More

    ಕರೊನಾ ಗೆದ್ದವರಿಗೆ ಕ್ಷಯರೋಗದ ಆತಂಕ? ಎಲ್ಲರೂ ಟಿಬಿ ಟೆಸ್ಟ್ ಮಾಡಿಸಿಕೊಳ್ಳಿ ಎಂದ ಆರೋಗ್ಯ ಇಲಾಖೆ

    ನವದೆಹಲಿ: ಭಾರತದಲ್ಲಿ ಕರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದೆ. ಆದರೆ ಕರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸುತ್ತಿರುವುದು ಆತಂಕ ಹುಟ್ಟಿಸಿದೆ. ಅದರಲ್ಲೂ ಸೋಂಕು ಗೆದ್ದ ಅನೇಕರಲ್ಲಿ ಕ್ಷಯ ರೋಗ ಕಾಣಿಸಿಕೊಂಡಿದೆ ಎನ್ನುವ ವರದಿ ಬಿತ್ತರವಾಗಿದ್ದು, ದೇಶದ ಜನರು ಭಯಪಡುವಂತಾಗಿದೆ.

    ಈ ಕುರಿತಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಕರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾದವರೆಲ್ಲರೂ ಕ್ಷಯ ರೋಗದ ಪರೀಕ್ಷೆ ಮಾಡಿಸಿಕೊಳ್ಳಿ. ಹಾಗೂ ಈಗಾಗಲೇ ಕ್ಷಯ ರೋಗದಿಂದ ಬಳಲುತ್ತಿರುವವರು ಕರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದೆ.

    ಅದಾಗ್ಯೂ, ಕರೊನಾ ಮತ್ತು ಕ್ಷಯ ರೋಗದ ನಡುವೆ ನೇರ ಸಂಬಂಧ ಇರುವುದಕ್ಕೆ ಇದುವರೆಗೆ ಯಾವುದೇ ಪುರಾವೆ ಲಭಿಸಿಲ್ಲ. ಮುನ್ನೆಚ್ಚರಿಕೆಯಾಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಚಿವಾಲಯ ಹೇಳಿದೆ. ಈ ಎರಡೂ ರೋಗಗಳು ಶ್ವಾಸಕೋಶಕ್ಕೆ ಸಂಬಂಧ ಪಟ್ಟಿರುವುದಾಗಿರುವುರಿಂದ ಪರಿಣಾಮ ಉಂಟಾಗುವ ಸಾಧ್ಯತೆ ಇದ್ದರೂ ಇರಬಹುದು ಎನ್ನಲಾಗಿದೆ. (ಏಜೆನ್ಸೀಸ್)

    ರಾಜ್ಯದಲ್ಲಿಂದು 1,869 ಕರೊನಾ ಪ್ರಕರಣ ದೃಢ; ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?

    ಕಾಫಿ ಪ್ರಿಯರಿಗೆ ಸಿಹಿ ಸುದ್ದಿ: ಕರೊನಾ ಸೋಂಕಿನಿಂದ ನಿಮಗಿದೆಯಂತೆ ಕೊಂಚ ರಿಯಾಯಿತಿ!

    ಇನ್​ಸ್ಟಾಗ್ರಾಂನಲ್ಲಿ 95 ಲಕ್ಷ ಹಿಂಬಾಲಕರಿರುವ ಐಶ್ವರ್ಯಾ ಫಾಲೋ ಮಾಡೋದು ಒಬ್ಬರನ್ನು ಮಾತ್ರ! ಯಾರು ಆ ಲಕ್ಕಿ ಮ್ಯಾನ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts