More

    ಪಾಪ, ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಈ ಗತಿ ಬರಬಾರದಿತ್ತು!

    ವಾಷಿಂಗ್ಟನ್: ಯಾಕೋ ಪಾಪ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಟೈಮೇ ಸರಿ ಇಲ್ಲ ಅನ್ನಿಸುತ್ತಿದೆ. ಕರೊನಾ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ರಾಜ್ಯಗಳ ಗವರ್ನರ್‌ಗಳು ಅವರ ಮಾತು ಕೇಳುತ್ತಿಲ್ಲ, ಜನಾಂಗೀಯ ದ್ವೇಷ ಹೊತ್ತಿ ಉರಿಯುತ್ತಿದೆ, ಮಾಧ್ಯಮದವರೊಂದಿಗೂ ಟ್ರಂಪ್ ಸಂಬಂಧ ಸರಿಯಿಲ್ಲ… ಹೀಗೆ ಅಮೆರಿಕದಾದ್ಯಂತ ಟ್ರಂಪ್‌ಗೆ ಪ್ರತಿಕೂಲ ಪರಿಸ್ಥಿತಿಯೇ ಇದೆ.

    ಜಾರ್ಜ್ ಹತ್ಯೆಯಿಂದಾಗಿ ದೇಶದ ಮೂಲೆ ಮೂಲೆಯಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ಸಿಯಾಟಲ್‌ನಲ್ಲೂ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿದೆ. ‘‘ಸ್ಥಳೀಯ ಆಡಳಿತದಿಂದ ಪ್ರತಿಭಟನೆ ನಿಯಂತ್ರಿಸಲು ಆಗದಿದ್ದರೆ ೆಡರಲ್ ಸರ್ಕಾರ ಮಧ್ಯಪ್ರವೇಶ ಮಾಡಬೇಕಾಗುತ್ತದೆ’’ ಎಂದು ಟ್ರಂಪ್ ಎಚ್ಚರಿಸಿದ್ದರು. ಈ ಎಚ್ಚರಿಕೆಗೆ ಸಿಯಾಟಲ್‌ನ ಮೇಯರ್, ಸಾರ್ವಜನಿಕರು ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ ಕರೊನಾ ಹಿನ್ನೆಲೆ ಒಂದು ವರ್ಷ ಶಾಲೆ ಬಂದ್!

    ‘‘ಟ್ರಂಪ್, ನೀನು ವಾಪಸ್ ಹೋಗಿ ಬಂಕರ್‌ನಲ್ಲಿ ಅಡಗಿ ಕುಳಿತುಕೊ’’ ಎಂದು ಮೇಯರ್ ಛೇಡಿಸಿದ್ದಾರೆ. ‘‘ನಾವು ಹುಟ್ಟಿ, ಬೆಳೆದ ನಗರದಲ್ಲಿ ನಮ್ಮ ಮೇಲೆ ಅಧಿಕಾರ ಸಾಧಿಸುವುದು ಬೇಡ’’ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಇದೇ ವೇಳೆ ಟ್ರಂಪ್, ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ‘‘ನೀವು ರ‌್ಯಾಲಿಯಲ್ಲಿ ಭಾಗವಹಿಸುವುದಾದರೆ ಭಾಗವಹಿಸಿ, ಆದರೆ ಕರೊನಾ ಬಂದರೆ ನಮ್ಮನ್ನು ದೂರಬೇಡಿ’’ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಭಟನಕಾರರು ಕ್ಯಾರೆ ಎಂದಿಲ್ಲ. ಆದರೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋರಾಟಗಾರನೊಬ್ಬನಲ್ಲಿ ಗುರುವಾರ ಸೋಂಕು ಕಾಣಿಸಿಕೊಂಡಿದೆ.

    ಉಡುಪಿಯಲ್ಲಿ ಲವ್​ ಜಿಹಾದ್​? ಮುಸ್ಲಿಂ ಯುವಕನ ಬಲೆಗೆ ಸಿಲುಕಿದಳೇ 18ರ ಯುವತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts