More

    ನಿಮ್ಗೂ 25 ಲಕ್ಷ ರೂ. ಕೊಡ್ತೀನಿ ಅಂತಾರೆ..! ಹಣ ಪಡೆಯೋಕು ಮುನ್ನ ಈ ಸ್ಟೋರಿ ನೋಡಿ

    ಹಾಸನ: ಲಕ್ಕಿ ಡ್ರಾ.. ಲಕ್ಕಿ ಕೂಪನ್​.. ಹೆಸರಲ್ಲಿ ವಂಚಕರು ನಿಮಗೂ ಕರೆ ಮಾಡ್ತಾರೆ ಜೋಕೆ! 25 ಲಕ್ಷ ರೂ. ಆಸೆಗೆ ಒಳಗಾದ ಆಟೋ ಚಾಲಕರೊಬ್ಬರು ವಂಚಕರ ಬಲೆಗೆ ಸಿಕ್ಕರೂ ಕೊನೇ ಕ್ಷಣದಲ್ಲಿ ಪಾರಾದ ಕಥೆಯಿದು.

    ನಗರದ ಅಡ್ಲಿಮನೆ ನಿವಾಸಿ, ಆಟೋ ಚಾಲಕ ದೀಪು ಅಲಿಯಾಸ್​ ಶ್ರೀಧರ್ ಅವರ ಮೊಬೈಲ್​ಗೆ ಗುರುವಾರ ಪಶ್ಚಿಮ ಬಂಗಾಳದಿಂದ ಅನಾಮಿಕ ಕರೆ ಬಂದಿದ್ದು, ಲಕ್ಕಿ ಡ್ರಾನಲ್ಲಿ 25 ಲಕ್ಷ ರೂ. ಗೆದ್ದಿದ್ದೀರಿ. ನಿಮ್ಮ ಅಕೌಂಟ್​ಗೆ ಹಣ ಕಳಿಸುತ್ತೇವೆ ಎಂದು ಬ್ಯಾಂಕ್​ ಖಾತೆಯ ಡಿಟೇಲ್ಸ್​ ಜತೆಗೆ ಫೋಟೋವನ್ನು ವಾಟ್ಸ್ಆ್ಯಪ್​ ಮೂಲಕ ಪಡೆದಿದ್ದಾರೆ. ಹಣದ ಆಸೆಯಲ್ಲಿದ್ದ ದೀಪುಗೆ ಮುಂದೇನಾಯ್ತು ಗೊತ್ತಾ? ಇಲ್ಲಿದೆ ಡಿಟೇಲ್ಸ್​. ಇದನ್ನೂ ಓದಿರಿ ಮಂಗಳಮುಖಿ ಆಗಲು ಹೊರಟಿದ್ದ ಬಾಲಕನ ಬದುಕಲ್ಲಿ ರೋಚಕ ತಿರುವು!

    ಲಕ್ಕಿ ಡ್ರಾ ಹಣದ ಆಸೆಗೆ ಬಿದ್ದ ದೀಪು ಅನಾಮಿಕ ವ್ಯಕ್ತಿ ಕೇಳಿದ ಡಿಟೇಲ್ಸ್​ ಅನ್ನು ಕಳುಹಿಸಿದರು. ಇದಾದ ಎರಡು ನಿಮಿಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ, ವಿನ್ನರ್ ನೇಮ್, ಬ್ಯಾಂಕ್ ಅಕೌಂಟ್ ನಂಬರ್ ಹಾಗೂ 25 ಲಕ್ಷ ರೂ. ಗೆದ್ದ ಹಣವೆಂಬ ಕೂಪನ್​ವುಳ್ಳ ಪತ್ರವೊಂದು ದೀಪು ಅವರ ವಾಟ್ಸ್ಆ್ಯಪ್​ ನಂಬರ್​ಗೆ ಬಂದಿದೆ.

    ಆ ಬಳಿಕ ಫೋನ್ ಮಾಡಿದ ಅನಾಮಿಕ, ಗೆದ್ದಿರುವ ದುಡ್ಡನ್ನೆಲ್ಲ ನಿಮ್ಮ ಖಾತೆಗೆ ಜಮೆ ಮಾಡಬೇಕಾದರೆ ನೀವು 9 ಸಾವಿರ ರೂ. ತೆರಿಗೆ ಪಾವತಿಸಬೇಕು ಎಂದು ತನಗೆ ಸಂಬಂಧಿಸಿದ ಬ್ಯಾಂಕ್ ಖಾತೆಯ ನಂಬರ್​ ಕೊಟ್ಟಿದ್ದಾನೆ. 9 ಸಾವಿರ ರೂ. ತೆರಿಗೆ ಕಟ್ಟಬೇಕು ಎನ್ನುತ್ತಿದ್ದಂತೆ ಎಚ್ಚೆತ್ತುಕೊಂಡ ದೀಪು ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ್ದಾರೆ. ಇದು ವಂಚನೆಯ ಜಾಲ ಎಂದು ಅರಿವಾಗಿದೆ.

    ಇದನ್ನೂ ಓದಿರಿ video/ ಮಳೆ ಸುರಿಯುತ್ತಿದ್ದರೂ ಪೊಲೀಸ್​ ಠಾಣೆ ಎದುರಲ್ಲೇ ಧರಣಿ ಕುಳಿತ ಮಹಿಳೆ, ಕ್ಯಾರೆ ಎನ್ನದ ಸಿಬ್ಬಂದಿ…

    ಮತ್ತೆ ಕರೆ ಮಾಡಿದ ಅನಾಮಿಕ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡ ದೀಪು, ಬಾಯಿಗೆ ಬಂದಂತೆ ಬೈಯ್ದು ಬುದ್ಧಿ ಕಲಿಸಿದ್ದಾರೆ. ಮತ್ತೊಮ್ಮೆ ಕರೆ ಮಾಡಿದರೆ ಪೊಲೀಸ್​ಗೆ ಕಂಪ್ಲೇಟ್​ ಕೊಡುವುದಾಗಿ ಎಚ್ಚರಿಸಿ ಕರೆ ಸ್ಥಗಿತಗೊಳಿಸಿದ್ದಾರೆ. ಇದಾದ ಬಳಿಕ ದೀಪು ಮೊಬೈಲ್​ಗೆ ಅನಾಮಿಕ ಕರೆ ಬಂದಿಲ್ಲ. ಈ ಬಗ್ಗೆ ದೀಪು ಪೊಲೀಸರ ಗಮನಕ್ಕೂ ತಂದಿದ್ದಾರೆ.

    ಮಧ್ಯರಾತ್ರಿ ಪತ್ನಿಯನ್ನು ಕೊಂದು ಪೊಲೀಸ್​ ಠಾಣೆಗೆ ಬಂದ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts