More

    ಹುಟ್ಟಿಸಿದ್ದು ತಾಯಿಯೇ ಆದರೂ ಲಿಂಗ ನೀಡುವುದು ಮರಳು! ಆಮೆಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…

    (ಮುಂದುವರಿದ ಭಾಗ..)
    ಹುಟ್ಟಿಸಿದ್ದು ತಾಯಿಯೇ ಆದರೂ ಲಿಂಗ ನೀಡುವುದು ಮರಳು! ಆಮೆಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು...ಒಂದೇ ದಿವಸ ಅಂದಾಜು ಒಂದು ಲಕ್ಷದ ಎಂಬತ್ತು ಸಾವಿರ ಕಡಲಾಮೆಗಳು ಬಂದು ಸಮುದ್ರದ ದಡವನ್ನು ತಲುಪುತ್ತವೆ. ಗರ್ಭವತಿಯಾದ ಆಮೆ ರಾತ್ರಿಯ ಹೊತ್ತು ದಡಕ್ಕೆ ಬಂದು ಮರಳಿನ ವಾಸನೆ ಮೂಲಕ ಪ್ರಶಸ್ತವಾದ ಉಷ್ಣಾಂಶವಿರುವ ಸ್ಥಳವನ್ನು ಹುಡುಕಿ, ಮೊದಲು ಮುಂದಿನ ಕಾಲಿನಿಂದ ಮರಳನ್ನು ಕೊರೆದು ನಂತರ ಹಿಂದಿನ ಕಾಲಿನಿಂದ ಗುಂಡಿಯನ್ನು ತೋಡಿ ಮೊಟ್ಟೆ ಇಟ್ಟು ಮತ್ತೆ ಮರಳು ಮುಚ್ಚುತ್ತದೆ. ನಂತರ ತನ್ನ ಮುಂದಿನ ಜೀವನ ನಡೆಸಲು ಮತ್ತೆ ಸಮುದ್ರಕ್ಕೆ ತೆರಳುತ್ತದೆ. ಅಲ್ಲಿಗೆ ಅವಳ ತಾಯ್ತನದ ಜವಾಬ್ದಾರಿ ಮುಗಿಯುತ್ತದೆ. ಆ ಆಮೆ ಹಿಂದಿರುಗಿ ನೋಡುವುದಿಲ್ಲ. ಇಲ್ಲಿ ಗಂಡಿಗೆ ತಂದೆಯ ಜವಾಬ್ದಾರಿ ಇಲ್ಲ, ಅದು ಯಾವುದೇ ರೀತಿಯಲ್ಲೂ ಹೆಂಡತಿಗೆ ಸಹಾಯ ಮಾಡುವುದಿಲ್ಲ. ಸಂತಾನಕ್ರಿಯೆ ಮಾಡುವುದಷ್ಟೆ ಅದರ ಕೆಲಸ. ಇವುಗಳು ಎರಡು ಮೂರು ವರ್ಷಕ್ಕೊಮ್ಮೆ ಗರ್ಭಧರಿಸಿ ತಮ್ಮ ಜೀವನ ಪರ್ಯಂತ ಅಂದಾಜು ಹತ್ತರಿಂದ ಹನ್ನೆರಡು ಬಾರಿ ಮೊಟ್ಟೆ ಇಡುತ್ತವೆ.

    ಯಾವುದೇ ಒಂದು ಸ್ತನಿಯಲ್ಲಿ ಹುಟ್ಟುವ ಮರಿ ಗಂಡು ಅಥವಾ ಹೆಣ್ಣು ಎನ್ನುವುದು ಅವುಗಳ ವರ್ಣತಂತುಗಳಿಂದ (ಕ್ರೋಮೋಸೋಮ್ಸ್) ಗರ್ಭದಲ್ಲಿಯೇ ನಿರ್ಧಾರವಾಗುತ್ತದೆ. ಆದರೆ, ಬಹುತೇಕ ಸರೀಸೃಪಗಳ ಅಂಡಾಣು ಅಥವಾ ವೀರ್ಯಾಣುಗಳಲ್ಲಿ ವರ್ಣತಂತುಗಳು ಇರುವುದಿಲ್ಲ. ಆದರೆ, ಆಮೆಗಳಲ್ಲಿ ವರ್ಣತಂತುಗಳು ಇರುವ ಮತ್ತು ಇಲ್ಲದೇ ಇರುವ ಪ್ರತ್ಯೇಕ ಆಮೆಗಳಿವೆ.

    ಸಮುದ್ರದ ಕಡಲಿನಲ್ಲಿ ಮೊಟ್ಟೆಯಿಟ್ಟ ಕಡಲಾಮೆಗಳು ಗೂಡನ್ನು ಮರಳಿನಿಂದ ಮುಚ್ಚಿದ ನಂತರ ಆ ಗೂಡಿನಲ್ಲಿ ಉದ್ಭವವಾಗುವ ಉಷ್ಣಾಂಶವು, ಹುಟ್ಟುವ ಮರಿ ಗಂಡೋ ಅಥವ ಹೆಣ್ಣೋ ಎಂದು ನಿರ್ಧರಿಸುತ್ತದೆ. ಅಂದಾಜು 300 ಡಿ.ಸೆ.ಗೂ ಹೆಚ್ಚು ಉಷ್ಣಾಂಶವಿದ್ದರೆ ಹೆಣ್ಣು ಮರಿಗಳು, 300ಡಿ.ಸೆ.ಗೂ ಕಡಿಮೆ ಉಷ್ಣಾಂಶವಿದ್ದರೆ ಗಂಡು ಮರಿಗಳು ಹುಟ್ಟುತ್ತವೆ. ಆದರೆ, ಅಲ್ಲಿನ ಉಷ್ಣಾಂಶವು ಅಂದಿನ ಬಿಸಿಲಿನ ತಾಪ, ಮಳೆಯ ಪ್ರಮಾಣ, ಗಾಳಿ ಬೀಸುವುದು, ಮರಳಿನ ರೀತಿ, ಮೋಡದ ನೆರಳು, ಮರಗಳ ನೆರಳು ಹೀಗೆ ಹಲವು ಕಾರಣಗಳಿಂದ ವ್ಯತ್ಯಾಸವಾಗುತ್ತದೆ. ಆದ್ದರಿಂದ ಕೆಲವು ಉಪಜಾತಿಗಳಲ್ಲಿ ಗಂಡು ಹೆಚ್ಚಿರುತ್ತವೆ, ಕೆಲವು ಜಾತಿಗಳಲ್ಲಿ ಹೆಣ್ಣು ಜಾಸ್ತಿಯಿರುತ್ತವೆ. ಆದರೆ, ಸರಾಸರಿಯಾಗಿ ಲಿಂಗ ಸಮಾನತೆಯಿರುತ್ತದೆ.

    ಆಮೆಗೆ ಹಲ್ಲೇ ಇರಲ್ಲ! ಅದು ಊಟ ಮಾಡೋದು ಹೇಗೆ ಗೊತ್ತಾ?

    VIDEO| ‘ಮನೆಗೆ ಬಾ ನೋಡ್ಕೋತೀನಿ’ ಮುಂದುವರಿದ ಭಾಗ ರಿಲೀಸ್​! ಮನೆಗೆ ಬಂದ್ಮೇಲೆ ಹೀಗೆ ಮಾಡ್ತಾರಂತೆ ಜೆನೆಲಿಯಾ

    ಈ ಹಂದಿ ಮಾಡಿದ ಪೇಂಟಿಂಗ್​ ಬೆಲೆ ಎಷ್ಟು ಗೊತ್ತಾ? ₹50 ಲಕ್ಷಕ್ಕೂ ಹೆಚ್ಚು ದುಡಿಮೆ ಮಾಡಿದೆಯಂತೆ ಈ​ ಆರ್ಟಿಸ್ಟ್​ ಹಂದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts