More

    ತ್ಯಾಗ ಮಾಡಿ ಬಂದ್ವಿ ಅನ್ನೋದು ಸರಿಯಲ್ಲ: ಬಾಂಬೆ ಟೀಂಗೆ ಸಚಿವ ಮುನಿರತ್ನ ಟಾಂಗ್​..!

    ತುಮಕೂರು: ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಾಂಬೆ ಟೀಂನ ಕೆಲವರಿಗೆ ಸಚಿವ ಮುನಿರತ್ನ ಟಾಂಗ್​ ನೀಡಿದ್ದಾರೆ. ರಾಜೀನಾಮೆ ನೀಡಿ ತ್ಯಾಗ ಮಾಡಿದ್ದೀವಿ ಅಂತಾ ಬೇಡಿಕೆ ಇಡುವುದು ಸರಿಯಲ್ಲ ಎಂದು ಮುನಿರತ್ನ ಅಭಿಪ್ರಾಯಪಟ್ಟಿದ್ದಾರೆ.

    ತುಮಕೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಖಾತೆ ತೃಪ್ತಿ ತಂದಿದೆ. ಆದ್ರೂ, ಇನ್ನೊಂದು ಪಕ್ಷದಿಂದ ಈ ಪಕ್ಷಕ್ಕೆ ಬಂದಿದ್ದೀವಿ. ಪಕ್ಷಕ್ಕೆ ನಮ್ಮ ಕೊಡುಗೆ ಏನೂ ಇಲ್ಲ. ರಾಜೀನಾಮೆ ಕೊಟ್ಟು ಪಕ್ಷಕ್ಕೆ ಬಂದಿದ್ದೀವಿ. ಶಾಸಕ ಸ್ಥಾನ ಸೇರಿ ಎಲ್ಲವನ್ನು ಕೊಟ್ಟಿದ್ದಾರೆ. ಪಕ್ಷದಲ್ಲಿ ಒಬ್ಬರಾಗಿ ಪಕ್ಷಕ್ಕೆ ಸೇವೆ ಮಾಡೋದನ್ನು ಕಲೀಬೇಕು. ಪಕ್ಷಕ್ಕೆ ಸೇವೆ ಮಾಡದೆ, ತ್ಯಾಗ ಮಾಡಿದ್ವಿ, ಬಂದ್ವಿ ಅಂದ್ರೆ ಅದು ನಂಗೆ ಸರಿ ಕಾಣ್ತಿಲ್ಲ ಎನ್ನುತ್ತಾ ಮಾತಿನಲ್ಲೇ ತೀಕ್ಷವಾಗಿ ಸ್ನೇಹಿತರಿಗೆ ಮುನಿರತ್ನ ಟಾಂಗ್ ನೀಡಿದರು.

    ನಾವು ಶಾಸಕರಾಗಿದ್ದೇವೆ. ಪಕ್ಷ ನಮ್ಮನ್ನ ಗುರುತಿಸಿದೆ. ಪಕ್ಷಕ್ಕೆ ಕೆಲಸ ಮಾಡಲಿ, ಅಮೇಲೆ ಖಾತೆ ಕೇಳಲಿ. ಎಷ್ಟು ದಿನ ನಮ್ಮಿಂದ ನಮ್ಮಿಂದ ಎನ್ನಬೇಕು. ಅದಕ್ಕೆ ಇತಿಮಿತಿ ಇರಬೇಕು. ಅದನ್ನೆ ಮುಂದುವರಿಸಿ, ಅದನ್ನೇ ಕೊಡಿ, ಅದೇ ಬೇಕು ಅಂದ್ರೆ ಸರಿಬರಲ್ಲ. ಪಕ್ಷಕ್ಕೆ ಕೆಲಸ ಮಾಡಿ ಎಂದು ಮುನಿರತ್ನ ಮಾತಿನಲ್ಲೇ ತಿವಿದರು.

    ಎರಡು ವರ್ಷ ಏನೂ ಇಲ್ಲದೆ, ಪಕ್ಷದ ಕೆಲಸ ಮಾಡಿಕೊಂಡಿದ್ದೆ. ಪಕ್ಷ ನನ್ನನ್ನು ಗುರುತಿಸಿದೆ. ತಾಳ್ಮೆಯಿಂದ ಇರಬೇಕು. ಎಲ್ಲಾ ಇವತ್ತೇ ಆಗಬೇಕು ಅಂದ್ರೆ ನೀವು ಬಂದಿರುವ ಉದ್ದೇಶ ಏನು? ಇವತ್ತು ಏನ್ ಸಿಗುತ್ತೆ ಅದನ್ನೆಲ್ಲಾ ಅನುಭವಿಸಿ ಮತ್ತೆ ಹೋಗಬೇಕು ಅನ್ನೋ ಉದ್ದೇಶನಾ? 105 ಜನ ಇಲ್ಲದಿದ್ದರೆ ನಾವು ಮಂತ್ರಿಗಳಾಗುತ್ತಿದ್ದವಾ? ಅವರು 105 ಇದ್ದಕ್ಕೆ ಅಲ್ವಾ ನಾವು ಮಂತ್ರಿಗಳಾಗಿದ್ದು, ನಾವು ಬಿಟ್ಟಿದ್ದಿವಿ ಅವರು ಶಾಸಕ ಸ್ಥಾನ ಕೊಟ್ಟಿದ್ದಾರಲ್ಲ? ಯಾಕೆ ದೊಡ್ಡ ದೊಡ್ಡ ಖಾತೆ ಬೇಕು ಅಂತ ಕೇಳೋದು. ನನ್ನ ಪ್ರಕಾರ ಅದು ತಪ್ಪು ಎಂದರು.

    ಸಿಎಂ ಬದಲಾವಣೆಯಿಂದ ಯಾವ ಅಭದ್ರತೆಯೂ ಇಲ್ಲ. ನಾನು ಬಿಜೆಪಿಯ ಒಬ್ಬ ಸದಸ್ಯನಾಗಿ, ಕಾರ್ಯಕರ್ತನಾಗಿ ಇಲ್ಲಿದ್ದೀನಿ. ಖಾತೆ ಕೊಟ್ರೂ ಹಿಂಗೆ ಇರ್ತೇನೆ, ಕೊಡ್ಲಿಲ್ಲ ಅಂದ್ರು ಹಿಂಗೆ ಇರ್ತೇನೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಶ್ರೀರಾಮುಲು ಮಿಸ್ಸಿಂಗ್‌! ಹುಟ್ಟುಹಬ್ಬವಿದ್ದರೂ ಅಲ್ಲೂ ಇಲ್ಲ, ಇಲ್ಲೂ ಇಲ್ಲ- ಎಲ್ಲಿ ಹೋದರು?

    ‘ನಮ್ಮ ಮೆಟ್ರೋ’ ಪ್ರಯಾಣಿಕರ ಗಮನಕ್ಕೆ, 2 ದಿನ ಬಂದ್ ಆಗಲಿದೆ ಈ ಮಾರ್ಗದ ಸಂಚಾರ

    ಸೆರೆ ಹಿಡಿದು 3 ದಿನವಾದ್ರೂ ಈ ಮಂಗಗಳಿಗೆ ಊಟ ಕೊಟ್ಟಿರಲಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts