More

    ಸಣ್ಣ ವಯಸ್ಸಿನಿಂದಲೇ ತರಬೇತಿ ಅವಶ್ಯಕ

    ಸೊರಬ: ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಅಗತ್ಯ ಕೋರ್ಸ್ ಹಾಗೂ ವಿಷಯಗಳ ಬಗ್ಗೆ ಜ್ಞಾನ ನೀಡಿದರೆ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂದು ತರಬೇತುದಾರ ಗಗನ್ ಬಿಜಾಪುರ ಹೇಳಿದರು.

    ಭಾನುವಾರ ಕೋಟಿಪುರದ ಎವರಾನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ಜೆಇಇ, ಸಿಇಟಿ, ನೀಟ್ ಮುಂತಾದ ಪ್ರವೇಶ ಪರೀಕ್ಷೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬೇಕಾಗಿರುವ ೌಂಡೇಶನ್ ಕೋರ್ಸ್‌ಗೆ ಸಂಬಂಧಪಟ್ಟಿರುವ ಪುಸ್ತಕವನ್ನು ಬಿಡುಗಡೆ ಮಾತನಾಡಿ, 6ನೇ ತರಗತಿಯಂದ 10 ತರಗತಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅವಶ್ಯವಿರುವ ಫೌಂಡೇಶನ್ ಕೋರ್ಸ್ ಪುಸ್ತಕ ಬಿಡುಗಡೆಗೊಳಿಸುತ್ತಿರುವುದು ಸೊರಬ ತಾಲೂಕಿನಲ್ಲಿ ಪ್ರಥಮ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಅತ್ಯುತ್ತಮ ಕಾರ್ಯವನ್ನು ಮಾಡಿದೆ. ಎವರಾನ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಇದೇ ರೀತಿ ಹಲವು ಕೋರ್ಸ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.
    ಶಾಲೆಯ ಅಧ್ಯಕ್ಷ ಕಾರ್ತಿಕ್ ಸಾಹುಕಾರ್ ಮಾತನಾಡಿ, ವಿನೂತನ ಪ್ರಯತ್ನಗಳಿಗೆ ಎವರಾನ್ ಸಂಸ್ಥೆ ಹೆಸರುವಾಸಿ. ತಾಲೂಕಿನಲ್ಲಿ ಪ್ರಥಮವಾಗಿ ೌಂಡೇಷನ್ ಕೋರ್ಸ್ ಬುಕ್ ವಿನ್ಯಾಸ ಮಾಡಲಾಗಿದೆ . ಈ ಪುಸ್ತಕವನ್ನು ಡಿಸೈನ್ ಮಾಡಿದಂತಹ ಮಕ್ಬುಲ್ ಹಾಗೂ ಸಹಕಾರ ನೀಡಿದ ಗಗನ್ ಬಿಜಾಪುರ ಪ್ರಯತ್ನ ಶ್ಲಾಘನೀಯ ಎಂದರು.
    ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಚರಿತಾ ಕಾರ್ತಿಕ್, ಸೇಜಲ್ ಸಾಹುಕಾರ್, ಅಧ್ಯಾಪಕರಾದ ಯಲ್ಲಪ್ಪ, ಕಿರಣ, ಬಸವರಾಜ್, ಕಾಂತಪ್ಪ, ನೇಹಾ, ಶರತ್, ಶ್ವೇತಾ, ಅಶ್ವತ್ಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts