More

    ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದ ನಾಯಕತ್ವ ರೇಸ್‌ನಲ್ಲಿ ಧವನ್, ಪಾಂಡ್ಯ!

    ನವದೆಹಲಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಸಹಿತ ಪ್ರಮುಖ ಆಟಗಾರರನ್ನು ಒಳಗೊಂಡಿರುವ ಭಾರತ ತಂಡ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿರುವ ನಡುವೆಯೂ ಅದೇ ಸಮಯದಲ್ಲಿ ಶ್ರೀಲಂಕಾ ಪ್ರವಾಸಕ್ಕೆ ಪ್ರತ್ಯೇಕವಾದ ತಂಡವೊಂದನ್ನು ಕಳುಹಿಸಲು ಯೋಜನೆ ರೂಪಿಸಿದೆ. ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಈ 2ನೇ ಭಾರತ ತಂಡವನ್ನು ಅನುಭವಿ ಆರಂಭಿಕ ಶಿಖರ್ ಧವನ್ ಅಥವಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸುವ ಸಾಧ್ಯತೆ ಇದೆ.

    ಮುಂಬೈ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರ ಫಿಟ್ನೆಸ್ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದ ಕಾರಣ ಇವರಿಬ್ಬರ ಹೆಸರು ನಾಯಕತ್ವ ರೇಸ್‌ನಲ್ಲಿ ಕಾಣಿಸಿಕೊಂಡಿದೆ. ‘ಶ್ರೇಯಸ್ ಅಯ್ಯರ್ ಪೂರ್ಣ ಫಿಟ್ ಆಗಿದ್ದರೆ ಖಂಡಿತವಾಗಿಯೂ ಅವರೇ ತಂಡದ ನಾಯಕರಾಗಿರುತ್ತಾರೆ. ಆದರೆ ಜುಲೈನಲ್ಲಿ ಶ್ರೀಲಂಕಾಕ್ಕೆ ತೆರಳಲು ಅವರು ಮ್ಯಾಚ್-ಫಿಟ್ ಆಗುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಆದರೆ ಅವರ ಭುಜದ ಗಾಯಕ್ಕೆ ಪೂರ್ಣ ಗುಣಮುಖ ಕಾಣಲು 4 ತಿಂಗಳ ಕಾಲಾವಕಾಶ ಬೇಕಾಗುವ ನಿರೀಕ್ಷೆ ಇದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಐಪಿಎಲ್ ಮತ್ತೆ ಶುರುವಾದಾಗ ಇಂಗ್ಲೆಂಡ್ ಕ್ರಿಕೆಟಿಗರು ಆಡುವುದು ಅನುಮಾನ

    35 ವರ್ಷದ ಧವನ್ ಲಂಕಾಕ್ಕೆ ತೆರಳುವ ತಂಡದ ಹಿರಿಯ ಆಟಗಾರರಾಗಿರುವ ಕಾರಣ ನಾಯಕತ್ವಕ್ಕೆ ಅವರ ಹೆಸರು ಕೇಳಿಬಂದಿದೆ. ದೆಹಲಿ ತಂಡವಲ್ಲದೆ ಐಪಿಎಲ್ ತಂಡಗಳನ್ನೂ ಮುನ್ನಡೆಸಿದ ಅನುಭವ ಧವನ್‌ಗೆ ಇದೆ. ಹಿರಿಯ ಆಟಗಾರರಾಗಿರುವ ಅವರ ಮಾತನ್ನು ತಂಡದ ಯುವ ಆಟಗಾರರು ಕೇಳುವುದರಿಂದ ತಂಡವನ್ನು ಲಂಕಾದಲ್ಲಿ ಒಗ್ಗೂಡಿಸಲು ನೆರವಾಗುತ್ತದೆ. ಹೀಗಾಗಿ ನಾಯಕತ್ವಕ್ಕೆ ಧವನ್ ಅವರೇ ಸದ್ಯ ಮುಂಚೂಣಿಯ ಸ್ಪರ್ಧಿ ಎನಿಸಿದ್ದಾರೆ.

    ಇನ್ನು ಹಾರ್ದಿಕ್ ಪಾಂಡ್ಯಗೆ ನಾಯಕತ್ವ ವಹಿಸುವ ಮೂಲಕ ಹೆಚ್ಚಿನ ಜವಾಬ್ದಾರಿಯೊಂದಿಗೆ ಇನ್ನಷ್ಟು ಶ್ರೇಷ್ಠ ಆಟ ಹೊರಹೊಮ್ಮಿಸುವ ಚಿಂತನೆ ನಡೆದಿದೆ ಎನ್ನಲಾಗಿದೆ. ಹಾರ್ದಿಕ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಬೌಲಿಂಗ್ ಮಾಡಿಲ್ಲ. ಹೀಗಾಗಿ ಪೂರ್ಣ ಫಿಟ್ ಇರದ ಅವರನ್ನು ಇಂಗ್ಲೆಂಡ್ ಪ್ರವಾಸದ ಟೆಸ್ಟ್ ತಂಡಗಳಿಗೆ ಕಡೆಗಣಿಸಲಾಗಿದೆ. ಆದರೆ ಸೀಮಿತ ಓವರ್ ತಂಡಕ್ಕೆ ಅವರು ಈಗಲೂ ಮ್ಯಾಚ್ ವಿನ್ನರ್ ಆಗಿದ್ದು, ಲಂಕಾದಲ್ಲಿ ಅರೆಕಾಲಿಕ ಬೌಲರ್ ಆಗಿಯೂ ಉಪಯೋಗಕ್ಕೆ ಬರುವ ನಿರೀಕ್ಷೆ ಇದೆ. ಹುಡುಗಾಟದ ಆಟಗಾರನಾಗಿರುವ ಹಾರ್ದಿಕ್‌ಗೆ ನಾಯಕತ್ವ ಜವಾಬ್ದಾರಿ ಒಪ್ಪಿಸಿದರೆ ಅವರಿಂದ ಇನ್ನಷ್ಟು ಉತ್ತಮ ನಿರ್ವಹಣೆ ಹೊರಹೊಮ್ಮುವ ಲೆಕ್ಕಾಚಾರವನ್ನೂ ಹಾಕಲಾಗಿದೆ. ಸದ್ಯ ಬ್ಯಾಟ್ಸ್‌ಮನ್ ಆಗಿಯೇ ಕಣಕ್ಕಿಳಿಯುತ್ತಿರುವ ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಫಿನಿಷರ್ ಪಾತ್ರ ನಿಭಾಯಿಸುವತ್ತ ಹೆಚ್ಚಿನ ಗಮನ ಹರಿಸಿದ್ದಾರೆ ಎನ್ನಲಾಗಿದೆ.

    ವೈರಲ್ ಆಯ್ತು ಹಾರ್ದಿಕ್ ಪಾಂಡ್ಯ ದಂಪತಿಯ ರೋಮ್ಯಾಂಟಿಕ್ ಚಿತ್ರಗಳು!

    ಭಾರತ ಕಬಡ್ಡಿ ತಂಡದ ಮಾಜಿ ನಾಯಕಿ ತೇಜಸ್ವಿನಿ ಬಾಯಿ ಪತಿ ಕೋವಿಡ್‌ಗೆ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts