More

    ಡಿಟಿಎಚ್​ ಸೇವೆಗಳನ್ನು ನಿಯಮದ ಚೌಕಟ್ಟಿಗೆ ತರುವ ಉದ್ದೇಶದ ಕನ್ಸಲ್ಟೇಶನ್ ಪೇಪರ್​ ಪ್ರಕಟಿಸಿದೆ ಟ್ರಾಯ್​

    ನವದೆಹಲಿ: ಡೈರೆಕ್ಟ್ -ಟು-ಹೋಮ್ (ಡಿಟಿಎಚ್​) ಸೇವೆಗಳನ್ನು ನಿಯಮಗಳ ಚೌಕಟ್ಟಿಗೆ ತರುವ ಉದ್ದೇಶದ ಕನ್ಸಲ್ಟೇಶನ್ ಪೇಪರ್ ಅನ್ನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್​) ಪ್ರಕಟಿಸಿದೆ. ಈ ಸಮಾಲೋಚನಾ ಪೇಪರ್ ಓದಿಕೊಂಡು ಅಭಿಪ್ರಾಯ, ಸಲಹೆಗಳನ್ನ ನೀಡುವಂತೆ ಅದು ಸೋಮವಾರ ಪಾಲುದಾರರನ್ನು ಕೇಳಿಕೊಂಡಿದೆ.

    ಕ್ಷೇತ್ರ ಪಾಲುದಾರರು ಇದಕ್ಕೆ ಸಂಬಂಧಿಸಿದ ಲಿಖಿತ ಪ್ರತಿಕ್ರಿಯೆಯನ್ನು ಡಿಸೆಂಬರ್ 14ರೊಳಗೆ ಮತ್ತು ಮರು ಪ್ರತಿಕ್ರಿಯೆಯನ್ನು ಡಿಸೆಂಬರ್ 19ರೊಳಗೆ ಸಲ್ಲಿಸಬೇಕು. ಪ್ರತಿಕ್ರಿಯೆ, ಮರು ಪ್ರತಿಕ್ರಿಯೆಗಳನ್ನು ಇ-ಮೇಲ್ ಮುಖಾಂತರ ಕಳುಹಿಸಿದರೆ ಒಳಿತು ಎಂದು ಟ್ರಾಯ್ ಸ್ಪಷ್ಟವಾಗಿ ಹೇಳಿದೆ.

    ಇದನ್ನೂ ಓದಿ: ಹನಿಮೂನ್​ ಪ್ರವಾಸಕ್ಕೆ 1 ರೂಪಾಯಿ ಖರ್ಚು ಮಾಡಿಲ್ವಂತೆ ಕಾಜಲ್​ ದಂಪತಿ: ಐಷಾರಾಮಿ ಸೌಲಭ್ಯ ಫ್ರೀ ಸಿಕ್ಕಿದ್ಹೇಗೆ?

    ಟ್ರಾಯ್​ ಇದಕ್ಕೂ ಮೊದಲು ಡಿಟಿಎಚ್​ ಮತ್ತು ಮಲ್ಟಿ-ಸಿಸ್ಟಮ್​ ಆಪರೇಟರ್ಸ್ (ಎಂಎಸ್​ಒ) ಕುರಿತ ರೆಗ್ಯುಲೇಟರಿ ಫ್ರೇಮ್​ವರ್ಕ್​ ಫಾರ್​ ಪ್ಲಾಟ್​ಫಾರಂ ಸರ್ವೀಸಸ್​ ಅನ್ನು ಪ್ರಕಟಿಸಿತ್ತು. ಕೇಬಲ್ ಟಿವಿ ಮತ್ತು ಅದರ ಚಂದಾದಾರರಿಗೆ ಸೇವೆ ಒದಗಿಸುವ ಅಧಿಕೃತ ಸೇವಾ ಪೂರೈಕೆದಾರರನ್ನು ಎಂಎಸ್​ಒ ಎನ್ನುತ್ತಾರೆ. ನಿಯಮ ರೂಪಿಸುವ ಸಂದರ್ಭದಲ್ಲಿ ಡಿಟಿಎಚ್ ಇರುವಲ್ಲಿ ಅಗತ್ಯವಿರುವ ಕಡೆಗೆ ಎಂಎಸ್​ಒ ಎಂದೂ ಸೇರಿಸಬೇಕು ಎಂದು ಸಚಿವಾಲಯವೂ ಸಲಹೆ ನೀಡಿದೆ. ಎಲ್ಲ ಸಮಾಲೋಚನಾ ಪ್ರಕ್ರಿಯೆಗಳು ಮುಗಿದ ಬಳಿಕ ಟ್ರಾಯ್​ ತನ್ನ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಒನ್ ಟೇಕ್ ಸಿನಿಮಾ; ಹೊಸ ದಾಖಲೆ ಬರೆದ ರಕ್ತಗುಲಾಬಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts