More

    ನೀಲಿತಾರೆಗೆ ಹಣ ನೀಡಿದ ಪ್ರಕರಣ: ಡೊನಾಲ್ಡ್​ ಟ್ರಂಪ್​ಗೆ ಎದುರಾಯ್ತು ಸಂಕಷ್ಟ, ಪ್ರತಿಭಟನೆಗೆ ಕರೆ

    ನ್ಯೂಯಾರ್ಕ್​: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಿಗೆ ಬಂಧನ ಭೀತಿ ಕಾಡುತ್ತಿದ್ದು, ಪ್ರತಿಭಟನೆ ಮಾಡುವಂತೆ ತನ್ನ ಬೆಂಬಲಿಗರಿಗೆ ಟ್ರಂಪ್​ ಕರೆ ನೀಡಿದ್ದಾರೆ.

    2016ರ ಚುನಾವಣೆಗೂ ಮುನ್ನ ಯಾವುದನ್ನೂ ಬಹಿರಂಗಪಡಿಸದಂತೆ ನೀಲಿತಾರೆಯ ಬಾಯಿ ಮುಚ್ಚಿಸಲು ಹಣ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಟ್ರಂಪ್​ಗೆ ಬಂಧನ ಭೀತಿ ಕಾಡುತ್ತಿದೆ.

    ಮ್ಯಾನಹಟ್ಟನ್​ ಡಿಸ್ಟ್ರಿಕ್ಟ್​ ಅಟಾರ್ನಿ ಆಫೀಸ್​ನಿಂದ ಸೋರಿಕೆಯಾದ ವರದಿನ್ನು ಉಲ್ಲೇಖಿಸಿ ಶನಿವಾರ ಬೆಳಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಟ್ರಂಪ್​, ಮುಂದಿನ ಮಂಗಳವಾರ ನಾನು ಬಂಧನವಾಗುವ ಸಾಧ್ಯತೆ ಇದೆ. ದೇಶದಲ್ಲಿ ಮತ್ತೆ ಪ್ರತಿಭಟನೆ ಮರುಕಳಿಸಿದೆ ಎನ್ನುವ ಮೂಲಕ ತನ್ನ ಬೆಂಬಲಿಗರಿಗೆ ಪ್ರತಿಭಟನೆಗೆ ಕರೆ ನೀಡಿದ್ದಾರೆ.

    2016ರ ಚುನಾವಣೆಗೂ ಮುನ್ನ ನೀಲಿತಾರೆ ಸ್ಟಾರ್ಮಿ ಡೇನಿಯಲ್ಸ್​ (ನಿಜವಾದ ಹೆಸರು ಸ್ಟೆಫೇನಿ ಕ್ಲಿಪ್ಫೋರ್ಡ್​)ಗೆ 1,30,000 ಡಾಲರ್​ ನೀಡಿರುವ ಆರೋಪ ಟ್ರಂಪ್​ ಮೇಲಿದೆ. ವರ್ಷಗಳ ಕಾಲ ಡೇನಿಯಲ್ಸ್​ ಜೊತೆ ಟ್ರಂಪ್​ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದ್ದು, ಇಬ್ಬರ ನಡುವಿನ ಸಂಬಂಧವನ್ನು ಬಹಿರಂಗಪಡಿಸದಂತೆ ಬಾಯಿ ಮುಚ್ಚಿಸಲು ಹಣ ನೀಡಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

    ಇದನ್ನೂ ಓದಿ: ಚಿನ್ನದ ದರ ರೂ. 60 ಸಾವಿರಕ್ಕೆ? ಬೆಲೆಬಾಳುವ ಲೋಹಗಳ ಬೆಲೆ ಏರಿಕೆಯ ಸಾಧ್ಯತೆ

    ಈ ಪ್ರಕರಣದಲ್ಲಿ ಟ್ರಂಪ್ ವಿರುದ್ಧ ಆರೋಪ ಹೊರಿಸಬೇಕೆ ಎಂದು ಸದ್ಯ ಪ್ರಾಸಿಕ್ಯೂಟರ್‌ಗಳು ಚಿಂತನೆ ನಡೆಸುತ್ತಿದ್ದಾರೆ. ಒಂದು ವೇಳೆ ಮ್ಯಾನ್‌ಹ್ಯಾಟನ್ ಜಿಲ್ಲಾ ವಕೀಲರು, ಟ್ರಂಪ್‌ ಅವರ ವಿರುದ್ಧ ದೋಷಾರೋಪಣೆ ಮಾಡಿದರೆ, 76 ವರ್ಷ ವಯಸ್ಸಿನ ಟ್ರಂಪ್​ ಅಪರಾಧದ ಆರೋಪ ಹೊತ್ತ ಅಮೆರಿಕದ ಮೊದಲ ಮಾಜಿ ಅಧ್ಯಕ್ಷರಾಗುತ್ತಾರೆ.

    ಈ ಬಗ್ಗೆ ಟ್ರಂಪ್ ಅವರ ವಕೀಲರು ಶುಕ್ರವಾರ ಸಂಜೆಯೇ ಸಿಎನ್‌ಬಿಸಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಮ್ಯಾನ್‌ಹ್ಯಾಟನ್ ಗ್ರ್ಯಾಂಡ್ ಜ್ಯೂರಿಯು ಟ್ರಂಪ್​ ವಿರುದ್ಧ ದೋಷಾರೋಪಣೆ ಹೊರಿಸಿದರೆ, ಟ್ರಂಪ್​ ಅವರು ಕ್ರಿಮಿನಲ್ ಆರೋಪಗಳನ್ನು ಎದುರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

    ಇನ್ನೊಂದೆಡೆ ನೀಲಿತಾರೆ ಡೇನಿಯಲ್ಸ್ ಜೊತೆಗಿನ ಸಂಬಂಧವನ್ನು ಡೊನಾಲ್ಡ್​ ಟ್ರಂಪ್ ನಿರಾಕರಿಸಿದ್ದಾರೆ. (ಏಜೆನ್ಸೀಸ್​)

    ಬಿಜೆಪಿಯಲ್ಲಿ ಬೆಳಗಿದ ಪೂರ್ಣಿಮಾ ಕಾಂಗ್ರೆಸ್‌ನತ್ತ ಪಯಣ? ಕಮಲ ಬಿಟ್ಟು ಕೈ ಹಿಡಿಯಲು ಶಾಸಕಿ ಸಜ್ಜು!

    ಪ್ರತಿಭಟನಾ ನಿರತ ಆರೋಗ್ಯ ಸಿಬ್ಬಂದಿಗೆ ಶಾಕ್; ಎಸ್ಮಾ ಜಾರಿಗೆ ಮುಂದಾದ ಆರೋಗ್ಯ ಇಲಾಖೆ

    ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತಕ್ಕೆ ದಿನ ನಿಗದಿ; ಆರ್.ಅಶೋಕ್, ಸಿ.ಟಿ ರವಿ ಪ್ರೆಸೆಂಟ್ಸ್ | ಅಶ್ವಥ್ ನಾರಾಯಣ ಚಿತ್ರಕತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts