More

    ಟೌನ್ ಸರ್ವೇ ಸೈಟ್‌ಗಳಿಗೆ ಬುಡಾ ಫಾರ್ಮ್ ನಂ.2 ನೀಡಲಿ: ಸಾಮಾಜಿಕ ಕಾರ್ಯಕರ್ತ ಮೇಕಲ ಈಶ್ವರ ರೆಡ್ಡಿ ಒತ್ತಾಯ

    ಬಳ್ಳಾರಿ: ನಗರದ ಓಲ್ಡ್ ಸಿಟಿಯಲ್ಲಿರುವ ಮುನಿಸಿಪಾಲಿಟಿಯ ಟೌನ್ ಸರ್ವೇ ನಿವೇಶನಗಳು (ಟಿ.ಎಸ್.ಸೈಟ್ಸ್) ಬ್ರಿಟಿಷ್ ಕಾಲದಿಂದಲೂ ಇವೆ. ಆದರೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಫಾರ್ಮ್ ನಂ. 2 ವಿತರಿಸುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಮೇಕಲ ಈಶ್ವರ ರೆಡ್ಡಿ ಆರೋಪಿಸಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದಲ್ಲಿ ಶೇ.60 ಟಿ.ಎಸ್. ಸೈಟ್‌ಗಳಿದ್ದು, ಫಾರ್ಮ್ ನಂ.2 ನೀಡದ ಕಾರಣ ಮಾರಾಟ ಹಾಗೂ ಪಾಲು ಹಂಚಿಕೆಗೆ ತೊಂದರೆಯಾಗುತ್ತಿದೆ. ನಗರ ಹೊರವಲಯದಲ್ಲಿ ಬುಡಾದಿಂದ ಅನುಮತಿ ಪಡೆದು ಲೆಔಟ್ ನಿರ್ಮಿಸಲಾಗುತ್ತಿದೆ. ಆದರೆ, ಟಿ.ಎಸ್. ಸೈಟ್‌ಗಳಿಗೆ ನೀಡುತ್ತಿಲ್ಲ. ನಮ್ಮ ಜಾಗ ಅನಧಿಕೃತವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಶ್ರೀಮಂತರು ಹೊರಹೊಲಯದ ಬಡಾವಣೆಗಳಲ್ಲಿ ದುಪ್ಪಟ್ಟು ಹಣ ನೀಡಿ ಜಾಗ ಖರೀದಿ ಮಾಡುತ್ತಾರೆ. ಆದರೆ, ನಾವು ಬಡವರು. ಪಾಲಿಕೆಗೆ ಎಲ್ಲ ರೀತಿಯ ತೆರಿಗೆ ಪಾವತಿಸಲಾಗಿದೆ. ನಗರದ ಬಹುತೇಕ ಕೆಲಸಗಳನ್ನು ಪಾಲಿಕೆಯೇ ಮಾಡುತ್ತಿರುವಾಗ ಬುಡಾಕ್ಕೆ ಏಕೆ ಪ್ರಾಮುಖ್ಯತೆ ನೀಡಲಾಗಿದೆ. ನಮ್ಮ ಜಾಗಗಳಿಗೆ ಆದಷ್ಟು ಬೇಗ ಫಾರ್ಮ್ ನಂ.2 ನೀಡಬೇಕು. ಇಲ್ಲದಿದ್ದರೆ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಮುಖಂಡರಾದ ಎಸ್.ಕೃಷ್ಣ, ಜಿ.ಎಂ.ಬಾಷಾ, ಸುರೇಶ್, ಸಲಾವುದ್ದೀನ್, ಎಂ.ಕೆ. ಜಗನ್ನಾಥ, ಪಿ.ನಾರಾಯಣ, ಶಿವಾನಂದ, ಕೆ.ವೆಂಕಟೇಶ್, ತೇಜು ಪಾಟೀಲ್, ಎಂ.ಅಭಿಷೇಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts