More

    ಚಲಿಸುತ್ತಿದ್ದ ಕಾರಿನ ಮೇಲೆ ಬಿತ್ತು ಅಕ್ಕಿ ತುಂಬಿದ್ದ ಟ್ರಕ್​ ಕಂಟೈನರ್: ಕಾರಿನ ಜತೆಗೆ ಇಬ್ಬರ ದೇಹವೂ ನುಜ್ಜುಗುಜ್ಜು!​

    ನವದೆಹಲಿ: ಕಾರಿನ ಮೇಲೆ ಟ್ರಕ್​ ಕಂಟೈನರ್ ಬಿದ್ದು ಇಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ದೆಹಲಿಯ ಲಾಜ್​ಪತ್​ ನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಕಾರಿನ ಮೇಲೆ ಬಿದ್ದಿದ್ದ ಕಂಟೈನರ್​ ತೆಗೆಯಲು ಸುಮಾರು 1 ಗಂಟೆಗಳ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಟ್ರಾಫಿಕ್​ ಜಾಮ್​ ಸಮಸ್ಯೆಯು ಉಂಟಾಯಿತು.

    ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವಿಗೀಡಾಗಿದ್ದು, ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಟ್ರಕ್​ ಚಾಲಕನನ್ನು ಬಂಧಿಸಲಾಗಿದೆ.

    ಮೃತರನ್ನು ಅಂಕಿತ್​ ಮೆಲ್ಹೋತ್ರಾ ಮತ್ತು ರಂಜನ್​ ಕಲ್ರಾ ಎಂದು ಗುರುತಿಸಲಾಗಿದ್ದು, ಇಬ್ಬರು 35 ವಯಸ್ಸಿನವರು. ದೆಹಲಿಯ ಮ್ಯಾನೇಜ್​ಮೆಂಟ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ನಡೆಯುವ ಮುನ್ನ ಅವರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದರು.

    ಇದನ್ನೂ ಓದಿ: ಹಾಥರಸ್​ ಪ್ರಕರಣ- ಯುವತಿಯ ಕೊಲೆ ಮಾಡಿದ್ದು ಯಾರು ಎಂದು ತಿಳಿಸಿ ಪತ್ರ ಬರೆದ ಆರೋಪಿಗಳು!

    ಕರ್ಕಾರ್​ಡೂಮದಲ್ಲಿ ವಾಸವಿದ್ದ ಮೆಲ್ಹೋತ್ರಾ ಅವರು ಲಜ್​ಪತ್​ ನಗರದಲ್ಲಿದ್ದ ಸ್ನೇಹಿತ ಕಲ್ರಾರನ್ನು ಕರೆದುಕೊಂಡು ವಿಮಾನ ನಿಲ್ದಾಣಕ್ಕೆ ಹೋಗುವಾಗ ಮಾರ್ಗ ಮಧ್ಯೆ ದುರ್ಘಟನೆ ಸಂಭವಿಸಿದೆ. ಇಬ್ಬರು ಕೆಲಸದ ನಿಮಿತ್ತ ಕೋಲ್ಕತಾಗೆ ಹೋಗುವುದಕ್ಕಾಗಿ ವಿಮಾನ ನಿಲ್ದಾಣಕ್ಕೆ ತೆರಳಿದ್ದರು.

    ಬುಧವಾರ ಬೆಳಗ್ಗೆ 3:45ರ ಸುಮಾರಿಗೆ ಅಪಘಾತ ಸಂಭವಿಸಿದೆ. ಟ್ರಕ್ ತಿರುವು ಪಡೆದುಕೊಳ್ಳವಾಗ ಅಕ್ಕಿ ತುಂಬಿದ್ದ ಕಂಟೈನರ್​ ಕಾರಿನ ಮೇಲೆ ಬಿದ್ದಿದೆ. ಅಲ್ಲದೆ, ಟ್ರಕ್​ ಸಹ ಉರುಳಿಬಿದ್ದಿದೆ. ತಕ್ಷಣ ಟ್ರಕ್​ನಿಂದ ಹೊರಬಂದು ಚಾಲಕ ಪರಾರಿಯಾಗಲು ಯತ್ನಿಸಿದರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಕಂಟೈನರ್​ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಇಬ್ಬರ ದೇಹವೂ ಸಹ ರಕ್ತಸಿಕ್ತವಾಗಿದ್ದವು. ರಸ್ತೆ ಮಧ್ಯೆದಲ್ಲೇ ಟ್ರಕ್​ ಬಿದ್ದಿದ್ದರಿಂದ. ಎರಡು ಸಣ್ಣ ಕ್ರೇನ್​ ಮತ್ತು ಒಂದು ಜೆಸಿಬಿಯಿಂದ ಕಂಟೈನರ್​ ತೆರವುಗೊಳಿಸಲಾಯಿತು. ಕಂಟೈನರ್​ನಲ್ಲಿದ್ದ ಅಕ್ಕಿ ರಸ್ತೆಯಲ್ಲ ಚೆಲ್ಲಿಕೊಂಡಿತ್ತು. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿಯು ಸಹ ಆಗಮಿಸಿ ತೆರವು ಕಾರ್ಯಾಚರಣೆಗೆ ಸಹಕರಿಸಿದರು ಎಂದು ಹಿರಿಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸೊಸೆ ವಿರುದ್ಧ ಗುಡುಗಿದ ಗೌರಮ್ಮ ಕುರಿತು ಡಿ.ಕೆ.ರವಿ ಪತ್ನಿಯಿಂದ ಸ್ಫೋಟಕ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts