More

    ನರೇಗಾದಡಿ ಜನರಿಗೆ ಕೆಲಸ ನೀಡಿ

    ಯಲಬುರ್ಗಾ: ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು ಗ್ರಾಮಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಜತೆಗೆ ನರೇಗಾ ಯೋಜನೆಯಡಿ ಕಾಮಗಾರಿ ಆರಂಭಿಸಿ ಜನರಿಗೆ ಕೆಲಸ ಕೊಡಬೇಕು. ಎಂದು ತಾಪಂ ಇಒ ಸಂತೋಷ ಪಾಟೀಲ್ ತಿಳಿಸಿದರು.

    ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ಗಾಪಂಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ನರೇಗಾ ಯೋಜನೆಯಡಿ ನಾನಾ ಕಾಮಗಾರಿ ಪ್ರಾರಂಭಿಸುವುದು ಹಾಗೂ ಕೂಲಿಕಾರರಿಂದ ಅರ್ಜಿ ಪಡೆಯುವ ಕಾರ್ಯದಲ್ಲಿ ಸಮರ್ಪಕ ಪ್ರಗತಿ ಸಾಧಿಸಬೇಕು. ಗ್ರಾಪಂ ಮಟ್ಟದಲ್ಲಿ ಸರ್ಕಾರಿ ಯೋಜನೆಗಳ ಕುರಿತು ಅರಿವು ಮೂಡಿಸಬೇಕು. ಜಲ ಜೀವನ್ ಮಿಷನ್ ಕಾರ್ಯಕ್ರಮದ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಬೇಕು. ಶೌಚಗೃಹ ಬಳಕೆ, ಸ್ವಚ್ಛತೆ, ನೈರ್ಮಲ್ಯ, ಕುಡಿವ ನೀರಿನ ತೊಂದರೆಯಾಗಂತೆ ನೋಡಿಕೊಳ್ಳಬೇಕು. ಶೇ.100 ಕರ ವಸೂಲಿ ಮಾಡಬೇಕು. ಈ ಕುರಿತು ಪಿಡಿಒಗಳು ಡೇಟಾ ಎಂಟ್ರಿ ಆಪರೇಟರ್, ಕರವಸೂಲಿಗಾರರಿಂದ ಮಾಹಿತಿ ಪಡೆದು ಪ್ರಗತಿ ಸಾಧಿಸಬೇಕು ಎಂದರು.

    ತಾಪಂ ಸಹಾಯಕ ನಿರ್ದೇಶಕರಾದ ಎಫ್.ಎಂ.ಕಳ್ಳಿ, ಶರಣಪ್ಪ ಕೆಳಗಿನಮನಿ, ಎಂಐಎಸ್ ಸಂಯೋಜಕರಾದ ಬಸವರಾಜ ದೊಡ್ಮನಿ, ಗಿರೀಶ, ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಲಕ್ಷ್ಮಣ ಕೆರಳ್ಳಿ, ವಿಷಯ ನಿರ್ವಾಹಕರಾದ ಶೇಖಪ್ಪ ಉಪ್ಪಾರ, ಬಸಲಿಂಗಪ್ಪ ಹಂಚಿನಾಳ, ಚನ್ನಬಸಪ್ಪ ಸಣ್ಣಕರಡದ, ಯಲ್ಲಪ್ಪ, ಆಡಳಿತ ಸಹಾಯಕಿಯರಾದ ಸಹನಾ, ಕಾವ್ಯಾ, ಪಿಡಿಒಗಳು, ಡೇಟಾ ಆಪರೇಟರ್ ಹಾಗೂ ಕರವಸೂಲಿಗಾರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts