More

    ನವೆಂಬರ್​ 3 ಒಳ್ಳೆಯ ದಿನ- ಅಂದೇ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್​

    ವಾಷಿಂಗ್ಟನ್​: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿದೆ. COVID19 ಸೋಂಕು ಮತ್ತು ಇನ್ಯಾವುದೇ ಕಾರಣಕ್ಕೂ ಇದು ಮುಂದೂಡಲ್ಪಡುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

    ಕರೊನಾ ವೈರಸ್ ಸೋಂಕಿನಿಂದಾಗಿ ಜಾಗತಿಕ ಮಟ್ಟದಲ್ಲಿ ಅತಿಹೆಚ್ಚಿನ ಸಾವು-ನೋವು ಮತ್ತು ನಾಶ-ನಷ್ಟಕ್ಕೆ ಈಡಾಗಿರುವ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಿಗದಿತ ದಿನಾಂಕದಂದೇ ನಡೆಯಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಅಧ್ಯಕ್ಷ ಟ್ರಂಪ್ ಉತ್ತರಿಸಿದ್ದಾರೆ. ಇದರಂತೆ, ಈಗಾಗಲೇ ನಿಗದಿಯಾಗಿರುವ ನವೆಂಬರ್​ 3ರಂದೇ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

    ಅಧ್ಯಕ್ಷೀಯ ಚುನಾವಣೆಯ ದಿನಾಂಕವನ್ನು ಬದಲಾಯಿಸುವ ಬಗ್ಗೆ ನಾನೆಂದೂ ಯೋಚಿಸಿಯೇ ಇಲ್ಲ. ಅಲ್ಲದಿದ್ದರೂ ನಾನೇಕೆ ಆ ಬಗ್ಗೆ ಚಿಂತನೆ ನಡೆಸಲಿ. ಎಲ್ಲದಕ್ಕೂ ಮಿಗಿಲಾಗಿ ನವೆಂಬರ್ 3 ಒಳ್ಳೆಯ ನಂಬರ್ ಎಂದು ಟ್ರಂಪ್​ ವೈಟ್ ಹೌಸ್​ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಕಳೆದ ವಾರ ಟ್ರಂಪ್ ಅವರ ರಾಜಕೀಯ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಜಾಯ್ ಬಿಡನ್​ ಈ ಕುರಿತು ಹೇಳಿಕೆಯನ್ನು ನೀಡಿ, ಅಧ್ಯಕ್ಷೀಯ ಚುನಾವಣೆಯ ದಿನಾಂಕ ಬದಲಾಯಿಸುವ ನಿಟ್ಟಿನಲ್ಲಿ ಟ್ರಂಪ್​ ಚಿಂತನೆ ನಡೆಸುತ್ತಿದ್ದಾರೆ ಎಂದಿದ್ದರು. ನನ್ನ ಮಾತನ್ನು ನೆನಪಿಟ್ಟುಕೊಳ್ಳಿ. ಟ್ರಂಪ್​ ಶತಾಯ ಗತಾಯ ಹಾಗೂ ಹೀಗೂ ಚುನಾವಣೆಯನ್ನು ಮುಂದೂಡಲು ಪ್ರಯತ್ನಿಸುತ್ತಲೇ ಇದ್ದಾರೆ ಎಂದು ಬಿಡನ್ ಹೇಳಿದ್ದರು.

    ಈ ಹೇಳಿಕೆ ಬಗ್ಗೆ ಪತ್ರಕರ್ತರು ಟ್ರಂಪ್ ಅವರ ಗಮನಸೆಳೆದಾಗ ಅವರ ಪ್ರತಿಕ್ರಿಯೆ ಹೀಗಿತ್ತು- “ಹಾಗೇನಿಲ್ಲ. ನಾನು ಚುನಾವಣೆಯನ್ನು ಎದುರುನೋಡುತ್ತಿದ್ದೇನೆ. ಅದು ಅವರು ಮಾಡುತ್ತಿರುವ ಪ್ರೊಪಗಾಂಡಾ ಅಲ್ಲ. ಕೆಲವರು ಸಿದ್ಧಪಡಿಸಿದ ಚಿಕ್ಕ ಚಿಕ್ಕ ಭಾಗಗಳನ್ನು ಇವರು ಹೇಳುತ್ತಿದ್ದಾರೆ ಅಷ್ಟೇ ಎಂದು ಲೇವಡಿ ಮಾಡಿದ ಅವರು, ಅವರು ಅಂಥ ಹೇಳಿಕೆಗಳನ್ನು ಕೊಟ್ಟಿರಲಾರರು. ಬೇರೆ ಯಾರಾದರೂ ಕೊಟ್ಟು ಅವರ ಹೆಸರು ಹೇಳಿರಬಹುದು. ಅವರಿಗೆ ಹೇಳಿ ನಾನು ಚುನಾವಣೆ ಮುಂದೂಡುವ ವಿಷಯವನ್ನು ಆಲೋಚಿಸುತ್ತಿಲ್ಲ. ಖಚಿತವಾಗಿ ಆ ಬಗ್ಗೆ ಚಿಂತನೆಯೂ ಇಲ್ಲ ಎಂದು ಟ್ರಂಪ್ ಹೇಳಿದರು. (ಏಜೆನ್ಸೀಸ್​)

    ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ 400ಕ್ಕೂ ಹೆಚ್ಚು ಅಂಶ ಏರಿಕೆ

    VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

    COVID19 ಹಾನಿಗೆ ಪರಿಹಾರ ಚೀನಾವೇ ನೀಡಬೇಕು: ಜರ್ಮನಿಗಿಂತಲೂ ಹೆಚ್ಚು ಪರಿಹಾರ ನಮಗೆ ಸಿಗಬೇಕು ಎಂದ ಅಮೆರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts