More

    ಸಾವಿನ ದಿಬ್ಬಣವಾಯ್ತು ಮದುವೆ ಮೆರವಣಿಗೆ; ಟ್ರಕ್‌ ಹರಿದು 6 ಮಂದಿ ಸಾವು

    ಒಡಿಶಾ: ಮದುವೆ ಮೆರವಣಿಗೆ ಸಾಗುತ್ತಿದ್ದ ವೇಳೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದು ಕನಿಷ್ಠ ಆರು ಮಂದಿ ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಕಿಯೋಂಜಾರ್​ ಬಳಿಯ ಸತಿಘರ್​ಸಾಹಿ ಎಂಬಲ್ಲಿ ನಡೆದಿದೆ.

    ಇದನ್ನೂ ಓದಿ: ಅರ್ಚಕರು, ಪುರೋಹಿತರ ನೆರವಿಗಾಗಿ ಒಕ್ಕೂಟ ಪ್ರಾರಂಭ: ಜಿಲ್ಲಾಧ್ಯಕ್ಷ ಎನ್.ಎಸ್.ನವೀನ್ ಹೇಳಿಕೆ

    ಇಂದು ಬೆಳಗಿನ ಮುಂಜಾನೆ ಮದುವೆಯ ಪೂಜಾಕಾರ್ಯಗಳನ್ನು ಮುಗಿಸಿಕೊಂಡು ವಧುವಿನ ಮನೆಯತ್ತ ತೆರಳುತ್ತಿದ್ದ ವೇಳೆ, ರಾಷ್ಟ್ರೀಯ ಹೆದ್ದಾರಿ 49 ಮತ್ತು NH 40 ಬೈಪಾಸ್​​ ನಡುವಿನ ಜಂಕ್ಷನ್‌ನಲ್ಲಿ ವೇಗವಾಗಿ ಬಂದ ಕಬ್ಬಿಣದ ಅದಿರು ತುಂಬಿದ ಟ್ರಕ್ ಜನರ ಮೇಲೆ ಹರಿದು ಈ ದುರ್ಘಟನೆ ಸಂಭವಿಸಿದೆ.

    ಅಪಘಾತದ ನಂತರ ಉದ್ವಿಗ್ನಗೊಂಡ ಸ್ಥಳೀಯರು ರಸ್ತೆ ತಡೆ ನಡೆಸಿ ಸೂಕ್ತ ಪರಿಹಾರ ಮತ್ತು ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಿದರು. ಜತೆಗೆ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಯ್ಯದಂತೆ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳ ತಂಡವು ಮೇಲ್ಸೇತುವೆ ನಿರ್ಮಾಣ ಕುರಿತು ಭರವಸೆ ನೀಡಿದ ನಂತರ ಶವಗಳನ್ನು ನೀಡಲಾಯಿತು.

    ಇದನ್ನೂ ಓದಿ: ಗಗನಕ್ಕೇರಿದ ಟೊಮ್ಯಾಟೊ ಬೆಲೆ: ಭಾರತದಾದ್ಯಂತ ತರಕಾರಿ ಬೆಲೆ ಏಕೆ ಏರುತ್ತಿದೆ?

    ಇನ್ನು, ಗಾಯಾಳುಗಳನ್ನು ಕಿಯೋಂಜಾರ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಅಪಘಾತದ ಬಳಿಕ ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

    ಒಡಿಶಾ ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಮದುವೆ ಸಮಾರಂಭಕ್ಕೆ ಸಂಬಂಧಿಸಿದಂತ ನಡೆದ ಎರಡನೇ ಅಪಘಾತ ಇದಾಗಿದ್ದು, ಭಾನುವಾರ ರಾತ್ರಿ ಗಂಜಾಂ ಜಿಲ್ಲೆಯಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ ಮಿನಿ ಬಸ್‌ಗೆ ಮತ್ತೊಂದು ವೇಗವಾಗಿ ಬಂದ ಸರ್ಕಾರಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಮೃತಪಟ್ಟು ಎಂಟು ಮಂದಿ ಗಾಯಗೊಂಡಿದ್ದರು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts