More

    ಕರೊನಾ ಎಫೆಕ್ಟ್​: ಆಂಬ್ಯುಲೆನ್ಸ್​ನಲ್ಲಿ ಅವಳಿಯ ಹೆತ್ತಳಾ ತಾಯಿ!

    ಪಣಜಿ: ಲಾಕ್​ಡೌನ್​ ಕಥೆಗಳು ಒಂದಲ್ಲಾ… ಎರಡಲ್ಲಾ… ಅದರಲ್ಲಿಯೂ ಗರ್ಭಿಣಿಯರ ಪಾಡಂತೂ ಕೇಳುವುದೇ ಬೇಡ. ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಲೂ ಭಯ, ಹೋಗಬೇಕೆಂದರೂ ಸಾರಿಗೆ ಸಿಗುವುದು ಕಷ್ಟ. ಸಾರಿಗೆ ಸಿಕ್ಕರೂ ಸೋಂಕಿನ ಭಯದಿಂದ ಆಸ್ಪತ್ರೆಗಳಿಗೆ ಕಾಲಿಡಲು ಹೆದರಿಕೆ. ಆದರೆ ಪ್ರಸವದ ಸಮಯವನ್ನು ತಡೆಯಲು ಆದೀತೆ?

    ಅಂತೆಯೇ, ಗೋವಾದಲ್ಲಿ 108 ಉಚಿತ ಆಂಬ್ಯುಲೆನ್ಸ್​ನಲ್ಲಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪ್ರಸವ ವೇದನೆಯಿಂದ ಮಾಪುಸಾದ ಮಹಿಳೆ ಬಳಲುತ್ತಿದ್ದರು. ಮನೆಯವರೆಲ್ಲಾ ಸೇರಿ 108 ಆಂಬ್ಯುಲೆನ್ಸ್​ಗೆ ಕರೆ ಮಾಡಿದ್ದಾರೆ. ಅದು ಬಂದು ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ಹೊಟ್ಟೆ ನೋವು ತಾಳಲಾರದೇ ಮಹಿಳೆ ಕಿರುಚಿಕೊಳ್ಳುತ್ತಿದ್ದರು.

    ವೇದನೆ ಹೆಚ್ಚಾದಾಗ, ಇನ್ನೇನು ಹೆರಿಗೆ ಆಗುತ್ತದೆ ಎಂದು ಅಲ್ಲಿದ್ದ ಸ್ಟಾಫ್ ನರ್ಸ್ ನಿಲಿಮಾ ಸವಂತ್ ಅವರಿಗೆ ತಿಳಿದಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟು ಸಮಯ ಆಗ ಇರಲಿಲ್ಲ. ಇದು ತಿಳಿಯುತ್ತಲೇ ಅವರು ಅಂಬ್ಯುಲೆನ್ಸ್​ ಒಳಗೇ ಹೆರಿಗೆ ಮಾಡಿಸಿದ್ದಾರೆ. ಮುದ್ದಾದ ಅವಳಿ ಮಕ್ಕಳು ಈ ಸಂದರ್ಭದಲ್ಲಿ ಜನಿಸಿವೆ.

    ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವೈದ್ಯಕೀಯ ಸಿಬ್ಬಂದಿ ಕೆಲಸವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘108 ಆಂಬ್ಯುಲೆನ್ಸ್‌ಗಳು ಸದಾ ರಾಜ್ಯದಲ್ಲಿ ಆರೋಗ್ಯ ರಕ್ಷಣೆಯನ್ನು ಬಲಪಡಿಸುತ್ತಿವೆ. ಅವರ ಸೇವಾ ಮನೋಭಾವಕ್ಕೆ ಅಭಿನಂದನೆಗಳು ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts