More

    ಪಕ್ಷಾಂತರ ಗುಮ್ಮ ಮತ್ತೆ ಬಂತು! ಜೆಡಿಎಸ್​ ತೊರೆದು ‘ಕೈ’ ಹಿಡಿಯಲು ಕ್ಷಣಗಣನೆ

    ತುಮಕೂರು: ಜಿಲ್ಲೆಯಲ್ಲಿ ಪಕ್ಷಾಂತರ ಪರ್ವಕ್ಕೆ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್​ ಬಾಬು ಶನಿವಾರ(ಸೆ.18) ಮುನ್ನುಡಿ ಬರೆಯುತ್ತಿದ್ದಾರೆ!

    ವಿಧಾನಪರಿಷತ್​ಗೆ ನಡೆದಿದ್ದ ಆಗ್ನೇಯ ಪದವೀಧರ ಉಪಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಮೇಶ್ ಬಾಬು ಗೆಲುವು ಸಾಧಿಸಿದ್ದರು. ಜೆಡಿಎಸ್​ ಪಕ್ಷದ ವಕ್ತಾರ ಹುದ್ದೆಯನ್ನೂ ನಿಭಾಯಿಸಿದ್ದರು. ಸಮ್ಮಿಶ್ರ ಸರ್ಕಾರ ಬಂದ ಬಳಿಕ ಪಕ್ಷದಲ್ಲಿ ರಮೇಶ್ ಬಾಬುರನ್ನು ಕಡೆಗಣಿಸಲಾಯಿತು. ಲೋಕಸಭಾ ಚುನಾವಣೆಯಲ್ಲೂ ದೇವೇಗೌಡರ ಪರ ಕ್ಷೇತ್ರ ಸುತ್ತಿದ್ದ ರಮೇಶ್ ಬಾಬುಗೆ ಪಕ್ಷದೊಳಗೆ ಪ್ರಾಮುಖ್ಯತೆ ಕಡಿಮೆ ಆಗಿ ಮೂಲೆಗುಂಪು ಮಾಡಲಾಯಿತು. ಇದರಿಂದ ಬೇಸತ್ತ ರಮೇಶ್​ಬಾಬು, ಶನಿವಾರ ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ‘ಕೈ’ ಹಿಡಿಯಲಿದ್ದಾರೆ. ಅಷ್ಟೇ ಅಲ್ಲ, ಗುಬ್ಬಿ ಶಾಸಕರ ನೇತೃತ್ವದಲ್ಲಿ ಮತ್ತೆ ಮೂವರು ಜೆಡಿಎಸ್​ ಮುಖಂಡರು ಪಕ್ಷ ತೊರೆಯಲಿದ್ದಾರೆ! ಇದನ್ನೂ ಓದಿರಿ ಕಟ್ಟಿದ್ದು ಕೇವಲ 12 ರೂಪಾಯಿ, ಬಂದದ್ದು ಬರೋಬ್ಬರಿ 2 ಲಕ್ಷ ರೂಪಾಯಿ!

    ಪಕ್ಷಾಂತರ ಗುಮ್ಮ ಮತ್ತೆ ಬಂತು! ಜೆಡಿಎಸ್​ ತೊರೆದು 'ಕೈ' ಹಿಡಿಯಲು ಕ್ಷಣಗಣನೆ
    ರಮೇಶ್​ಬಾಬು

    ಬೆಮೆಲ್, ವಾಸು, ಸುರೇಶ್ ಬಾಬು ಕಾಂಗ್ರೆಸ್​ಗೆ?: ತುಮಕೂರು ಜಿಲ್ಲೆಯಲ್ಲಿ ಬಹುತೇಕ ಜೆಡಿಎಸ್ ಮುಖಂಡರು ಪಕ್ಷದಿಂದ‌ ಒಂದು ಕಾಲು ಹೊರಗೆ ತೆಗೆದಿದ್ದು, ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ.

    ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಸಮ್ಮುಖದಲ್ಲಿ ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಕೂಡ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ. ಮುಂದಿನ ವಿಧಾನಸಭೆ ಚುನಾವಣೆಗೂ ಮುನ್ನ ಈ ಮೂವರು ‘ಕೈ’ ಹಿಡಿಯಲಿದ್ದಾರೆ.

    ಪರಿಷತ್​ಗೆ ಅಭ್ಯರ್ಥಿ?: ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಗಿ ರಮೇಶ್ ಬಾಬು ಕಾಂಗ್ರೆಸ್​ನಿಂದ ಸ್ಪರ್ಧಿಸುವುದು ಖಚಿತವಾಗಿದೆ. ಪರಿಷತ್ ಚುನಾವಣೆ ಬಗ್ಗೆ ಕಾಂಗ್ರೆಸ್​ನಲ್ಲಿ ಯಾರೂ ಆಸಕ್ತಿ ತೋರದಿರುವುದು ಅವರ ಹಾದಿ ಸುಗಮವಾಗಲಿದೆ.

    ರಾಜಕಾರಣಿಗಳ ಕೊರಳಿಗೆ ಡ್ರಗ್ಸ್​ ಉರುಳು: ಬಿಜೆಪಿ ಸಂಸದರ ಭಾವಿ ಅಳಿಯನಿಗೆ ಸಿಸಿಬಿ ನೋಟಿಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts