More

    ಮೊಬೈಲ್​ ಸಂಖ್ಯೆಗಿನ್ನು 11 ಅಂಕಿಗಳು, ಟ್ರಾಯ್​ ಶಿಫಾರಸು

    ನವದೆಹಲಿ: ಮೊಬೈಲ್​ ಹಾಗೂ ಫಿಕ್ಸೆಡ್​ ಲೈನ್​ ( ಲ್ಯಾಂಡ್​ಲೈನ್​) ದೂರವಾಣಿ ಸಂಖ್ಯೆಗಳು ಇನ್ನು ಮಂದೆ 10 ಅಂಕಿಗಳ ಬದಲಾಗಿ 11 ಅಂಕಿಗಳನ್ನು ಹೊಂದಿರಲಿವೆ.
    ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್​) ದೇಶದಲ್ಲಿ ಮೊಬೈಲ್​ ಹಾಗೂ ಸ್ಥಿರ ದೂರವಾಣಿ ಸಂಪರ್ಕಕ್ಕೆ ಏಕೀಕೃತ ಸಂಖ್ಯೆ ವ್ಯವಸ್ಥೆಯನ್ನು ರೂಪಿಸಿದ್ದು, ಅದರಂತೆ, ಎಲ್ಲ ಮೊಬೈಲ್​ ಸಂಖ್ಯೆಗಳು ಹನ್ನೊಂದು ಅಂಕಿಗಳಿಗೆ ಬದಲಾಗಲಿವೆ.

    ಆದರೆ, ಈಗ ಸದ್ಯ ಇರುವ ಮೊಬೈಲ್​ ಸಂಖ್ಯೆಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ. ಸ್ಥಿರ ದೂರವಾಣಿಯಿಂದ ಮೊಬೈಲ್​ಗೆ ಕರೆ ಮಾಡುವುದಾದರೆ ಮಾತ್ರ ಆರಂಭದಲ್ಲಿ “0” ಒತ್ತಿ ನಂತರ ನಂಬರ್​ ಒತ್ತಬೇಕಾಗುತ್ತದೆ.

    ಇದನ್ನೂ ಓದಿ; ಆರ್ಥಿಕ ಪುನಶ್ಚೇತನಕ್ಕೆ ಮೂರನೇ ಸುತ್ತಿನ ಪ್ಯಾಕೇಜ್​ ನಿರೀಕ್ಷೆ; ಬೇಡಿಕೆ ಸೃಷ್ಟಿಗೆ ಸಿಗಲಿದೆಯೇ ನಗದು ಪರಿಹಾರ 

    ಸದ್ಯಕ್ಕೆ ಮಾಡಲಾಗಿರುವ ಬದಲಾವಣೆ ಇದೊಂದೇ. ಇನ್ನು ಮೊಬೈಲ್​ನಿಂದ ಮೊಬೈಲ್​ಗೆ, ಮೊಬೈಲ್​ನಿಂದ ಸ್ಥಿರ ದೂರವಾಣಿಗೆ ಹಾಗೂ ಸ್ಥಿರ ದೂರವಾಣಿಯಿಂದ ಸ್ಥಿರ ದೂರವಾಣಿಗೆ ಕರೆ ಮಾಡುವಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

    ಕಳೆದ ಜನವರಿಯಲ್ಲಿ ನಡೆದಿದ್ದ ದೂರ ಸಂಪರ್ಕ ಇಲಾಖೆಯ ಓಪನ್​ ಹೌಸ್​ ಡಿಸ್ಕಷನ್​ನಲ್ಲಿ ಹಲವು ಸಲಹೆಗಳನ್ನು ನೀಡಲಾಗಿತ್ತು. ಅದರಲ್ಲಿ ದೂರವಾಣಿ ಸಂಖ್ಯೆಯನ್ನು 10ರಿಂದ 11 ಅಂಕಿಗಳಿಗೆ ಬದಲಾಯಿಸುವುದು ಕೂಡ ಒಂದಾಗಿತ್ತು. ಈ ಸಲಹೆಯನ್ನು ಅಂಗೀಕರಿಸಿರುವ ಟ್ರಾಯ್​ ಈಗಿರುವ ಸಂಖ್ಯೆಗಳಿಗೆ 0 ಸೇರಿಸಲು ಹಾಗೂ ಮುಂದೆ ನೀಡಲಾಗುವ ಸಂಖ್ಯೆಗಳನ್ನು 11 ಅಂಕಿಗಳಿರುವಂತೆ ನೋಡಿಕೊಳ್ಳಲು ಸೂಚಿಸಿದೆ.

    ಇದನ್ನೂ ಓದಿ; ಬುಕ್​ ಅಲ್ಲ, ಟ್ಯಾಬ್​ ಹಿಡಿದು ಹೋಗಬೇಕಿಗ ಶಾಲೆಗೆ; ಆನ್​ಲೈನ್​ ಮೋಡ್​ಗೆ ಶಿಫ್ಟ್​ ಆದ ಶಿಕ್ಷಣ 

    ಹೊಸ 11 ಅಂಕಿಗಳ ದೂರವಾಣಿ ಸಂಖ್ಯೆ 9ರಿಂದ ಶುರುವಾಗಲಿದೆ. ಈ ಬದಲಾವಣೆಯಿಂದ ಒಟ್ಟಾರೆ ದೂರವಾಣಿ ಸಂಖ್ಯೆಗಳ ಸಾಮರ್ಥ್ಯವನ್ನು 1,000 ಕೋಟಿಗೆ ಹೆಚ್ಚಿಸಿದಂತಾಗಲಿದೆ. ಸದ್ಯ ಭಾರತದಲ್ಲಿ 120 ಕೋಟಿ ದೂರವಾಣಿ ಸಂಖ್ಯೆಗಳು ಬಳಕೆಯಲ್ಲಿವೆ.

    ಸಾಮೂಹಿಕ ಪ್ರಾರ್ಥನೆ ಬಂದ್​, ಪಾಲಕರಿಗೂ ನಿರ್ಬಂಧ, ಮನೆಯೂಟ ಕಡ್ಡಾಯ… ಶಾಲಾರಂಭಕ್ಕೆ ಹೀಗಿರಲಿದೆಯೇ ಮಾರ್ಗಸೂಚಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts