More

    ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿದ್ದ ಪಾಕ್​ಗೆ ಬುದ್ಧಿ ಕಲಿಸಿದ ಟ್ವಿಟರ್​

    ನವದೆಹಲಿ: ಕರೊನಾ ವೈರಸ್​ನಿಂದ ತನ್ನ ಪ್ರಜೆಗಳನ್ನು ರಕ್ಷಿಸಿಕೊಳ್ಳಲಾಗದೇ ಪರದಾಡುವ ನಡುವೆಯೂ ಭಾರತದ ವಿರುದ್ಧ ಸಂಚು ರೂಪಿಸುವುದಕ್ಕೆ ಟ್ವಿಟರ್​ ಅನ್ನು ವೇದಿಕೆ ಮಾಡಿಕೊಂಡಿದ್ದ ಪಾಕಿಸ್ತಾನಕ್ಕೆ ಈಗ ಖುದ್ದು ಟ್ವಿಟರ್​ ಪಾಠ ಕಲಿಸಿದೆ.

    ಕೊಲ್ಲಿ ರಾಷ್ಟ್ರಗಳಲ್ಲಿ ಭಾರತದ ವಿರುದ್ಧ ಸುಳ್ಳು ಸುದ್ದಿಯನ್ನು ಹಬ್ಬಿಸಿ ಎರಡೂ ದೇಶಗಳ ನಡುವೆ ಬೆಂಕಿ ಹಚ್ಚುವ ಕೆಲಸಕ್ಕೆ ಪಾಕಿಸ್ತಾನದ ಗುಪ್ತಚರ ದಳ (ಐಎಸ್ ಐ) ಮುಂದಾಗಿತ್ತು. ಇದಕ್ಕಾಗಿ ಅದು ನಕಲಿ ಟ್ವೀಟರ್ ಖಾತೆಗಳನ್ನು ವೇದಿಕೆ ಮಾಡಿಕೊಂಡಿತ್ತು. ಇದು ಬೆಳಕಿಗೆ ಬರುತ್ತಲೇ ಖುದ್ದು ಟ್ವಿಟರ್​ ಕ್ರಮಕ್ಕೆ ಮುಂದಾಗಿ ಎಲ್ಲಾ ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ.

    @indaialusaf ಮತ್ತು @NouraAlsaud ಎಂಬ ಹೆಸರಿನ ಟ್ವೀಟರ್ ಖಾತೆಯನ್ನು ತೆರೆದಿದ್ದ ಪಾಕಿಸ್ತಾನ ಇದಕ್ಕಾಗಿ ಸೌದಿ ಅರೇಬಿಯಾದ ರಾಜಕುಮಾರ ನೌರಾ ಬಿಂಟ್ ಫೈಸಲ್ ಹೆಸರನ್ನು ಬಳಕೆ ಮಾಡಿಕೊಂಡಿತ್ತು. ಈ ಟ್ವಿಟರ್​ ತುಂಬ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಹೇಳಿಕೆಗಳನ್ನೇ ಬಿತ್ತರಿಸಲಾಗುತ್ತಿತ್ತು. ‘ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ, ಭಾರತದಲ್ಲಿ ಅವರ ಜೀವಕ್ಕೆ ಭಯವಿದೆ ಎಂಬಿತ್ಯಾದಿ ಹೇಳಿಕೆ ನೀಡುವ ಮೂಲಕ ವಿಶ್ವದಲ್ಲಿ ಭಾರತವನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಮಾಡುವಲ್ಲಿ ಪಾಕಿಸ್ತಾನ ಯೋಜನೆಗಳನ್ನು ರೂಪಿಸಿದೆ.

    ಮೈಕ್ರೋ ಬ್ಲಾಗ್ಗಿಂಗ್ ಫ್ಲ್ಯಾಟ್ ಫಾರಂನ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಈ ಖಾತೆಯನ್ನು ರದ್ದುಗೊಳಿಸಿರುವುದಾಗಿ ಟ್ವೀಟರ್ ತಿಳಿಸಿದೆ. ನಿಂದನೆಯ ನಡವಳಿಕೆ, ಬೇರೆ, ಬೇರೆ ಖಾತೆಗಳಿಗೆ ಬೆದರಿಕೆಯನ್ನೊಡ್ಡುವ ಸಂದೇಶಗಳು ಪತ್ತೆಯಾಗಿದ್ದರಿಂದ ಖಾತೆಯನ್ನು ಸ್ಥಗಿತಗೊಳಿಸಿರುವುದಾಗಿ ಟ್ವಿಟರ್​ ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts