More

    ಮಂತ್ರಾಲಯದಲ್ಲಿ ರಾಯರ ವರ್ಧಂತಿ ಸಂಭ್ರಮ

    ರಾಯಚೂರು: ತಿರುಮಲ ತಿರುಪತಿ ದೇವಸ್ಥಾನ ಮತ್ತು ಶ್ರೀ ರಾಘವೇಂದ್ರಸ್ವಾಮಿ ಮಠದ ನಡುವೆ ಅವಿನಾಭಾವ ಸಂಬಂಧವಿದ್ದು, ಸನಾತನ ಹಿಂದು ಧರ್ಮ ಕಾಪಾಡುವ ನಿಟ್ಟಿನಲ್ಲಿ ತಿರುಪತಿ ಆಧಾರ ಸ್ತಂಭವಾಗಿದೆ. ರಾಯರ ಮಠವೂ ಧರ್ಮ ರಕ್ಷಣೆ ಪ್ರಚಾರಕ್ಕಾಗಿರುವ ಇರುವ ಸನ್ನಿಧಾನವಾಗಿದೆ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಹೇಳಿದರು.

    ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 428ನೇ ವರ್ಧಂತಿ ಉತ್ಸವ ನಿಮಿತ್ತ ಟಿಟಿಡಿಯಿಂದ ತರಲಾದ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಣೆ ಮಾಡಿದ ನಂತರ ಭಾನುವಾರ ಆಶೀರ್ವಚನ ನೀಡಿದರು. ವೆಂಕಟರಮಣನ ಅಂತರಂಗದ ಭಕ್ತರಾದ ರಾಯರಿಗೆ ಆರಾಧನೆ ಮತ್ತು ವರ್ಧಂತಿ ಸಂದರ್ಭ ಶೇಷವಸ್ತ್ರ ತರುವ ಮೂಲಕ ಸಂಪ್ರದಾಯವನ್ನು ಹಲವು ವರ್ಷಗಳಿಂದ ನಡೆಸುತ್ತಾ ಬರಲಾಗುತ್ತಿದೆ ಎಂದರು.

    ತಿರುಪತಿಗೆ ಹೋದರೆ ವೆಂಕಟರಮಣನ ದರ್ಶನ ಮಾತ್ರ ಸಿಗುತ್ತದೆ. ಮಂತ್ರಾಲಯಕ್ಕೆ ಆಗಮಿಸಿದರೆ ರಾಯರ ದರ್ಶನ ಭಾಗ್ಯ ದೊರೆಯುತ್ತದೆ. ಆದರೆ ವರ್ಧಂತಿ, ಆರಾಧನೆ ಸಂದರ್ಭದಲ್ಲಿ ವೆಂಕಟರಮಣನಿಗೆ ತೊಡಿಸಲಾದ ಶೇಷವಸ್ತ್ರ ಮಂತ್ರಾಲಯಕ್ಕೆ ಬಂದಾಗ ಭಕ್ತರಿಗೆ ಇಬ್ಬರ ದರ್ಶನ ಭಾಗ್ಯ ದೊರೆಯುತ್ತದೆ ಎಂದು ಶ್ರೀಗಳು ಹೇಳಿದರು.

    ರಾಯರ ವರ್ಧಂತಿ ಮಹೋತ್ಸವ ನಿಮಿತ್ತ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಹಾಗೂ ಅಲಂಕಾರ ನಡೆಸಲಾಯಿತು. ನಂತರ ಶ್ರೀಮಠದ ಪ್ರಾಕಾರದಲ್ಲಿ ಸ್ವರ್ಣ ರಥೋತ್ಸವ ನೆರವೇರಿಸಿದ ನಂತರ ಶ್ರೀಗಳು ಮೂಲ ರಾಮದೇವರ ಪೂಜೆ ನೆರವೇರಿಸಿ ಭಕ್ತರಿಗೆ ಫಲ ಮಂತ್ರಾಕ್ಷಣೆ ನೀಡಿ ಆಶೀರ್ವದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts