More

    ಜನಸೇವೆಗೆ ಹನ್ನೆರಡು ಆಟೋ ಸನ್ನದ್ಧ

    ಗದಗ: ಕರೊನಾ 2ನೇ ಅಲೆ ನಿಯಂತ್ರಣಕ್ಕಾಗಿ ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಬೆಳಗ್ಗೆ 10 ಗಂಟೆ ನಂತರ ವ್ಯಾಪಾರ-ವಹಿವಾಟು, ವಾಹನ ಸಂಚಾರ ಸ್ತಬ್ಧವಾಗಲಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದವರಿಗೆ ನೆರವಾಗಲು ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಮತ್ತೊಮ್ಮೆ ಮುಂದಾಗಿದೆ.

    ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಘದ ಪದಾಧಿಕಾರಿಗಳು ಉಚಿತವಾಗಿ ಆಟೋ ಸೇವೆ ಆರಂಭಿಸಿದ್ದು, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸೇರಿಸಲು ಸಹಕರಿಸಲಿದ್ದಾರೆ. ಸಂಘದ ವತಿಯಿಂದ ಒಟ್ಟು 12 ಆಟೋಗಳು ಸನ್ನದ್ಧವಾಗಿವೆ.

    ‘ಅನಾರೋಗ್ಯಪೀಡಿತರಿಗೆ ತೊಂದರೆಯಾಗುವುದನ್ನು ಗಮನದಲ್ಲಿಟ್ಟುಕೊಂಡು ಸೇವೆ ಆರಂಭಿಸಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಂಘದ ಕಾರ್ಯದರ್ಶಿ ಬಸವರಾಜ ಮನಗುಂಡಿ (ಮೊ. 77609 20345) ತಿಳಿಸಿದ್ದಾರೆ.

    ಉಚಿತವಾಗಿ ಸೇವೆ ನೀಡಲು ಸಂಘದ ಅಧ್ಯಕ್ಷ ವಿಜಯ ಕಲ್ಮನಿ, ಮೋಹನ ಸಿಂಗಾಡಿ, ಮಹಾದೇವ ಛಲವಾದಿ, ಇಮ್ತಿಯಾಜ್ ಕದಡಿ, ಮಹೇಶ ನಾಗಲೇಕರ, ಮಹೇಶ ಬೆಳಧಡಿ, ರಫೀಕ್ ಲಕ್ಕುಂಡಿ, ತನ್ವೀರ್, ಚಂದ್ರ ಮುಂಡರಗಿ, ಬಸವರಾಜ ಕುರುಗೋಡ ಇತರರು ಮುಂದಾಗಿದ್ದಾರೆ.

    ಸಂಘದ ಪದಾಧಿಕಾರಿಗಳು ಕಳೆದ ಸಲ ಕರೊನಾ ಸಮಯದಲ್ಲಿ ಇಂಥ ಸೇವೆ ನೀಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

    ಸೂಕ್ತ ಸಮಯದಲ್ಲಿ ಚಿಕಿತ್ಸೆ: ನಗರದ ಒಕ್ಕಲಗೇರಿಯಲ್ಲಿ ಮಂಗಳವಾರ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಯಿತು. ಆಗ ಉಚಿತ ಅಟೋ ಸೇವೆ ಇರುವುದನ್ನು ಗಮನಿಸಿ ಸಂಬಂಧಿಸಿದವರಿಗೆ ಕರೆ ಮಾಡಿ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದರು. ವಿಷಯ ತಿಳಿದ ಕೂಡಲೆ ಸಂಘದ ಪದಾಧಿಕಾರಿಗಳು ಒಕ್ಕಲಗೇರಿಗೆ ತೆರಳಿ ವ್ಯಕ್ತಿಯನ್ನು ಮುಂಡರಗಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸೇರಿಸಲು ನೆರವಾದರು. ರೋಗಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿದ್ದು, ಅವರ ಅರೋಗ್ಯ ಸುಧಾರಿಸಿದೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಕ್ಲಿಷ್ಟಕರ ಸಂದರ್ಭದಲ್ಲಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಇದಕ್ಕಿಂತ ಸಂತೃಪ್ತಿ ಬೇರೊಂದಿಲ್ಲ ಎನ್ನುತ್ತಾರೆ ಆಟೋ ಚಾಲಕರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts