More

    ನ.25ಕ್ಕೆ ಗಣೇಶ್​ ಅಭಿನಯದ ‘ತ್ರಿಬಲ್​​ ರೈಡಿಂಗ್​’ ಬಿಡುಗಡೆ

    ಬೆಂಗಳೂರು: ಗಣೇಶ್​ ಅಭಿನಯದ ‘ತ್ರಿಬಲ್​ ರೈಡಿಂಗ್​’ ಚಿತ್ರದ ಕೆಲಸಗಳು ಮುಗಿದೇ ಬಹಳ ಕಾಲವಾಗಿತ್ತು. ಆದರೆ, ಅದಕ್ಕೂ ಮುಂಚೆ ‘ಗಾಳಿಪಟ 2’ ಶುರುವಾಗಿದ್ದರಿಂದ ಅದು ಮೊದಲು ಬಿಡುಗಡೆಯಾಗಬೇಕಿತ್ತು. ಈಗ ‘ಗಾಳಿಪಟ 2’ ಬಿಡುಗಡೆಯಾಗಿ ಮೂರು ತಿಂಗಳುಗಳಾಗಿವೆ. ಈಗ ಗಣೇಶ್​ ‘ತ್ರಿಬಲ್​ ರೈಡಿಂಗ್​’ ಹೊರಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಚಿತ್ರವು ಇದೇ ನ.25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ಸೋಮವಾರ ಚಿತ್ರದ ‘ಟ್ವಿಂಕಲ್​ ಟ್ವಿಂಕಲ್​ ಲಿಟಲ್​ ಸ್ಟಾರ್​’ ಎಂಬ ಹಾಡು ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಸ್ವತಃ ಗಣೇಶ್​ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ. ಅದಕ್ಕೂ ಮೊದಲು ನ.15ರಂದು ಚಿತ್ರದ ಟ್ರೇಲರ್​ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಇಂಥಾ ಚಿತ್ರಗಳು ನೂರಾಗಲಿ … ‘ಬನಾರಸ್’ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಸಿದ್ದರಾಮಯ್ಯ

    ‘ಟ್ವಿಂಕಲ್​ ಟ್ವಿಂಕಲ್​ ಲಿಟಲ್​ ಸ್ಟಾರ್​’ ಒಂದು ಪೆಪ್ಪಿ ಹಾಡಾಗಿದ್ದು, ವಿ. ನಾಗೇಂದ್ರ ಪ್ರಸಾದ್​ ಬರೆದಿದ್ದಾರೆ. ಇನ್ನು, ವಿಜಯಪ್ರಕಾಶ್​ ಹಾಡಿದ್ದಾರೆ. ಸಾಯಿಕಾರ್ತಿಕ್​ ಈ ಹಾಡನ್ನು ಸಂಯೋಜಿಸಿದ್ದು, ಭೂಷಣ್​ ನೃತ್ಯ ಸಂಯೋಜಿಸಿದ್ದಾರೆ. ಈ ಹಾಡಿನಲ್ಲಿ ಗಣೇಶ್ ಇದೇ ಮೊದಲ ಬಾರಿಗೆ ವಿಭಿನ್ನ ಸ್ಟೆಪ್​​ಗಳನ್ನು ಹಾಕುವುದನ್ನು ಕಾಣಬಹುದು. ಸದ್ಯಕ್ಕೆ ಈ ಲಿರಿಕಲ್​ ಹಾಡು, ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡಗುಡೆಯಾಗಿದೆ.

    ಈ ಹಾಡಿನ ಕುರಿತು ಮಾತನಾಡುವ ಗಣೇಶ್​, ‘ಈ ಹಾಡು ಕೇಳಿದಾಗ, ನನ್ನ ಬಗ್ಗೆ ಪಂಪ್​ ಹೊಡೆದ ಹಾಗಿದೆ ಎಂದನಿಸಿತು. ಸ್ವಲ್ಪ ಹೊಗಳಿಕೆ ಜಾಸ್ತಿಯಾಗಿದೆ ಎಂದನಿಸಿ, ಬದಲಾಯಿಸಿ ಎಂದು ಹೇಳಿದೆ. ಆದರೆ, ಇಡೀ ಚಿತ್ರತಂಡ ಇದೇ ಬೇಕು ಎಂದರು. ಇದೇನಾದರೂ ಇಷ್ಟವಾದರೆ ಕ್ರೆಡಿಟ್​ ಇಡೀ ಚಿತ್ರತಂಡಕ್ಕೆ ಹೋಗಬೇಕು’ ಎನ್ನುತ್ತಾರೆ.

    ಇದನ್ನೂ ಓದಿ: ‘ಇನ್ ಮ್ಯಾಲಿಂದ ಫುಲ್ ಗುದ್ದಾಮ್ ಗುದ್ದಿ…’ ಬೆಳ್ಳಿ ಪರದೆಗೆ ಕಂಬ್ಯಾಕ್ ಮಾಡುತ್ತಿರೋ ಸಂತಸದಲ್ಲಿ ರಮ್ಯಾ

    ಇನ್ನು, ಅವರ ಹಾಡುಗಳಲ್ಲಿ ಸಾಮಾನ್ಯವಾಗಿ ದೊಡ್ಡದೊಡ್ಡ ಸ್ಟೆಪ್​ಗಳು ಇರುವುದಿಲ್ಲವಂತೆ. ‘ನನ್ನ ಹಾಡುಗಳಲ್ಲಿ ಭಾರೀ ಮೂಮೆಂಟ್​ಗಳು ಇರುವುದಿಲ್ಲ. ಆದರೆ, ಇಲ್ಲಿ ಭೂಷಣ್​ ಮಾಸ್ಟರ್​ ಸಿಗ್ನೇಚರ್​ ಸ್ಟೆಪ್​ ಮಾಡಿಸಿದ್ದಾರೆ. ಇನ್ನು, ಛಾಯಾಗ್ರಾಹಕ ಜೈಆನಂದ್​ ಬಹಳ ಚೆನ್ನಾಗಿ ತೋರಿಸಿದ್ದಾರೆ’ ಎಂದು ಖುಷಿಪಡುತ್ತಾರೆ ಗಣೇಶ್​.

    ‘ತ್ರಿಬಲ್​ ರೈಡಿಂಗ್​’ ಚಿತ್ರದಲ್ಲಿ ಗಣೇಶ್​ಗೆ ನಾಯಕಿಯರಾಗಿ ಅದಿತಿ ಪ್ರಭುದೇವ, ರಚನಾ ಇಂದರ್​ ಮತ್ತು ಮೇಘಾ ಶೆಟ್ಟಿ ನಟಿಸಿದ್ದು, ಮಿಕ್ಕಂತೆ ಸಾಧು ಕೋಕಿಲ, ಕುರಿ ಪ್ರತಾಪ್​ ಮುಂತಾದವರು ನಟಿಸಿದ್ದಾರೆ. ಮಹೇಶ್​ ಗೌಡ ನಿರ್ದೇಶಿಸಿರುವ ಈ ಚಿತ್ರವನ್ನು ರಾಮಗೋಪಾಲ್​ ನಿರ್ಮಿಸಿದ್ದಾರೆ.

    ಇದುವರೆಗೂ ನಾನು ಮಾಡಿದ ಪಾತ್ರಗಳಲ್ಲಿ ಇದೇ ಬೆಸ್ಟ್ … ‘ರೆಮೋ’ ಪಾತ್ರದ ಬಗ್ಗೆ ಆಶಿಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts