More

    ತುಂಗಭದ್ರಾ ನದಿ ನೀರಿನ ಮಟ್ಟ ಏರಿಕೆ

    ಗುತ್ತಲ: ಸತತ ಮಳೆ ಹಾಗೂ ಗಾಜನೂರ ಭದ್ರಾ ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನೀರಿನ ಮಟ್ಟ ಏರುತ್ತಿದೆ.

    ಗುತ್ತಲ ಸಮೀಪದ ಹರಳಹಳ್ಳಿ ಬಳಿ ಇರುವ ತುಂಗಭದ್ರಾ ಜಲಮಾಪನ ಕೇಂದ್ರದ ಬಳಿ ಭಾನುವಾರ ಬೆಳಗ್ಗೆ 11ಕ್ಕೆ ತುಂಗಭದ್ರಾ ನದಿಯ ನೀರಿನ ಮಟ್ಟ 3.53 ಮೀ ದಾಖಲಾಗಿದೆ. ಪ್ರತಿ ಗಂಟೆಗೆ 15 ಸೆ.ಮೀ. ಏರುತ್ತಿದ್ದು, ಇದೇ ರೀತಿಯಲ್ಲಿ ನೀರು ಏರಿಕೆಯಾದರೆ ಭಾನುವಾರ ರಾತ್ರಿ ವೇಳೆಗೆ 4.5 ಮೀ-5 ಮೀ ಏರಿಕೆಯಾಗುವ ಲಕ್ಷಣಗಳಿವೆ. ಈ ಜಲ ಮಾಪನ ಕೇಂದ್ರದ ಬಳಿ ನದಿಯ ನೀರಿನ ಮಟ್ಟ 6 ಮೀ ತಲುಪಿದರೆ ಅದು ಅಪಾಯದ ಮಟ್ಟ. 6 ಮೀ ಗಿಂತ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ನದಿ ಪಾತ್ರಗಳ ಗ್ರಾಮದಲ್ಲಿ ಪ್ರವಾಹ ಬರುವುದು, ಜಮೀನುಗಳು ಜಲಾವೃತ ಆಗುತ್ತವೆ. ಇದೇ ರೀತಿಯಲ್ಲಿ ನದಿಯ ನೀರಿನ ಮಟ್ಟ ಸತತವಾಗಿ ಏರುತ್ತಿದ್ದರೆ ಮಂಗಳವಾರ ಇಲ್ಲವೇ ಬುಧವಾರದ ವೇಳೆಗೆ ಅಪಾಯ ಮಟ್ಟವನ್ನು ತಲುಪುವ ಸಾಧ್ಯತೆ ಇದೆ. ಈ ಬಗ್ಗೆ ಜಿಲ್ಲಾಡಳಿತ ಪ್ರವಾಹ ಸ್ಥಿತಿಯನ್ನು ಎದುರಿಸಲು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts