More

    ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?

    ಬೆಂಗಳೂರು: ಇವರಿಬ್ಬರು ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿ ಬೀಳದೇ ಇದ್ದಿದ್ದರೆ ಡಿ. 31ರ ಮಧ್ಯರಾತ್ರಿ ಬಹುಶಃ ಅದೆಷ್ಟೋ ಜನ ಮತ್ತಲ್ಲಿ ತೇಲಾಡಿರುತ್ತಿದ್ದರು. ಮತ್ತಿನ ಪರಾಕಾಷ್ಠೆಯಲ್ಲಿ ಅದೇನೇನೋ ಮಾಡಿರುತ್ತಿದ್ದರೋ?! ಆದರೆ ಬೆಂಗಳೂರು ಪೊಲೀಸರು ಇವರ ಅಪರಾಧದ ಜಾಡು ಹಿಡಿದು ಸಂಭಾವ್ಯ ಅತಿರೇಕಗಳನ್ನು ಸ್ವಲ್ಪಮಟ್ಟಿಗೆ ತಪ್ಪಿಸಿದ್ದಾರೆ.

    ಹೀಗೆ ಪೊಲೀಸರ ಕೈಗೆ ಸಿಕ್ಕ ಇವರಿಬ್ಬರು ಭಾರತೀಯರೇ ಅಲ್ಲ. ನೈಜೀರಿಯಾದಿಂದ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಇವರಿಬ್ಬರು ಮಾಡುತ್ತಿದ್ದುದು ಮಾಡಬಾರದ ಕೆಲಸಗಳನ್ನೇ. ಅದಾಗ್ಯೂ ಸಿಕ್ಕಿಬಿದ್ದು ಬಂಧಿತರಾಗಿರುವ ಇವರು ಭಾರತೀನಗರದ ಡೋಂಚುಕ್ಸ್ ಓಕೆಕೆ(39) ಮತ್ತು ಬಿದರಹಳ್ಳಿಯ ಸೆಲೆಕ್ಷನೆ ಅನುಗ್ನಾ (40). ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪಾರ್ಟಿಗಳಿಗೆ ಪೂರೈಸಲು ವಿದೇಶದಿಂದ ಡ್ರಗ್ಸ್ ತರಿಸಿದ್ದ ಇವರಿಬ್ಬರನ್ನು ಬಂಧಿಸಿರುವ ಪೂರ್ವ ವಿಭಾಗದ ಪೊಲೀಸರು 1 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಜಪ್ತಿ ಮಾಡಿದ್ದಾರೆ. ಇವರಿಂದ 3300 ಎಂಡಿಎಂಎ ಮಾತ್ರೆ, 600 ಗ್ರಾಂ ಎಕ್​ಸ್ಟೆಸಿ ಪುಡಿಯನ್ನು ವಶಕ್ಕೆ ಪಡೆಯಲಾಗಿದೆ. ಒಂದು ಮಾತ್ರೆಯನ್ನು 2ರಿಂದ 2500 ರೂ.ಗೆ ಮಾರಾಟ ಮಾಡುತ್ತಿದ್ದರು. ಇದರ ಅಂದಾಜು ಮೌಲ್ಯ 1 ಕೋಟಿ ರೂ. ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

    ಇದನ್ನೂ ಓದಿ: ಭಾರತದ ವಿಮಾನವನ್ನೇ ಹೈಜಾಕ್​ ಮಾಡಿಸಿದ್ದ ಮೋಸ್ಟ್​ ವಾಂಟೆಡ್​ ಉಗ್ರನನ್ನು ಬಿಡುಗಡೆ ಮಾಡಿದ ಪಾಕ್​ 

    ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪಾರ್ಟಿಗಳಿಗೆ ಡ್ರಗ್ಸ್‌ಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಅದಕ್ಕಾಗಿ ವಿದೇಶಿ ಪೆಡ್ಲರ್‌ಗಳು ಡಾರ್ಕ್ ವೆಬ್‌ಸೈಟ್‌ನಲ್ಲಿ ಯುನೈಟೆಡ್ ಕಿಂಗ್ ಡಮ್‌ನಿಂದ ಪಾರ್ಸಲ್ ಮೂಲಕ ಬೆಂಗಳೂರಿಗೆ ಡ್ರಗ್ಸ್ ತರಿಸಿಕೊಂಡಿದ್ದರು. ವಿದೇಶಿ ಅಂಚೆ ಕಚೇರಿ ದಾಟಿ ಪೆಡ್ಲರ್‌ಗಳ ಕೈ ಸೇರಿತ್ತು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಬೈಯಪ್ಪನಹಳ್ಳಿ ಪೊಲೀಸರು ಮತ್ತು ಹಲಸೂರು ಉಪವಿಭಾಗದ ಅಪರಾಧ ಪತ್ತೆ ದಳದವರು ಪೆಡ್ಲರ್‌ಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.

    ಸಿ.ವಿ.ರಾಮನ್‌ನಗರದ ಬಾಗಮನೆ ಟೆಕ್ ಪಾರ್ಕ್ ಹಿಂಭಾಗದ ಕೃಷ್ಣಪ್ಪ ಗಾರ್ಡನ್‌ನಲ್ಲಿನ ಟೀ ಅಂಗಡಿ ಬಳಿ ಡ್ರಗ್ಸ್ ಮಾರಾಟಕ್ಕೆ ಆರೋಪಿಗಳು ಸಜ್ಜಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಎಚ್ಚೆತ್ತ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ವಿಚಾರಣೆ ನಡೆಸಿದಾಗ ದಂಧೆ ಬೆಳಕಿಗೆ ಬಂದಿದೆ. ವ್ಯಾಪಾರದ ಸೋಗಿನಲ್ಲಿ ಪಾಸ್‌ಪೋರ್ಟ್, ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಅಕ್ರಮವಾಗಿ ನೆಲೆಸಿ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದರು. ಬಂಧನರ ಬಳಿ ಪಾರ್ಸ್‌ಪೋರ್ಟ್, ವೀಸಾ ದೊರೆತಿಲ್ಲ. ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಡ್ರಗ್ಸ್‌ಗೆ ಹೆಚ್ಚಿನ ಬೇಡಿಕೆ ಇರುವ ಕಾರಣಕ್ಕೆ ಡಾರ್ಕ್ ವೆಬ್‌ಸೈಟ್‌ನಿಂದ ತರಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ವಿದೇಶಿ ಅಂಚೆ ಕಚೇರಿಯಿಂದ ದಾಟಿ ಪೆಡ್ಲರ್‌ಗಳ ಕೈ ಸೇರಿರುವುದರ ಬಗ್ಗೆ ಅನುಮಾನವಿದೆ. ಸಾಕಷ್ಟು ಪ್ರಕರಣಗಳಲ್ಲಿ ಆರೋಪಿಗಳ ಬಂಧನಕ್ಕೆ ಅಂಚೆ ಕಚೇರಿ ಅಧಿಕಾರಿಗಳು ಸಹಾಯ ಮಾಡಿದ್ದಾರೆ. ಆದರೆ, ಈ ಕೇಸಿನಲ್ಲಿ ಲೋಪದ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ಕಮಲ್ ಪಂತ್ ತಿಳಿಸಿದ್ದಾರೆ.

    ಇದನ್ನೂ ಓದಿ: ರಾಜ್ಯದ ಒಂದೇ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕರೊನಾ ಪಾಸಿಟಿವ್​ 

    ಸ್ಥಳೀಯ ನೆಟ್‌ವರ್ಕ್

    ಬಂಧಿತ ಪೆಡ್ಲರ್‌ಗಳು ಸ್ಥಳೀಯ ನೆಟ್‌ವರ್ಕ್ ಹೊಂದಿದ್ದು, ಅವರ ಮೂಲಕ ಐಟಿ-ಬಿಟಿ ಉದ್ಯೋಗಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಈ ಇಬ್ಬರನ್ನು ವಶಕ್ಕೆ ಪಡೆದು ಇವರೊಂದಿಗೆ ಕೈ ಜೋಡಿಸಿರುವ ಸ್ಥಳೀಯ ಸಬ್ ಪೆಡ್ಲರ್‌ಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕೆಜಿಎಫ್​ ಶೂಟಿಂಗ್​ ಮುಗಿದು ವಾರವಾಯ್ತು; ಮನೆಯತ್ತ ಇನ್ನೂ ಮುಖ ಮಾಡದ ಯಶ್​!

    ‘ಹೀಗಾದರೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ರನ್ನೂ ಉಗ್ರನೆಂದು ಕರೆಯುತ್ತಾರೆ’ ರಾಹುಲ್​ ಗಾಂಧಿ ಆರೋಪ

    ಹೆಂಡತಿ ಜೀನ್ಸ್​ ತೊಡುವುದಿಲ್ಲ, ಡ್ಯಾನ್ಸ್​ ಮಾಡುವುದಿಲ್ಲವೆಂದು ತಲಾಖ್​ ನೀಡಿದ ಗಂಡ! ಮಾವನ ಮನೆಗೆ ಬಂದು ಬೆಂಕಿ ಹಚ್ಚಿಕೊಂಡ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts