More

    ಆತ್ಮಹತ್ಯೆಗೆ ಯತ್ನಿಸಿದ ಸಿಎಂ ರಾಜಕೀಯ ಕಾರ್ಯದರ್ಶಿಗೆ ಹೊಸ ಸಂಕಷ್ಟ..!

    ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಎನ್​.ಆರ್​. ಸಂತೋಷ್​ಗೆ ಹೊಸ ಸಂಕಷ್ಟ ಎದುರಾಗಿದೆ.

    ಭಾರತೀಯ ದಂಡ ಸಂಹಿತೆ 309ರ ಪ್ರಕಾರ ಆತ್ಮಹತ್ಯೆ ಯತ್ನ ಅಪರಾಧ. ಇದರ ಅಡಿಯಲ್ಲಿ ಗರಿಷ್ಠ ಒಂದು ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಐಪಿಸಿ ಸೆಕ್ಷನ್​ 309ರ ಪ್ರಕಾರ ದೂರು ದಾಖಲಾದರೆ, ಆತ್ಮಹತ್ಯೆ ಯತ್ನಕ್ಕೆ ಕಾರಣ ಏನು ಎಂದು ಸ್ಪಷ್ಟಪಡಿಸಬೇಕಾಗುತ್ತದೆ.

    ಮಾನಸಿಕ, ದೈಹಿಕ ಕಿರುಕುಳ ಅಥವಾ ಯಾರಿಂದಲಾದರೂ ಪ್ರಚೋದನೆ ಇತ್ತ ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತೆ. ಇದ್ಯಾವುದು ಅಲ್ಲದೆ ಮಾನಸಿಕ ಖಿನ್ನತೆ ಅಥವಾ ಮನೋಕಾಯಿಲೆಯ ನೆಪ ನೀಡಿದರೆ, ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಕುತ್ತು ಬರುವ ಸಾಧ್ಯತೆ ಇದೆ.

    ಇದನ್ನೂ ಓದಿ: ಸಿಎಂ ಬಿಎಸ್​ವೈ ರಾಜಕೀಯ ಕಾರ್ಯದರ್ಶಿ ಎನ್​.ಆರ್​. ಸಂತೋಷ್​ ಆತ್ಮಹತ್ಯೆಗೆ ಯತ್ನ

    ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ 2017ರ ಪ್ರಕಾರ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ರೆ ಸರ್ಕಾರವೇ ಚಿಕಿತ್ಸೆ ನೀಡುತ್ತದೆ. ಆದರೆ, ಖಿನ್ನತೆ ವಾಸಿಯಾಗುವವರೆಗೂ ಸಿಎಂ ರಾಜಕೀಯ ಕಾರ್ಯದರ್ಶಿಯಂತಹ ಗಂಭೀರ ಜವಾಬ್ದಾರಿ ನಿರ್ವಹಣೆ ಕಷ್ಟ. ಮನೋ ದೌರ್ಬಲ್ಯ ಇರುವವರು ಸರ್ಕಾರದ ಆಡಳಿತ ಯಂತ್ರದಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಿರಾ ಅಂತ ವಿರೋಧ ವ್ಯಕ್ತವಾಗುತ್ತದೆ. ಈ ಹಿನ್ನೆಲೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಕೈತಪ್ಪುವ ಸಾಧ್ಯತೆ ಇದೆ. ಹೀಗಾಗಿ ಆತ್ಮಹತ್ಯೆ ಯತ್ನಿಸಿರುವ ಸಂತೋಷ್​ಗೆ ಹೊಸ ಪೀಕಲಾಟ ಶುರುವಾಗಿದೆ.

    ಎಫ್​ಐಆರ್​ ದಾಖಲು
    ಆತ್ಮಹತ್ಯೆ ಯತ್ನ ಬೆನ್ನಲ್ಲೆ ಸಂತೋಷ್ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಯತ್ನಿಸಿದ ಆರೋಪದಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಆತ್ಮಹತ್ಯೆಗೆ‌ ಕಾರಣ ಏನು? ಯಾರು? ಎನ್ನುವುದರ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಸಂತೋಷ್‌ ಪತ್ನಿ ಜಾನ್ನವಿ ಹೇಳಿಕೆ ಪಡೆದಿರುವ ಪೊಲೀಸರು ಸಂತೋಷ್​ ಡಿಸ್ಚಾರ್ಜ್ ಆದ ಬಳಿಕ ಹೇಳಿಕೆ ಪಡೆಯಲಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿಎಂ ರಾಜಕೀಯ ಕಾರ್ಯದರ್ಶಿ ಎನ್​.ಆರ್​. ಸಂತೋಷ್​ ಆತ್ಮಹತ್ಯೆ ಯತ್ನ: ಪತ್ನಿ ಜಾಹ್ನವಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts