More

    ಸಂಚಾರ ನಿಯಮ ಕಟ್ಟುನಿಟ್ಟು

    ಚಿಕ್ಕಮಗಳೂರು: ನಗರದಲ್ಲಿ ಸಂಚಾರವೇ ದುಸ್ತರ ಎನ್ನುವುದನ್ನು ಮನಗಂಡ ಪೊಲೀಸ್ ಇಲಾಖೆ ಸುಗಮ ಸಂಚಾರಕ್ಕೆ ಪರಿಣಾಮಕಾರಿ ಕ್ರಮ ಕೈಗೊಂಡಿದೆ. ಹಲವು ರಸ್ತೆಗಳಲ್ಲಿನ ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ಅಪಘಾತ ತಡೆಯಲು ಕೆಲ ರಸ್ತೆಗಳಲ್ಲಿ ಹಂಪ್ ನಿರ್ಮಿಸಲು ನಗರಸಭೆಗೆ ಕೋರಿಕೆ ಸಲ್ಲಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.
    ಪ್ರಮುಖ ವೃತ್ತಗಳ ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳ ನಿಲುಗಡೆ ಮಾಡುತ್ತಿದ್ದರಿಂದಾಗಿ ಪ್ರತಿದಿನ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯ ಎನ್ನುವಂತಾಗಿತ್ತು. ಹೀಗಾಗಿ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ.
    ಎಐಟಿ ಸರ್ಕಲ್‌ನಲ್ಲಿ ವಾಹನ ನಿಲುಗಡೆಯಿಂದಾಗಿ ವಾಹನ ಸವಾರರು ಪ್ರತಿದಿನ ಕಿರಿಕಿರಿ ಅನುಭವಿಸುವಂತಾಗಿತ್ತು. ಹೀಗಾಗಿ ಅಲ್ಲಿ ಬ್ಯಾರಿಕೇಡ್ ಅಳವಡಿಸಿ ಟೇಪ್ ಕಟ್ಟಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಜತೆಗೆ ಓರ್ವ ಸಿಬ್ಬಂದಿಯನ್ನೂ ಅಲ್ಲಿ ನಿಯೋಜಿಸಿ ಯಾರೂ ವಾಹನ ನಿಲ್ಲಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ.
    ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಸರ್ಕಲ್ ಹಾಗೂ ಕ್ರಾಸ್ ಬಳಿ ಅಪಘಾತಗಳು ಹೆಚ್ಚುತ್ತಿವೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಚತುಷ್ಪಥ ರಸ್ತೆಯಲ್ಲಿ ರಮ್ಲರ್ ಸ್ಟ್ರಿಪ್ಸ್ ಅಳವಡಿಸಲಾಗಿದೆ. ಆದರೆ ಗ್ರಾಮಾಂತರ ಠಾಣೆಗೆ ತೆರಳುವ ಅಡ್ಡರಸ್ತೆ ಹಾಗೂ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಯಾವುದೇ ಹಂಪ್ಸ್‌ಗಳಿಲ್ಲ ಎನ್ನುವುದನ್ನು ಮನಗಂಡ ಟ್ರಾಫಿಕ್ ಇನ್ಸ್‌ಪೆಕ್ಟರ್ ಕೂಡಲೇ ಹಂಪ್ ಅಳವಡಿಸುವಂತೆ ನಗರಸಭೆಗೆ ಕೋರಿಕೆ ಪತ್ರ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts