More

    ಕ್ಷಯರೋಗಕ್ಕೆ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಅವಶ್ಯಕ

    ಹರಿಹರ: ಪ್ರಾಥಮಿಕ ಹಂತದಲ್ಲಿಯೇ ಕ್ಷಯಕ್ಕೆ ಚಿಕಿತ್ಸೆ ಪಡೆದರೆ ಸಾವಿನ ದವಡೆಯಿಂದ ಪಾರಾಗಬಹುದು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಗಂಗಾಧರ್ ಹೇಳಿದರು.

    ನಗರದ ಎ.ಕೆ ಕಾಲನಿಯಲ್ಲಿ ಆರೋಗ್ಯ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಕ್ರಿಯ ಕ್ಷಯ ಪತ್ತೆ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ರಾಜ್ಯಾದ್ಯಂತ ಜು.17ರಿಂದ ಆ.2ರವರೆಗೆ ಸಕ್ರೀಯ ಕ್ಷಯ ಪತ್ತೆ ಅಭಿಯಾನ ಹಮ್ಮಿಕೊಂಡಿದ್ದು ಇದರ ಭಾಗವಾಗಿ ಹರಿಹರ ತಾಲೂಕಿನಲ್ಲಿ 67 ತಂಡಗಳು ಮನೆ ಮನೆಗೆ ತೆರಳಿ ಕ್ಷಯ ಲಕ್ಷಣ ಪತ್ತೆ ಹಚ್ಚುವ ಕಾರ್ಯ ಮಾಡುತ್ತಿವೆ ಎಂದರು.

    ಜಿಲ್ಲೆಯಲ್ಲಿ ಪ್ರಸ್ತುತ 1200ಕ್ಕೂ ಹೆಚ್ಚು ಹಾಗೂ ಹರಿಹರ ತಾಲೂಕಿನಲ್ಲಿ 147 ಪ್ರಕರಣ ಕಂಡು ಬಂದಿವೆ. ಅವರಿಗೆ ನಿರಂತರ ಚಿಕಿತ್ಸೆ ನೀಡಿದ ಪರಿಣಾಮ ಶೇ.80ರ ಅನುಪಾತದಲ್ಲಿ ಗುಣಮುಖರಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

    ಕ್ಷಯ ಬಾಧಿತ ವ್ಯಕ್ತಿಗೆ 2 ವರ್ಷ ಚಿಕಿತ್ಸೆ ನೀಡಲಾಗುತ್ತದೆ. 2 ವಾರಕ್ಕಿಂತ ಹೆಚ್ಚು ಜ್ವರ, ಕೆಮ್ಮು, ವಾಂತಿಯಲ್ಲಿ ರಕ್ತ, ತೂಕ ಕಡಿಮೆಯಾಗುವುದು ಹಾಗೂ ಹಸಿವಾಗದಿರುವುದು ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿ ಎಂದರು.

    ಈ ವೇಳೆ ಜಿಲ್ಲಾ ಮೇಲ್ವಿಚಾರಕ ಎಂ.ವಿ.ಹೊರಕೇರಿ, ತಾಲೂಕು ಮೇಲ್ವಿಚಾರಕ ಎಂ.ಉಮ್ಮಣ್ಣ, ಆರೋಗ್ಯ ಇಲಾಖೆಯ ಮಂಜುನಾಥ್, ಶರೀಫ್, ಆರ್.ಸತೀಶ್, ಆಶಾ ಕಾರ್ಯಕರ್ತೆಯರಾದ ಶ್ರುತಿ, ಶಾಂತಾ ಹಾಗೂ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts