More

    ಕೋರ್ಟು ರಸ್ತೆ ಪ್ರವೇಶಿಸುವಲ್ಲಿ ಮರದ ಕೊಂಬೆ ಬಿದ್ದು ಎರಡು ಕಾರುಗಳಿಗೆ ಹಾನಿ

    ಮಂಗಳೂರು: ನಗರದ ಪಿವಿಎಸ್ ಬಳಿ ಕೋರ್ಟ್ ರಸ್ತೆಗೆ ಪ್ರವೇಶಿಸುವಲ್ಲಿ ಮಂಗಳವಾರ ರಾತ್ರಿ ಮರದ ಕೊಂಬೆ ಬಿದ್ದು ಎರಡು ಕಾರುಗಳಿಗೆ ಹಾನಿ ಉಂಟಾಗಿದೆ.


    ಮರದ ಅಡಿಯಲ್ಲಿ ಆಮ್ಲೆಟ್ ಅಂಗಡಿ ಕಾರ್ಯಾಚರಿಸುತ್ತಿದ್ದು, ಅಲ್ಲಿ ಹಲವು ಮಂದಿ ಆಮ್ಲೆಟ್ ತಿನ್ನಲು ಆಗಮಿಸಿದ್ದರು. ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು. ಈ ಸಂದರ್ಭ ಸುರಿದ ಮಳೆಗೆ ಮರದ ಕೊಂಬೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಎರಡು ಕಾರುಗಳಿಗೆ ಹಾನಿಯಾಗಿದ್ದು ಬಿಟ್ಟರೆ, ಯಾವುದೇ ಸಾವು, ನೋವು ಸಂಭವಿಸಿಲ್ಲ.


    ತಕ್ಷಣ ಕದ್ರಿ ಠಾಣೆಯ ಹೊಯ್ಸಳ ಆಗಮಿಸಿದೆ. ಮೆಸ್ಕಾಂ ಹಾಗೂ ಅಗ್ನಿಶಾಮಕದಳದವರು ಬಂದು ಮರದ ಕೊಂಬೆ ತೆರವು ಮಾಡಲಾಯಿತು. ಈ ಸಂದರ್ಭ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಯಿತು.


    ನಗರದಲ್ಲಿ ರಸ್ತೆ ಬದಿಯಲ್ಲಿ ಹಲವಾರು ಮರಗಳಿದ್ದು, ಗಾಳಿ, ಮಳೆ ಬರುವಾಗ ಅದರಲ್ಲಿರುವ ಒಣಗಿದ ಗೆಲ್ಲು, ಕೆಲವೊಮ್ಮೆ ಹಸಿ ಗೆಲ್ಲು ಕೂಡಾ ಮುರಿದು ಬೀಳುವ ಸಾಧ್ಯತೆ ಇದೆ. ಆದ್ದರಿಂದ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು ಗಾಳಿ, ಮಳೆ ಬರುತ್ತಿರುವಾಗ ಸುರಕ್ಷಿತ ಸ್ಥಳದಲ್ಲಿ ನಿಂತು, ಮಳೆ ಕಡಿಮೆಯಾದ ಬಳಿಕ ಸಂಚಾರ ಮುಂದುವರಿಸುವುದು ಸೂಕ್ತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts