More

    ರಕ್ತಕಣ್ಣೀರು ಸುರಿಸುತ್ತಿರುವ ಷೇರುಪೇಟೆ ಹೂಡಿಕೆದಾರರು: ಆರಂಭಿಕ ಟ್ರೇಡ್​ನಲ್ಲಿ ಸೆನ್ಸೆಕ್ಸ್ 3,000 ಅಂಶ ಕುಸಿತ, 45 ನಿಮಿಷ ವಹಿವಾಟು ಬಂದ್​

    ಮುಂಬೈ: ಕರೋನಾ ವೈರಸ್ ಆತಂಕ ಜಾಗತಿಕ ಅರ್ಥ ವ್ಯವಸ್ಥೆಯನ್ನು ತಲ್ಲಣಗೊಳಿಸಿದ್ದು, ಅದರ ಪರಿಣಾಮ ಷೇರುಪೇಟೆ ಹೂಡಿಕೆದಾರರು ರಕ್ತಕಣ್ಣೀರು ಸುರಿಸತೊಡಗಿದ್ದಾರೆ. ಭಾರತೀಯ ಷೇರುಪೇಟೆಯಲ್ಲಿ ಶುಕ್ರವಾರ ಬೆಳಗ್ಗೆ ಆರಂಭಿಕ ವಹಿವಾಟಿನಲ್ಲೇ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ 3,000 ಅಂಶ ಕುಸಿತ ಕಂಡಿತು. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 960 ಅಂಶ ಕುಸಿದು ಹೂಡಿಕೆದಾರರಲ್ಲಿ ಆತಂಕ, ಕಳವಳ ಮೂಡಿಸಿತು.

    ಸೆನ್ಸೆಕ್ಸ್ 3,000 ಅಂಶ ಏಕಾಕಿಯಾಗಿ ಕುಸಿದು 30,229.20 ತಲುಪಿದ ಕೂಡಲೇ ಬಿಎಸ್​ಇ 45 ನಿಮಿಷಗಳ ಕಾಲ ವಹಿವಾಟನ್ನು ಸ್ಥಗಿತಗೊಳಿಸಿತು. ಇದೇ ವೇಳೆ ನಿಫ್ಟಿ 960 ಅಂಶ ಕುಸಿದು8,860.20 ತಲುಪಿತ್ತು. ಎನ್​ಎಸ್​ಇ ಕೂಡ 45 ನಿಮಿಷಗಳ ಕಾಲ ವಹಿವಾಟು ಸ್ಥಗಿತಗೊಳಿಸಿದೆ. ಸತತ ಮೂರನೇ ದಿನ ಸೆನ್ಸೆಕ್ಸ್ ಭಾರಿ ಅಂಶಗಳ ಕುಸಿತವನ್ನು ದಾಖಲಿಸುತ್ತಿದ್ದು, ಹೂಡಿಕೆದಾರರಲ್ಲಿ ಭಯ ಹೆಚ್ಚಿಸಿದೆ. ಆದಾಗ್ಯೂ, ಕೆಲವೇ ಹೊತ್ತಿನಲ್ಲಿ ಎರಡೂ ಕೇಂದ್ರಗಳಲ್ಲಿ ಮತ್ತೆ ವಹಿವಾಟು ಆರಂಭವಾಗಲಿದೆ.

    ಈ ರೀತಿ ಕುಸಿತದ ಸನ್ನಿವೇಶ ಭಾರತೀಯ ಷೇರುಪೇಟೆಯಲ್ಲಷ್ಟೇ ಅಲ್ಲ, ಅಮೆರಿಕ ಮತ್ತು ಇತರೆ ದೇಶಗಳ ಷೇರುಪೇಟೆಗಳನ್ನೂ ಬಾಧಿಸಿದೆ. ಲೆವೆಲ್ -1 ಸರ್ಕ್ಯೂಟ್​ ಬ್ರೇಕರ್​ ಅಮೆರಿಕದ ಮಾರುಕಟ್ಟೆಯಲ್ಲಿ ಒಂದು ವಾರದಲ್ಲಿ ಎರಡು ಸಲ ದಾಖಲಾಗಿದೆ. ಡೌ ಜೋನ್ಸ್​ ಪ್ರಸ್ತುತ 1,696.31 ಅಂಶ ಕುಸಿದು 21,856.91ರಲ್ಲಿ ವಹಿವಾಟು ನಡೆಸಿದೆ. ಇದು ಹಿಂದಿನ ದಿನದ ಕೊನೆಯ ಅಂಶಕ್ಕಿಂತ ಶೇಕಡ 7.02 ಇಳಿಕೆಯಾಗಿದೆ. ಇದೇ ವೇಳೆ ಎಸ್​ಆ್ಯಂಡ್ ಪಿ500 ಕೂಡ 192.33 ಅಂಶ ಕುಸಿದು 2,549.05ರಲ್ಲಿ ವಹಿವಾಟು ನಡೆಸಿದೆ. (ಏಜೆನ್ಸೀಸ್)

    ರಕ್ತಕಣ್ಣೀರು ಸುರಿಸುತ್ತಿರುವ ಷೇರುಪೇಟೆ ಹೂಡಿಕೆದಾರರು: ಆರಂಭಿಕ ಟ್ರೇಡ್​ನಲ್ಲಿ ಸೆನ್ಸೆಕ್ಸ್ 3,000 ಅಂಶ ಕುಸಿತ, 45 ನಿಮಿಷ ವಹಿವಾಟು ಬಂದ್​

    ಕಮಲ್​ನಾಥ್ ಸರ್ಕಾರಕ್ಕೆ ವಿಶ್ವಾಸಮತ ಸಂಕಷ್ಟ: ಬಿಜೆಪಿ ನಾಯಕರಿಂದ ಸಿದ್ಧತೆ, 16ರಂದು ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪ ಮಂಡನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts