More

    ಹೆಲ್ಮೆಟ್​ ಧರಿಸಿಲ್ಲವೆಂದು ಟ್ರಕ್​ ಚಾಲಕ, ಕ್ಲೀನರ್​ಗೆ ದಂಡ ವಿಧಿಸಿದ ಪೊಲೀಸರು: ಮತ್ತೆ ವೈರಲ್ ಆಯ್ತು ಚಲನ್​!

    ಭುವನೇಶ್ವರ: ಬೈಕ್​ ಮತ್ತು ಸ್ಕೂಟರ್​ನಲ್ಲಿ ಹೆಲ್ಮೆಟ್​ ಹಾಗೂ ಕಾರಿನಲ್ಲಿ ಬೆಲ್ಟ್​ ಧರಿಸದಿದ್ದರೆ ದಂಡ ವಿಧಿಸುವುದು ಸಾಮನ್ಯ. ಆದರೆ, ಒಡಿಶಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಹೆಲ್ಮೆಟ್​ ಧರಿಸಿಲ್ಲ ಎಂಬ ಕಾರಣ ನೀಡಿ ಟ್ರಕ್​ ಡ್ರೈವರ್​ ಮತ್ತು ಆತನ ಸಹಾಯಕನಿಗೆ ದಂಡ ವಿಧಿಸಿದ್ದಾರೆ.

    ಒಡಿಶಾದ ಜಾಜ್​ಪುರ್​ ಜಿಲ್ಲೆಯ ಚಾಂದಿಖೋಲ್​ ಬಳಿ ನಡೆದಿದೆ. ಮೂಲಗಳ ಪ್ರಕಾರ ಭುವನೇಶ್ವರದ ಹನ್ಸಪಾಲ್​ ಮೂಲದ ಜ್ಯೋತಿರಂಜನ್​ ಸಾಹೋ ಎಂಬುವರಿಗೆ ಸೇರಿದ ಟ್ರಕ್​ ಅನ್ನು ಹೈವೇ ಪೊಲೀಸರು ಚಾಂದಿಖೋಲ್​ ಚಾಕ್​ ಬಳಿ 2020ರ ಜುಲೈ 27ರಂದು ತಡೆಹಿಡಿದಿದ್ದರು. ಈ ವೇಳೆ ಕೋವಿಡ್​ ನಿಯಮವೂ ಸಹ ಜಾರಿಯಲ್ಲಿತ್ತು.

    ಇದನ್ನೂ ಓದಿರಿ: ಒಂದೆಡೆ ಪತ್ನಿ, ಇನ್ನೊಂದೆಡೆ ಮದುವೆಯಾಗಲು ಪ್ರೇಯಸಿ ಒತ್ತಾಯ- ಮೈಸೂರಿನಲ್ಲಿ ಬಿತ್ತು ಎರಡು ಹೆಣ!

    ಚಾಲಕ ಪ್ರಕಾಶ್​ ಪಾಣಿ ಮಾಸ್ಕ್​ ಅನ್ನು ಸರಿಯಾಗಿ ಧರಿಸದಿದ್ದಕ್ಕೆ ದಂಡ ವಿಧಿಸಲಾಗಿತ್ತು. ಇದೇ ವಿಚಾರವಾಗಿ ಪೊಲೀಸ್​ ಅಧಿಕಾರಿ ಮತ್ತು ಚಾಲಕನ ನಡುವೆ ವಾಗ್ವಾದ ಶುರುವಾಗಿತ್ತು. ಇದರ ಬೆನ್ನಲ್ಲೇ ಪೊಲೀಸ್​ ಅಧಿಕಾರಿ ಹೆಲ್ಮೆಟ್​ ಧರಿಸದೇ ಪ್ರಯಾಣ ಮಾಡಿದ್ದೀರಿ ಎಂದು ಚಾಲಕ ಮತ್ತು ಸಹಾಯಕನಿಗೆ 1000 ರೂ. ದಂಡ ವಿಧಿಸಿ ಚಲನ್​ ನೀಡಿದ್ದರು.

    ಈ ಘಟನೆ ನಡೆದ ಅನೇಕ ದಿನಗಳ ನಂತರ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಚಲನ್​ ವೈರಲ್​ ಆಗಿದ್ದು, ನೆಟ್ಟಿಗರು ಮತ್ತೊಮ್ಮೆ ಪೊಲೀಸರ ಕ್ರಮವನ್ನು ಟೀಕಿಸುತ್ತಿದ್ದಾರೆ. (ಏಜೆನ್ಸೀಸ್​)

    VIDEO| ಸ್ವಚ್ಛಂದವಾಗಿ ಹಾರಾಡ್ತಿದ್ದ ಪಕ್ಷಿಗೆ ಶೂಟ್​ ಮಾಡಿದ ಬೆನ್ನಲ್ಲೇ ಕರ್ಮದ ಫಲ ಅನುಭವಿಸಿದ ವ್ಯಕ್ತಿ!

    8 ತಿಂಗಳ ಮಗುವಿನೊಂದಿಗೆ ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಶರಣು: ಮಗುವಿನ ಜೀವ ಉಳಿದಿದ್ಹೇಗೆ?

    ಟ್ರಸ್ಟ್​ಗಾಗಿ ಸಂಗ್ರಹಿಸಿದ ಹಳೇ ಶರ್ಟ್​ನಲ್ಲಿದ್ದ ಪಾಕೆಟ್ ನೋಡಿದ ಕೂಡಲೇ ಮೈಸೂರಿನಿಂದ ಕೇರಳಕ್ಕೆ ದೌಡು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts