More

    ಸೆಲೆಬ್ರಿಟಿಗಳಿಗೆ ಶಾಕ್​ ನೀಡಿದ ಟ್ವಿಟರ್; ರಾತ್ರೋರಾತ್ರಿ ಕಾಣೆಯಾದ ಬ್ಲೂ ಟಿಕ್​

    ನವದೆಹಲಿ: ಸುಪ್ರಸಿದ್ದ ಮೈಕ್ರೋ ಬ್ಲಾಗಿಂಗ್​ ವೆಬ್​ಸೈಟ್​ ಟ್ವಿಟರ್​ ಸೆಲೆಬ್ರಿಟಿಗಳಿಗೆ ಶಾಕ್​ ನೀಡಿದ್ದು ಅವರ ಖಾತೆಯಿಂದ ಬ್ಲೂ ಟಿಕ್ ತೆಗೆದು ಹಾಕಿದೆ.

    ಬಾಲಿವುಡ್​ ಸೆಲೆಬ್ರಿಟಿಗಳು, ಕ್ರಿಕೆಟಿಗರು, ರಾಜಕಾರಣಿಗಳ ಪ್ರೊಪೈಲ್​ನಲ್ಲಿದ್ದ ಬ್ಲೂ ಟಿಕ್​ ಅನ್ನು ತೆಗೆದು ಹಾಕಿದೆ.

    ನೂತನ ನಿಯಮ

    ಸೆಲೆಬ್ರಿಟಿಗಳ ಪ್ರೊಪೈಲ್​ನಲ್ಲಿದ್ದ ಬ್ಲೂ ಟಿಕ್​ ತೆಗೆದು ಹಾಕಲು ಮುಖ್ಯ ಕಾರಣ ಎಂದರೆ ಅದು ಟ್ವಿಟರ್​ನ ಮಾಲೀಕ ಎಲಾನ್​ ಮಸ್ಕ್​ ಜಾರಿಗೆ ತಂದಿರುವ ನೂತನ ನಿಯಮ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಶತಕೋಟಿವೀರನಾದರೂ ಶಾಸಕ ಎನ್​.ಎ. ಹ್ಯಾರಿಸ್​ ಬಳಿ ಸ್ವಂತ ಕಾರಿಲ್ಲ!

    ತಮ್ಮ ಖಾತೆಯಲ್ಲಿನ ಬ್ಲೂ ಟಿಕ್​ ಉಳಿಸಿಕೊಳ್ಳಲು ಸೆಲೆಬ್ರಿಟಿಗಳು ಸಬ್​ಸ್ಕ್ರಿಪ್ಷನ್​ ಮೊತ್ತವನ್ನು ಪಾವತಿಸಬೇಕು. ಚಂದಾದಾರಿಕೆ ಮೊತ್ತವನ್ನು ಪಾವತಿಸದೆ ಇರುವವರ ಖಾತೆಗಳಿಂದ ಟ್ವಿಟರ್​ ಬ್ಲೂ ಟಿಕ್​ ತೆಗೆದು ಹಾಕಿದೆ.

    ಮೊತ್ತ ಪಾವತಿಸಬೇಕು

    ಇನ್ನು ಟ್ವಿಟರ್​ನಲ್ಲಿ ತಮ್ಮ ಖಾತೆಯಲ್ಲಿನ ಬ್ಲೂ ಟಿಕ್ ಉಳಿಸಿಕೊಳ್ಳಲು ಸಬ್​ಸ್ಕ್ರಿಪ್ಸನ್​ ಮೊತ್ತವನ್ನು ವಿಧಿಸಿದ್ದು ಮೊಬೈಲ್​ ಬಳಕೆದಾರರಿಗೆ 650 ರೂ ಹಾಗೂ ವೆಬ್​ ಬಳಕೆದಾರರಿಗೆ 900 ರೂ ಶುಲ್ಕವನ್ನು ವಿಧಿಸಿದೆ.

    ಯಾರು ಶುಲ್ಕವನ್ನು ಪಾವತಿಸುವುದಿಲ್ಲವೋ ಅವರ ಖಾತೆಗೆ ನೀಡಿರುವ ಬ್ಲೂ ಟಿಕ್​ ಅನ್ನು ತೆಗೆದು ಹಾಕಲಾಗುವುದು ಎಂದು ಟ್ವಿಟರ್​ನ ಮಾಲೀಕ ಎಲಾನ್​ ಮಸ್ಕ್​ ಈ ಹಿಂದೆ ತಿಳಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts