More

    ಎನ್‌ಪಿಎಸ್ ಬೇಡ; ಹಳೆ ಪಿಂಚಣಿ ಯೋಜನೆಯೇ ಇರಲಿ: ಟ್ವಿಟರ್‌ನಲ್ಲಿ ಭಾರಿ ಸದ್ದು

    ಬೆಂಗಳೂರು: ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆ ಪುನರಾರಂಭಿಸಿ ಎಂದು ಒತ್ತಾಯಿಸುವ ಅಭಿಯಾನಕ್ಕೆ ದೇಶಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದೆ. ಸಾವಿರಾರು ಎನ್‌ಪಿಎಸ್ ನೌಕರರು ರಿಸ್ಟೋರ್ ಓಲ್ಡ್ ಪೆನ್ಷನ್ ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ಆರಂಭಿಸಿರುವ ಟ್ವಿಟರ್ ಅಭಿಯಾನ ಭಾರಿ ಸದ್ದು ಮಾಡುತ್ತಿದೆ.

    ಸರ್ಕಾರಿ ನೌಕರರಿಗೆ ಸಾಮಾಜಿಕ ಭದ್ರತೆ ದೃಷ್ಟಿಯಿಂದ ಸರ್ಕಾರ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಎನ್‌ಪಿಎಸ್ ಗೊಂದಲಮಯವಾಗಿದ್ದು, ಹೂಡಿದ ಹಣವೂ ವಾಪಸ್ಸಾಗುವ ಖಾತ್ರಿಯಿಲ್ಲವೆಂದು ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಆರ್‌ಬಿಐ ಮಾಜಿ ಗವರ್ನರ್ ರಘುರಾಮ ರಾಜನ್ ಕೂಡ ಟ್ವೀಟ್ ಮಾಡಿರುವುದು ಈ ಅಭಿಯಾನಕ್ಕೆ ಆನೆ ಬಲ ತಂದುಕೊಟ್ಟಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಈ ಅಭಿಯಾನವನ್ನು ಬೆಂಬಲಿಸಿ ಗಮನ ಸೆಳೆದಿದ್ದಾರೆ.

    ಎನ್‌ಪಿಎಸ್ ನೌಕರರಿಗೆ ಆರ್ಥಿಕ ಭದ್ರತೆ ಹಾಗೂ ಅವಲಂಬಿತರಿಗೆ ನೈತಿಕ ಭದ್ರತೆ ನೀಡಬೇಕೆಂದು ಕೇಂದ್ರ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲೆಂದು ಶುಕ್ರವಾರ ಅಪರಾಹ್ನ 12 ರಿಂದ ಮಧ್ಯಾಹ್ನ 3ರವರೆಗೆ ಹಮ್ಮಿಕೊಂಡಿದ್ದ ಈ ಅಭಿಯಾನವು ದೇಶದ ಟ್ರೆಂಡ್‌ನಲ್ಲಿ ಮೊದಲ ಸ್ಥಾನದಲ್ಲಿತ್ತು. ಅಭಿಯಾನದಲ್ಲಿ ಒಟ್ಟು 3.77 ಲಕ್ಷ ಟ್ವೀಟ್‌ಗಳಾಗಿದ್ದು ಗಮನಾರ್ಹ.

    ನಾಯಿ ಬೊಗಳಿತೆಂದು ತಡರಾತ್ರಿ ಆಚೆ ಬಂದರು, ಕಣ್ಣೆದುರಲ್ಲೇ ನಡೆಯಿತು ಘೋರ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts