More

    ಕಂಟೇನ್ಮೆಂಟ್ ಪ್ರದೇಶದ ಮೇಲೆ ನಿಗಾ

    ಶಿಗ್ಗಾಂವಿ: ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮೇ 11ರಂದು ಸೀಲ್​ಡೌನ್ ಮಾಡಲಾಗಿರುವ ತಾಲೂಕಿನ ಅಂದಲಗಿ ಗ್ರಾಮದ ಬಫರ್ ಜೋನ್ ಹಾಗೂ ಕಂಟೇನ್ಮೆಂಟ್ ಪ್ರದೇಶದ ಮೇಲೆ ಅಧಿಕಾರಿಗಳು ನಿಗಾವಹಿಸಿದ್ದು, ಯಾವುದೇ ಸೋಂಕು ಮರುಕಳಿಸದಂತೆ ಆರೋಗ್ಯ ತಪಾಸಣೆ, ಸ್ವಚ್ಛತೆ, ಮನೆಮನೆಗೆ ಶುದ್ಧ ಕುಡಿಯುವ ನೀರು ಹಾಗೂ ಉಚಿತ ಪಡಿತರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕಂಟೇನ್ಮೆಂಟ್ ಪ್ರದೇಶದ ಕಮಾಂಡರ್, ಸವಣೂರ ಎಸಿ ಅನ್ನಪೂರ್ಣ ಮುದಕಮ್ಮನವರ ತಿಳಿಸಿದ್ದಾರೆ.

    ವಿವಿಧ ಇಲಾಖಾ ಅಧಿಕಾರಿಗಳು ದಿನದ 24 ಗಂಟೆ ಕಂಟೇನ್ಮೆಂಟ್ ಪ್ರದೇಶದಲ್ಲಿ ಯಾವುದೇ ವ್ಯಕ್ತಿಗಳು ಒಳಬರದಂತೆ ಹಾಗೂ ಹೊರ ಹೋಗದಂತೆ ನಿಗಾ ವಹಿಸಿದ್ದಾರೆ. ಅಂದಲಗಿ ಮತ್ತು ಮುದ್ದಿನಕೊಪ್ಪ ಗ್ರಾಮಗಳಲ್ಲಿ ಎರಡು ಚೆಕ್​ಪೋಸ್ಟ್ ನಿರ್ವಿುಸಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೋಂಕು ಕಂಡುಬಂದ ವ್ಯಕ್ತಿಯ ಮನೆಯ ಸುತ್ತಲಿನ ಪ್ರದೇಶ ಹಾಗೂ ಗ್ರಾಮದ ಸುತ್ತ ನಿತ್ಯ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ. ಗಟಾರ ಸ್ವಚ್ಛತೆ, ಮೆಲಾಥೀನ್, ಐಪ್ಲೋರೈಡ್ ಸಿಂಪರಣೆ ಮಾಡಲಾಗುತ್ತಿದೆ.

    ಅಂದಲಗಿ ಗ್ರಾಮಸ್ಥರಿಗೆ ಉಚಿತ ಪಡಿತರ ನೀಡಲಾಗಿದೆ. ಎರಡು ದಿನಸಿ, ತರಕಾರಿ ಅಂಗಡಿಗಳು, ಹಾಲು ವಿತರಕರಿಗೆ ಪಾಸ್​ಗಳನ್ನು ನೀಡಿ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಇಲ್ಲಿನ 161 ಕುಟುಂಬಗಳಿಗೆ ಉಚಿತ ಆಹಾರ ಕಿಟ್​ಗಳನ್ನು ಪೂರೈಸಿದ್ದಾರೆ. ಗ್ರಾಮದಲ್ಲಿ 24 ತಾಸು ಕಾರ್ಯನಿರ್ವಹಿಸುವಂತೆ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಇಲ್ಲಿಯ ಜನರು ಸಹಾಯವಾಣಿ ಸಂರ್ಪಸಿದರೆ ವೈದ್ಯಕೀಯ ನೆರವು ಸೇರಿ ಯಾವುದೇ ತರಹದ ನೆರವು ಒದಗಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts