More

    ನರಸಿಂಹ ಪರ್ವತಕ್ಕೆ ಪಾದಯಾತ್ರೆ

    ಶೃಂಗೇರಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶನಿವಾರ ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗದಳದ ಕಾರ್ಯಕರ್ತರು ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ದೇವಾಲಯದಿಂದ ಸುಮಾರು ಏಳು ಕಿ.ಮೀ ದೂರದ ಎತ್ತರ ಪ್ರದೇಶದಲ್ಲಿ ಇರುವ ನರಸಿಂಹ ಪರ್ವತಕ್ಕೆ ನಾಮಜಪ ಪಾದಯಾತ್ರೆ ಮೂಲಕ ತೆರಳಿ ಶ್ರದ್ಧಾಭಕ್ತಿ ಮೆರೆದರು.

    ಪಾದಯಾತ್ರೆಗೂ ಮುನ್ನ ಕಿಗ್ಗಾ ಶ್ರೀ ಋಷ್ಯಶೃಂಗ ದೇವಾಲಯದಲ್ಲಿ ರುದ್ರಾಭಿಷೇಕ ನೆರವೇರಿಸಲಾಯಿತು. ನಾಮಜಪ ಯಾತ್ರೆಯಲ್ಲಿ ವಿಹಿಂಪ ಜಿಲ್ಲಾ ಅಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್ ಮಾತನಾಡಿ, ಸನಾತನ ಧರ್ಮಕ್ಕೆ ಉನ್ನತ ಮೌಲ್ಯವಿದೆ. ಧರ್ಮ ಎಂದರೆ ಅಂತರ್ಗತದಲ್ಲಿ ಇರುವ ಶ್ರದ್ಧಾಭಕ್ತಿ. ಇದನ್ನು ಯಾರೂ ಪ್ರಶ್ನಿಸಬಾರದು ಎಂದರು.
    ಶ್ರೀ ಋಷ್ಯಶೃಂಗೇಶ್ವರ ಸ್ವಾಮಿಗೂ ಅಯೋಧ್ಯೆಗೂ ಉನ್ನತ ಸಂಬಂಧವಿದೆ. ಮಳೆದೇವರು ಶ್ರೀ ಋಷ್ಯಶೃಂಗಸ್ವಾಮಿ ದಶರಥ ಹಮ್ಮಿಕೊಂಡ ಪುತ್ರಕಾಮೇಷ್ಠಿ ಯಾಗ ನೆರವೇರಿಸಿದ ಬಳಿಕ ಶ್ರೀರಾಮನ ಅವತಾರವಾಯಿತು. ಇಂಥ ಪುಣ್ಯಭೂಮಿಯಲ್ಲಿ ಇರುವ ನರಸಿಂಹ ಪರ್ವತ ಹಿಂದುಗಳ ಪವಿತ್ರ ಶ್ರದ್ಧಾಕೇಂದ್ರ. ಹಾಗಾಗಿ ಹಿಂದು ಕಾರ್ಯಕರ್ತರು ಶ್ರೀರಾಮಮಂತ್ರ ಜಪಿಸುತ್ತ ಯಾತ್ರೆ ನೆರವೇರಿಸಿದ್ದೇವೆ. ಪ್ರತಿ ವರ್ಷ ಜ.22ರಂದು ನರಸಿಂಹ ಪರ್ವತಕ್ಕೆ ಬಂದು ಶ್ರೀರಾಮನ ಸಂಕೀರ್ತನೆ ಮಾಡಬೇಕು ಎಂದು ಮನವಿ ಮಾಡಿದರು.
    ವಿಹಿಂಪ ಹಾಸನ ವಿಭಾಗದ ಸಹಕಾರ್ಯದರ್ಶಿ ಆರ್.ಡಿ.ಮಹೇಂದ್ರಕುಮಾರ್ ಮಾತನಾಡಿ, ಶ್ರದ್ಧಾಕೇಂದ್ರದ ಉಳಿವಿಗಾಗಿ ಪ್ರತಿ ವರ್ಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಬೇಕು ಎಂದರು.
    ನಾಮಜಪ ಯಾತ್ರೆಯಲ್ಲಿ 250ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಮಹಿಳೆಯರು, ಮಕ್ಕಳು ಸೇರಿ ಭಾಗಿಯಾಗಿ ಶ್ರೀರಾಮಮಂತ್ರ ಜಪಿಸಿದರು. ಮಾಜಿ ಸಚಿವ ಡಿ.ಎನ್.ಜೀವರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಉಮೇಶ್ ತಲಗಾರು, ಅರುಣ್‌ಕುಮಾರ್, ಎಚ್.ಎಸ್.ವೇಣುಗೋಪಾಲ್, ನೂತನ್ ಕುಮಾರ್, ಅಜಿತ್ ಕುಲಾಲ್, ನಾಗೇಶ್ ಶೆಟ್ಟಿ, ಸಂತೋಷ್ ಕೆರೆಮನೆ, ದಿವೀರ್ ಮಲ್ನಾಡ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts