ವಿವೇಕ್ ಒಬೆರಾಯ್​; ಆಮೇಲಾಯಿತು ವಿವೇಕೋದಯ!

    VIDEO| ಆನೆಯ ಮೇಲೆ ಬೆತ್ತಲಾದ ಮಾಡೆಲ್​: ಆಕೆ ಕೊಟ್ಟ ಕಾರಣ ಕೇಳಿದ್ರೆ ಅಚ್ಚರಿ ಖಂಡಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts