More

    ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

    ಧಾರವಾಡ: ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ರಸಗೊಬ್ಬರ ದಾಸ್ತಾನು ಲಭ್ಯವಿದೆ. ಮÁರಾಟಗಾರರು ರಸಗೊಬ್ಬರಗಳನ್ನು ಸಂಗ್ರಹಿಸಿ, ಕೃತಕ ಅಭಾವ ಸೃಷ್ಟಿಸಿದರೆ ಕ್ರಮ ಕÊಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಕಿರಣಕುಮಾರ ಎಂ. ಹೇಳಿದರು.
    ನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಕೃಷಿ ಪರಿಕರ ಮಾರಾಟಗಾರರ ತರಬೇತಿ ಹಾಗೂ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
    ಬಿತ್ತನೆ ಬೀಜ ರಸಗೊಬ್ಬರಗಳನ್ನು ನಿಗದಿತ ದರಗಳ ಪ್ರಕಾರ ಮಾರಾಟ ಮಾಡಬೇಕು. ಕಳಪೆ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮÁರಾಟ ಕಂಡುಬ0ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
    ಬಿಟಿ ಹತ್ತಿಯಲ್ಲಿ ಬರುವ ಗುಲಾಬಿ ಕಾಯಿಕೊರಕದ ಹತೋಟಿ ಬಗ್ಗೆ ಮಾರಾಟಗಾರರಿಗೆ ತಿಳಿಸಿದರು.
    ಉಪ ಕೃಷಿ ನಿರ್ದೇಶಕಿ ಜಯಶ್ರೀ ಹಿರೇಮಠ ಮಾತನಾಡಿ, ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರಗಳನ್ನು ಪೂರೈಕೆ ಮÁಡುವುದು ನಮ್ಮೆಲ್ಲರ ಕರ್ತವ್ಯ. ಪಯÁðಯ ರಸಗೊಬ್ಬರಗಳ ಬಗ್ಗೆ ರÊತರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
    ಜಾರಿದಳದ ಸಹಾಯಕ ಕೃಷಿ ನಿರ್ದೇಶಕ ವಿಠಲರಾವ್ ಅವರು ರಸಗೊ¨್ಬರ ಕಾಯ್ದೆ, ಕೀಟನಾಶಕಗಳ ಕಾಯ್ದೆ, ಬೀಜ ನಿಯಂತ್ರಣ ಹಾಗೂ ಅಽನಿಯಮಗಳು ಕುರಿತು ಮಾಹಿತಿ ನೀಡಿದರು.
    ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ ಮಾತನಾಡಿ, ಮಾರಾಟ ಪರವಾನಗಿ ಇಲ್ಲದಿರುವುದು, ಪರವಾನಗಿ ನವೀಕರಿಸದಿರುವುದು, ರಸಗೊಬ್ಬರಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡುಬ0ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿಯಮಿತವಾಗಿ ದಾಸ್ತಾನಿನಲ್ಲಿ ಇರುವ ರಸಗೊಬ್ಬರಗಳು ಹೊಂದಾಣಿಕೆ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
    ರೈತರಿಗೆ ಶಿ-Áರಸಿನ ಆಧಾರದಲ್ಲಿ ರಸಗೊಬ್ಬರ ಮಾರಾಟ ಮಾಡಬೇಕು. ನ್ಯಾನೋ ಯೂರಿಯÁದ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
    ಗAಗಾಧರ ಕುಲಕರ್ಣಿ, ಕೃಷಿ ಅಽಕಾರಿಗಳಾದ ಗುರುಪ್ರಸಾದ, ರೇಖಾ ಬೆಳ್ಳಟ್ಟಿ, ಮೋಹನ ದಂಡಗಿ, ಮಾರಾಟಗಾರರು ಉಪಸ್ಥಿತರಿದ್ದರು. ಕೃಷಿ ಅಽಕಾರಿ ಮಹದೇವ ಸರಶೆಟ್ಟಿ ಪ್ರಾರ್ಥಿಸಿದರು. ಶಿವಕುಮಾರ ನಿರೂಪಿಸಿದರು. ಶಂಕರ ಹಳದಮನಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts