More

    ನೆರೆ ರಾಜ್ಯದ ಕಸಾಯಿಖಾನೆಗೆ ಗೋವು ಸಾಗಾಟ


    ಅಕ್ಕಿಆಲೂರ: ಗೋವು ರಕ್ಷಣೆ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಕಾಯ್ದೆ, ಕಾನೂನು ರೂಪಿಸುತ್ತಿವೆ. ಆದರೆ, ಜಿಲ್ಲೆಯಲ್ಲಿ ಯಾವುದೆ ಭೀತಿ ಇಲ್ಲದೆ ನೆರೆ ರಾಜ್ಯಗಳ ಕಸಾಯಿಖಾನೆಗಳಿಗೆ ಅಕ್ರಮ ಗೋವು ಸಾಗಾಟ ಮಾಡಲಾಗುತ್ತಿದೆ.

    ಹೌದು. ಜಿಲ್ಲೆಯ ಅತಿದೊಡ್ಡ ಜಾನುವಾರು ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಕ್ಕಿಆಲೂರಿನ ಚನ್ನವಿರೇಶ್ವರ ಮಾರುಕಟ್ಟೆಯಲ್ಲಿ ಪ್ರತಿ ಮಂಗಳವಾರ ಜರುಗುವ ಜಾನುವಾರು ಸಂತೆಯಿಂದ ಜಾನುವಾರು ಸಾಗಾಟ ಮಾಡಲಾಗುತ್ತಿದೆ. ಆದರೆ, ಇದರ ವಿರುದ್ಧ ಯಾವುದೆ ಕ್ರಮ ಕೈಗೊಳ್ಳದಿರುವುದು ಪ್ರಾಣಿ ಪ್ರೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಮಾರುಕಟ್ಟೆಯಲ್ಲಿ ಜೋಡಿ ಎತ್ತುಗಳು 50-80 ಸಾವಿರ ರೂ. ವರೆಗೆ ಮಾರಾಟವಾಗುತ್ತಿವೆ. ಎತ್ತುಗಳ ಬಲಿಷ್ಟತೆ, ಹಲ್ಲುಗಳ ಆಧಾರದಲ್ಲಿ ಜೋಡಿ ಎತ್ತುಗಳಿಗೆ 1 ಲಕ್ಷ ರೂ. ವರೆಗೂ ನೀಡಿ ರೈತರು ಖರೀದಿಸುತ್ತಿದ್ದಾರೆ. ಆದರೆ, ಮಾರಾಟಕ್ಕೆ ಕಲ್ಲು ಹಾಕುತ್ತಿರುವ ಮಧ್ಯವರ್ತಿಗಳು ಅದೇ ದರ ಅಥವಾ ಅಗತ್ಯಬಿದ್ದರೆ ಇದಕ್ಕಿಂತ ಹೆಚ್ಚು ಹಣವನ್ನು ವ್ಯಾಪಾರಿಗಳಿಗೆ ನೀಡಿ ಕಟುಕರಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲ ವ್ಯಾಪಾರಿಗಳು, ವಯಸ್ಸಾದ ವ್ಯವಸಾಯಕ್ಕೆ ಯೋಗ್ಯವಿಲ್ಲದ ಎತ್ತುಗಳನ್ನು ಕೇಳಿದಷ್ಟು ಹಣಕ್ಕೆ ಕಸಾಯಿಖಾನೆಗೆ ನೀಡುತ್ತಿದ್ದಾರೆ.

    ಕೇರಳ, ಮಹರಾಷ್ಟ್ರಕ್ಕೆ ಸಾಗಾಟ: ಹಾವೇರಿ, ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳ ಗಡಿಭಾಗದಲ್ಲಿರುವ ಅಕ್ಕಿಆಲೂರಿನಲ್ಲಿ ಪ್ರತಿ ವಾರ ಸಂತೆದಿನ ಸಾವಿರಾರು ಜಾನುವಾರುಗಳು ಮಾರಾಟವಾಗುತ್ತವೆ. ಅನೇಕ ಜಿಲ್ಲೆಗಳಿಂದ ಬರುವ ನೂರಾರು ರೈತರಿಂದ ಹೆಚ್ಚು ಹಣ ಕೊಟ್ಟು ಖರೀದಿಸುತ್ತಿರುವ ಕಸಾಯಿಖಾನೆಯ ಮಾಲಿಕರು ನೆರೆಯ ಕೇರಳ ಮತ್ತು ಮಹಾರಾಷ್ಟ್ರಕ್ಕೆ ಸಾಗಾಣಿಕೆ ಮಾಡುತ್ತಿದ್ದಾರೆ. ದೊಡ್ಡ ವಾಹನಗಳಲ್ಲಿ ಮನಬಂದಂತೆ ಜಾನುವಾರುಗಳನ್ನು ತುಂಬುತ್ತಿರುವ ದೃಶ್ಯ ಮನ ಕಲುಕುತ್ತದೆ.

    ಚೆಕ್ ಪೋಸ್ಟ್ ನಿರ್ವಣಕ್ಕೆ ಒತ್ತಾಯ: ಮೂರು ಜಿಲ್ಲೆಗಳ ಗಡಿಭಾಗಕ್ಕೆ ಹೊಂದಿಕೊಂಡಿರುವ ಅಕ್ಕಿಆಲೂರಿನಿಂದ ಪಕ್ಕದ ಜಿಲ್ಲೆಗಳಿಗೆ ಸಾಗುವ ಜಿಲ್ಲಾಗಡಿಭಾಗದಲ್ಲಿ ಯಾವುದೆ ಚೆಕ್ ಪೋಸ್ಟ್ ನಿರ್ವಿುಸಿಲ್ಲ. ಶಿವಮೊಗ್ಗ ಜಿಲ್ಲೆ ಪ್ರವೇಶಿಸುವ ಗೊಂದಿ ಗ್ರಾಮ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಸಾಗುವ ಹಾನಗಲ್ಲ ತಾಲೂಕಿನ ಕೊನೆಯ ಗ್ರಾಮ ಸಮ್ಮಸಗಿಯಲ್ಲಿ ಯಾವುದೆ ಚೆಕ್ ಪೋಸ್ಟ್​ಇಲ್ಲ. ಹೀಗಾಗಿ, ಅಕ್ರಮ ಜಾನುವಾರು ಸಾಗಾಣಿಕೆ ಎಗ್ಗಿಲಿಲ್ಲದೆ ಸಾಗಿದೆ. ಗೋವು ಸಾಗಾಣಿಕೆ ಜತೆಗೆ ಅನೇಕ ಅಕ್ರಮಕ್ಕೆ ಚಟುವಟಿಕೆಗಳಿಗೆ ಬ್ರೆಕ್ ಹಾಕಬೇಕಾದರೆ ಚೆಕ್ ಪೋಸ್ಟ್ ನಿರ್ಮಾಣ ಅನಿವಾರ್ಯ.


    ಕೃಷಿ ಚಟುವಟಿಕೆ ಹೊರತುಪಡಿಸಿ ಕಸಾಯಿಖಾನೆಗಳಿಗಾಗಿ ಅಕ್ರಮವಾಗಿ ಗೋವು ಸಾಗಾಣಿಕೆ ಕುರಿತು ಮಾಹಿತಿ ನೀಡಿದರೆ, ನಾವೇ ಪ್ರಕರಣ ದಾಖಲಿಸಿಕೊಂಡು, ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ.
    | ಶ್ರೀಶೈಲ ಪಟ್ಟಣಶೆಟ್ಟಿ ಹಾನಗಲ್ಲ ಪಿಎಸ್​ಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts