More

    ಸೇವಾದಳದಿಂದ ಕಾರ್ಯಕರ್ತರಿಗೆ ತರಬೇತಿ

    ಉಡುಪಿ: ಕಾಂಗ್ರೆಸ್ ಆದರ್ಶ ಮತ್ತು ತತ್ವ ಮನವರಿಕೆ ಮಾಡುವುದು ಹಾಗೂ ದೇಶದ ಆಗುಹೋಗುಗಳ ವಿಶೇಷ ಮಾಹಿತಿ ನೀಡುವ ಉದ್ದೇಶದಿಂದ ರಾಜ್ಯಾದ್ಯಂತ ಸೇವಾದಳದ ಮೂಲಕ ಕಾರ್ಯಕರ್ತರಿಗೆ ತರಬೇತಿ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

    ಶನಿವಾರ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಘಟಪ್ರಭಾ ಕ್ಷೇತ್ರದಲ್ಲಿ ಸೇವಾದಳ ಕೇಂದ್ರ ಈಗಾಗಲೇ ಪ್ರಾರಂಭವಾಗಿದೆ. ಜನರಿಗೆ ಕಾಂಗ್ರೆಸ್ ವಿಚಾರ ಹೆಚ್ಚು ತಲುಪಬೇಕು. ಅದಕ್ಕಾಗಿ ತರಬೇತಿ ಹಮ್ಮಿಕೊಳ್ಳಲಾಗಿದೆ. 2021, ಏಪ್ರಿಲ್‌ನಲ್ಲಿ ನಡೆಯುವ ಗ್ರಾಪಂ, ತಾಪಂ, ಜಿಪಂ ಚುನಾವಣೆಗೆ ಪೂರ್ವಭಾವಿಯಾಗಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಸ್ಥಳೀಯ ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ, ಜಿಲ್ಲಾ ಅಥವಾ ರಾಜ್ಯಮಟ್ಟದಲ್ಲಿ ಇದನ್ನು ಪರಿಹರಿಸಲು ನಿರ್ಧರಿಸಲಾಗಿದೆ ಎಂದರು.

    2023ರ ವಿಧಾನಸಭಾ ಚುನಾವಣೆಯತ್ತ ಕಾರ್ಯಕರ್ತರ ಗಮನವಿರಬೇಕು. ಜಾತ್ಯತೀತ ಶಕ್ತಿಗಳು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

    ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಪಿ.ವಿ. ಮೋಹನ್, ದಿನೇಶ್ ಪುತ್ರನ್, ಪ್ರಖ್ಯಾತ ಶೆಟ್ಟಿ, ಸತೀಶ್ ಅಮಿನ್ ಪಡುಕೆರೆ, ರೋಶನಿ ಒಲಿವರ್, ಡಾ. ಸುನೀತಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ಗೀತಾ ವಾಗ್ಲೆ, ಸೌರಭಬಲ್ಲಾಳ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts