More

    ವಿದ್ಯುತ್​ ಶಾಕ್​ನಿಂದ ಹಸು ಸಾವು: ರೈತನಿಗೆ 90 ಸಾವಿರ ರೂ. ಪರಿಹಾರ ನೀಡಲು ನಿರ್ದೇಶನ

    ಖಮ್ಮಮ್​: ವಿದ್ಯುತ್​ ಶಾಕ್​ನಿಂದ ಹಸು ಕಳೆದುಕೊಂಡ ರೈತನಿಗೆ ಪರಿಹಾರವಾಗಿ 90 ಸಾವಿರ ರೂಪಾಯಿ ನೀಡುವಂತೆ ಗ್ರಾಹಕ ವಿವಾದ ಪರಿಹಾರ ಆಯೋಗವು ತೆಲಂಗಾಣ ರಾಜ್ಯ ಉತ್ತರ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (ಟಿಎಸ್​​​ಎನ್​ಪಿಡಿಸಿಎಲ್​)ಗೆ ನಿರ್ದೇಶಿಸಿದೆ.

    ಖಮ್ಮಮ್​​ ಜಿಲ್ಲೆಯ ಚಿಂತಕನಿ ಮಂಡಲದ ರೆಪಲ್ಲಿ ವಾಡ್ಡ ಗ್ರಾಮದ ರೈತ ವೆಂಕಟೇಶ್ವರಲು, ಮೇ 19ರಂದು ತನ್ನ ಮೂರು ಹಸುಗಳು ಮತ್ತು ಐದು ಎಮ್ಮೆಗಳನ್ನು ಮೈದಾನಕ್ಕೆ ಮೇಯಿಸಲು ಕರೆದೊಯ್ದಿದ್ದರು. ಇವುಗಳಲ್ಲಿ ಒಂದು ಹಸು ವಿದ್ಯುತ್​ ತಂತಿಗೆ ಸಿಲುಕಿ ಶಾಕ್​ನಿಂದ ಮೃತಪಟ್ಟಿತ್ತು.

    ಇದಕ್ಕೂ ಮುನ್ನ ವಿದ್ಯುತ್ ತಂತಿಗಳು ಒಂದು ಅಡಿ ಎತ್ತರಕ್ಕೆ ನೇತಾಡುತ್ತಿವೆ. ತಕ್ಷಣ ವಿದ್ಯುತ್​ ಸ್ಥಗಿತಗೊಳಿಸುವಂತೆ ಟಿಎಸ್​​​ಎನ್​ಪಿಡಿಸಿಎಲ್ ಗೆ ವೆಂಕಟೇಶ್ವರಲು ಮನವಿ ಮಾಡಿದ್ದ. ಆದರೆ, ವಿದ್ಯುತ್​ ಸ್ಥಗಿತಗೊಂಡಿರಲಿಲ್ಲ. ಇದಾದ ಬಳಿಕ ಚಿಂತಕನಿ ಪೊಲೀಸ್​ ಠಾಣೆಗೆ ರೈತ ದೂರು ನೀಡಿದ್ದ. ಪ್ರಕರಣವು ದಾಖಲಾಗಿತ್ತು. ಮೃತಪಟ್ಟು ಹಸು ವಿದ್ಯುತ್​ ಶಾಕ್​ನಿಂದ ಸಾವಿಗೀಡಾರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿತ್ತು.

    ಹಸುವಿನ ಬೆಲೆ ಸುಮಾರು 50 ಸಾವಿರ ಇತ್ತು. ಅಲ್ಲದೆ, ದಿನವೊಂದಕ್ಕೆ 8 ಲೀಟರ್​ ಹಾಲು ಸಹ ನೀಡುತ್ತಿತ್ತು. ಒಂದು ಹಸುವಿನ ಹಾಲು ಮಾರಿಯೇ ದಿನಕ್ಕೆ 320 ರೂಪಾಯಿ ಸಂಪಾದನೆ ಮಾಡುತ್ತಿದ್ದರು.

    ಎಲ್​ಟಿ ಲೈನ್​ಗೆ ಅಳವಡಿಸಲಾಗಿದ್ದ ಕಂಬವು ಬಿರುಗಾಳಿಯಿಂದ ಹಾನಿಯಾಗಿತ್ತು. ಇದರಿಂದ ನೆಲಕ್ಕೆ ಜೋತುಬಿದ್ದಿತ್ತು. ಹಸು ಮೇಯಲು ಹೋದಾಗ ತಂತಿ ತಗುಲಿ ವಿದ್ಯುತ್​ ಶಾಕ್​ನಿಂದ ಮೃತಪಟ್ಟಿದೆ ಎಂದು ಟಿಎಸ್​​​ಎನ್​ಪಿಡಿಸಿಎಲ್ ಸಮರ್ಥಿಸಿಕೊಂಡಿದೆ.

    ಇಬ್ಬರ ವಾದವನ್ನು ಆಲಿಸಿದ ಗ್ರಾಹಕ ವಿವಾದ ಪರಿಹಾರ ಆಯೋಗ, ಬಿರುಗಾಳಿಯ ಪ್ರಭಾವದಿಂದಾಗಿ ವಿದ್ಯುತ್​ ಕಂಬಗಳು ಮುರಿದು ರಸ್ತೆಗಳಲ್ಲಿ ಅಥವಾ ಕೃಷಿ ಕ್ಷೇತ್ರಗಳಲ್ಲಿ ವಿದ್ಯುತ್​ ತಂತಿಗಳು ಬಿದ್ದರೆ, ಅದರ ಬಗ್ಗೆ ಎಚ್ಚರಿಕೆ ವಹಿಸಿ ನಿರ್ವಹಿಸುವುದು ಅದಕ್ಕೆ ಸಂಬಂಧಿಸಿದ ಸಂಸ್ಥೆಯ ಜವಾಬ್ದಾರಿಯಾಗಿರಬೇಕು. ಕೆಲಸಕ್ಕೆ ಸರಿಯಾಗಿ ಹಾಜರಾಗಿ, ವಿದ್ಯತ್​ ತಂತಿಗಳನ್ನು ಭದ್ರಪಡಿಸಿ, ಜನರು ಮತ್ತು ಪ್ರಾಣಿಗಳ ಪ್ರಾಣ ಉಳಿಸಬೇಕು ಎಂದಿದೆ.

    ದೂರುದಾರನು ತನ್ನ ಹಸುಗಳನ್ನು ತನ್ನ ಮನೆಯಿಂದ ದೂರದಲ್ಲಿರುವ ಹೊಲದಲ್ಲಿ ಗಮನಿಸದೇ ಬಿಟ್ಟಿದ್ದಾನೆ. ತನ್ನ ಹಸುಗಳ ಬಗ್ಗೆ ಕಾಳಜಿ ವಹಿಸಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ ಎಂದು ಟಿಎಸ್​​​ಎನ್​ಪಿಡಿಸಿಎಲ್ ಸಮರ್ಥನೆ ನೀಡಿದ್ದು, ಇದಕ್ಕೆ ಉತ್ತರಿಸಿರುವ ಆಯೋಗ, ಘಟನೆಯ ಸಮಯದಲ್ಲಿ ದೂರುದಾರರು ಇರಲಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳನ್ನು ನೀವು ಸಲ್ಲಿಸಿಲ್ಲ ಎಂದು ಹೇಳಿತು.

    ವಿದ್ಯುತ್​ ಕಂಪನಿಯ ನಿರ್ಲಕ್ಷ್ಯದಿಂದ ಜೀವನಕ್ಕೆ ಆಧಾರವಾಗಿದ್ದ ಹಸುವನ್ನು ರೈತ ಕಳೆದುಕೊಂಡಿದ್ದಾನೆ. ಇದಕ್ಕೆ ಪರಿಹಾರವಾಗಿ 90 ಸಾವಿರ ರೂ. ನೀಡಲು ಆಯೋಗ ಆದೇಶಿಸಿದೆ. (ಏಜೆನ್ಸೀಸ್​)

    ಬೆಡ್‌ರೂಮ್‌ಗೆ ಬಂದ ಏಲಿಯನ್‌: ಪುರುಷನಿಗಿಂತಲೂ ಇವೇ ಬೆಸ್ಟ್‌- ವಿಚಿತ್ರ ಅನುಭವ ಬಿಚ್ಚಿಟ್ಟ ನಟಿ!

    ಅತ್ಯಾಚಾರ ಪ್ರಕರಣ ಹೆಚ್ಚಾಗಲು ಮಹಿಳೆಯರ ಉಡುಗೆಯೇ ಕಾರಣ: ಪಾಕ್​ ಪ್ರಧಾನಿ ಇಮ್ರಾನ್​ ಖಾನ್​

    ಲವರ್​ ಜತೆಗೂಡಿ ಗಂಡನ ಕೊಲೆ: ಭಯಾನಕ ರಸಹ್ಯ ಬಿಚ್ಚಿಟ್ಟ ಪತ್ನಿಯ ಗೂಗಲ್​ ಸರ್ಚ್​ ಹಿಸ್ಟರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts