More

    ‘ಬಹುತೇಕ ಕಿಂಗ್​​ಪಿನ್​ಗಳು ಬಿಜೆಪಿಗರು, ಹಾಗಾಗಿ ತನಿಖೆಯನ್ನು ಎನ್​ಸಿಬಿಯೇ ನಡೆಸಲಿ’

    ಬೆಂಗಳೂರು: ಡ್ರಗ್ಸ್​ ದಂಧೆಯಲ್ಲಿ ಬಿಜೆಪಿಯವರ ನೇರ ಕೈವಾಡ ಇದೆ. ಹಾಗಾಗಿ ಪ್ರಕರಣದ ತನಿಖೆಯನ್ನು ಸಿಸಿಬಿ ಬದಲು ಎನ್​ಸಿ​ಬಿಗೆ ಹಸ್ತಾಂತರಿಸಬೇಕು ಎಂದು ಆಮ್​ ಆದ್ಮಿ ಪಕ್ಷ ಆಗ್ರಹಿಸಿದೆ.

    ಆಪ್​​ನ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶರತ್ ಖಾದ್ರಿ ಮಾತನಾಡಿ, ರಾಗಿಣಿ, ಸಂಜನಾ ಸೇರಿ ಈಗಾಗಲೇ ಸಿಕ್ಕಿಬಿದ್ದಿರುವ ಡ್ರಗ್​​ ಪೆಡ್ಲರ್​​ಗಳಿಂದ ಸಾಕಷ್ಟು ಮಾಹಿತಿ ದೊರೆತಿದೆ. ಆದರೆ ಅದನ್ನು ಮರೆಮಾಚುವ ಸಾಧ್ಯತೆ ಇದೆ. ಹಾಗಾಗಿ ಎನ್​ಸಿಬಿಯವರೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

    ಡ್ರಗ್ಸ್ ಜಾಲದಲ್ಲಿ ಇರುವ ಬಹುತೇಕ ಕಿಂಗ್​ಪಿನ್​​ಗಳು ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆ. ರಾಗಿಣಿ ದ್ವಿವೇದಿ ಅವರು ಕೆ.ಆರ್​.ಪೇಟೆಯ ಉಪಚುನಾವಣೆಯಲ್ಲಿ ಸ್ಟಾರ್​ ಪ್ರಚಾರಕರಾಗಿದ್ದರು. ಆದರೆ ಈಗ ಇವರ್ಯಾರೂ ನಮ್ಮವರಲ್ಲ ಎಂದು ಬಿಜೆಪಿ ಹೇಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯವರೊಂದಿಗಿನ ಸೆಲ್ಫಿ ಶೇರ್ ಮಾಡಿಕೊಂಡ ಜಪಾನ್​ ಪ್ರಧಾನಿ ಶಿಂಜೋ ಅಬೆ

    ರಾಗಿಣಿ ಅವರನ್ನು ಪ್ರಕರಣದಿಂದ ಕೈಬಿಡುವಂತೆ ಬಿಜೆಪಿಯ ಪ್ರಭಾವಿ ನಾಯಕರೊಬ್ಬರ ಒತ್ತಾಯವಿದೆ ಎಂದು ಸ್ವಪಕ್ಷೀಯ ಸಿ.ಟಿ.ರವಿ ಅವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಪ್ರಕರಣದ ತನಿಖೆಯಲ್ಲಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಆದರೆ, ಬಿಜೆಪಿ ನಾಯಕರು, ಗೃಹ ಮಂತ್ರಿಗಳು ಪದೇಪದೆ ನೀಡುವ ಹೇಳಿಕೆಯಿಂದ ಪೊಲೀಸರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ರೀತಿ ಪರೋಕ್ಷ ಒತ್ತಡ ಹೇರುವ ಬುದ್ದಿಯನ್ನು ಬಿಜೆಪಿಯವರು ಬಿಡಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

    ಡ್ರಗ್ಸ್ ಕೇಸ್; ಸಿಸಿಬಿ ವಿಚಾರಣೆ ಮುಗಿಸಿ ಹೊರ ಬಂದ ಸಂಬರಗಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts