More

    ದೇಶಾದ್ಯಂತ ಜೂನ್‌ನಲ್ಲಿ ಶೇ.10 ಮಳೆ ಕುಂಠಿತ: ರಾಜ್ಯದ 25 ಜಿಲ್ಲೆಗಳಲ್ಲೂ ಅಭಾವ

    ಬೆಂಗಳೂರು: ದೇಶದಾದ್ಯಂತ ಜೂನ್‌ನಲ್ಲಿ ಮಳೆ ಕೊರತೆಯಾಗಿದೆ. ದೇಶದ 17 ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದರೆ, ಎರಡು ರಾಜ್ಯಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ಅಲ್ಲದೆ, ಕರ್ನಾಟಕ 25 ಜಿಲ್ಲೆಗಳಲ್ಲೂ ಮಳೆ ಕುಂಠಿತಗೊಂಡಿತ್ತು.

    Rains

    ದೇಶದಲ್ಲಿ ಜೂ 1ರಿಂದ ಜೂ. 31ರವರೆಗೆ ವಾಡಿಕೆಯಂತೆ 165 ಮಿಮೀ ಮಳೆಯಾಗಬೇಕಿತ್ತು. ಆದರೆ,148 ಮಿಮೀ ಸುರಿದಿದ್ದು, ಶೇ.10ರಷ್ಟು ಕುಂಠಿತವಾಗಿದೆ. 2022ರ ಜೂನ್ ಅವಧಿಯಲ್ಲಿಯೂ ಕಡಿಮೆ ವರ್ಷಧಾರೆಯಾಗಿತ್ತು. ವಾಯುವ್ಯ ಭಾರತದ ರಾಜ್ಯಗಳಲ್ಲಿ ವಾಡಿಕೆಗಿಂತ ಅಧಿಕವಾಗಿ ಸುರಿದರೆ, ಮಧ್ಯ ಭಾರತದಲ್ಲಿ ಶೇ.6, ದಕ್ಷಿಣ ಭಾರತ ರಾಜ್ಯಗಳಲ್ಲಿ ಶೇ.45, ಪೂರ್ವ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಶೇ.18 ಮಳೆ ಕೊರತೆಯಾಗಿದೆ.

    ದೇಶಾದ್ಯಂತ ಜೂನ್‌ನಲ್ಲಿ ಶೇ.10 ಮಳೆ ಕುಂಠಿತ: ರಾಜ್ಯದ 25 ಜಿಲ್ಲೆಗಳಲ್ಲೂ ಅಭಾವ

    ಇದನ್ನೂ ಓದಿ: ಹನುಮಾನ್ ಚಾಲೀಸಾ ಪಠಿಸಿದ ಕಳ್ಳ 10 ರೂ.ಕಾಣಿಕೆ ನೀಡಿ ದೇವಸ್ಥಾನದಿಂದ 5000 ರೂ. ದೋಚಿದ!

    ವಾಯುವ್ಯ ಭಾರತದ ರಾಜ್ಯಗಳಲ್ಲಿ 78 ಮಿಮೀ ಮಳೆಯಾಗಬೇಕಿತ್ತು. ಆದರೆ, 111 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.42ರಷ್ಟು ಅಧಿಕವಾಗಿ ಬಿದ್ದಿದೆ. ಮಧ್ಯ ಭಾರತದಲ್ಲಿ ವಾಡಿಕೆಯಂತೆ 170 ಮಿಮೀ ಮಳೆ ಬದಲಾಗಿ 160 ಮಿಮೀ ಬಿದ್ದಿದ್ದು, ಶೇ.6 ಕುಂಠಿತವಾಗಿದೆ.ದಕ್ಷಿಣ ಭಾರತ ರಾಜ್ಯಗಳಲ್ಲಿ 161 ಮಿಮೀ ಮಳೆ ಬೀಳಬೇಕಿತ್ತು. ಆದರೆ, 88 ಮಿಮೀ ಸುರಿದಿದ್ದು, ಶೇ.45 ಮಳೆ ಕೊರತೆಯಾಗಿದೆ. ಅದೇರೀತಿ, ಪೂರ್ವ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ 328 ಮಿಮೀ ಮಳೆ ಬದಲಾಗಿ 269 ಮಿಮೀ ಸುರಿದಿದ್ದು, ಶೇ.18 ಮಳೆ ಕುಂಠಿತವಾಗಿದೆ. ದೇಶದ ಇತರ ಭಾಗಗಳಗಿಂತ ಜೂನ್‌ನಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲೇ ಅಧಿಕ ಮಳೆ ಅಭಾವ ಉಂಟಾಗಿದೆ.

    ದೇಶಾದ್ಯಂತ ಜೂನ್‌ನಲ್ಲಿ ಶೇ.10 ಮಳೆ ಕುಂಠಿತ: ರಾಜ್ಯದ 25 ಜಿಲ್ಲೆಗಳಲ್ಲೂ ಅಭಾವ

    ಇದನ್ನೂ ಓದಿ: ಗಂಡನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ; ತಾನೂ ವಿಷ ಕುಡಿದು ಮಕ್ಕಳಿಗೂ ವಿಷ ಉಣಿಸಿದಳು

    ರಾಜಸ್ಥಾನ,ಗುಜರಾತ್ ವಾಡಿಕೆಗಿಂತ ಅಧಿಕ ಮಳೆಯಾದರೆ, ಹಿಮಾಚಲ ಪ್ರದೇಶ, ಪಂಜಾಬ್, ದೆಹಲಿ, ಚಂಡೀಗಡ, ಮಧ್ಯಪ್ರದೇಶ, ಸಿಕ್ಕಿಂ ರಾಜ್ಯಗಳಲ್ಲಿ ವಾಡಿಕೆಗಿಂತ ತುಸು ಹೆಚ್ಚು ಬಿದ್ದಿದೆ. ಛತ್ತೀಸ್‌ಗಢ, ತಮಿಳುನಾಡು, ಕಾರೈಕಲ್, ಮೇಘಾಲಯ, ಅಸ್ಸಾಂನಲ್ಲಿ ವಾಡಿಕೆಯಷ್ಟೇ ಸುರಿದರೆ, ಕರ್ನಾಟಕ, ತೆಲಂಗಾಣ, ಗೋವಾ, ಆಂಧ್ರಪ್ರದೇಶ, ಓಡಿಶಾ, ಮಹಾರಾಷ್ಟ್ರ, ಜಾರ್ಖಂಡ್, ಉತ್ತರ ಪ್ರದೇಶ, ಬಿಹಾರ, ಅರುಣಾಲ ಪ್ರದೇಶದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ಕೇರಳದಲ್ಲಿ ಶೇ.70 ಕುಂಠಿತವಾಗಿದೆ.

    Rain
    ಸಾಂದರ್ಭಿಕ ಚಿತ್ರ

    ಇದನ್ನೂ ಓದಿ:  ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…

    ರಾಜ್ಯದ 25 ಜಿಲ್ಲೆಗಳಲ್ಲೂ ಕುಂಠಿತ: ಜೂನ್‌ನಲ್ಲಿ ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆಯಾದರೆ, 87 ತಾಲೂಕುಗಳಲ್ಲಿ ತೀವ್ರವಾಗಿ ಮಳೆ ಅಭಾವ ಉಂಟಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿತ್ತು. ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ ಉಂಟಾದರೆ, ಬೆಂಗಳೂರು ನಗರ, ಬೆಂ.ಗ್ರಾಮಾಂತರದಲ್ಲಿ ವಾಡಿಕೆಗಿಂತ ಶೇ.20 ಕಡಿಮೆ ಮಳೆ ಬಿದ್ದಿದೆ. ಜೂ 1ರಿಂದ ಜೂ 29ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 191 ಮಿಮೀ ಮಳೆಯಾಗಬೇಕಿತ್ತು. 81 ಮಿಮೀ ಮಳೆಯಾಗಿದ್ದು, ಶೇ.57ರಷ್ಟು ಕಡಿಮೆ ಸುರಿದಿದೆ. ದಕ್ಷಿಣ ಕರ್ನಾಟಕದಲ್ಲಿ ಶೇ.22, ಉತ್ತರ ಕರ್ನಾಟಕದಲ್ಲಿ ಶೇ. 21, ಮಲೆನಾಡಲ್ಲಿ ಶೇ 64, ಕರಾವಳಿಯಲ್ಲಿ ಶೇ.19 ವಾಡಿಕೆಗಿಂತ ಕಡಿಮೆ ವರ್ಷಧಾರೆಯಾಗಿದೆ.

    Rains

    ಇದನ್ನೂ ಓದಿ: ಹುಟ್ಟುಹಬ್ಬದಂದು ಟೊಮ್ಯಾಟೋ ಗಿಫ್ಟ್: ಕಾಸ್ಟ್ಲಿಉಡುಗೊರೆ ಪಡೆದ ಬರ್ತಡೇ ಗರ್ಲ್​​ ಹೇಳಿದ್ದೇನು?

    4ನೇ ವರ್ಷವೂ ಕುಂಠಿತ: ಈ ಬಾರಿ ರಾಜ್ಯಕ್ಕೆ ತಡವಾಗಿ ಆಗಮಿಸಿದ್ದ ಮುಂಗಾರು ಆರಂಭದಲ್ಲಿ ದುರ್ಬಲಗೊಂಡಿತ್ತು. ಇದರಿಂದಾಗಿರಾಜ್ಯದಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಮೂರ‌್ನಾಲ್ಕು ವರ್ಷಗಳಿಂದ ಮಳೆ ದಿನಗಳು ಬದಲಾಗುತ್ತಿರುವ ಕಾರಣದಿಂದಾಗಿ 2020 ಮತ್ತು 2022ರ ಜೂನ್‌ನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದರೆ, 2021ರ ಜೂನ್‌ನಲ್ಲಿ ಮಾತ್ರ ವಾಡಿಕೆಯಷ್ಟೇ ಮಳೆ ಸುರಿದಿತ್ತು.ಆದರೆ, ಮೂರು ವರ್ಷಗಳಿಂದಲೂ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗಿತ್ತು. ಈ ಬಾರಿಯೂ ಆ ಭಾಗಗಳಲ್ಲಿ ಮಳೆ ಅಭಾವ ಕಾಡಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲೂ ವಾಡಿಕೆಗಿಂತ ಕಡಿಮೆ ಬಿದ್ದಿದೆ.

    ಸಿಂಗಲ್ ರೈಡ್​​ಗೆ 24 ಲಕ್ಷ ರೂ. ಚಾರ್ಜ್!: ಇದು ಉಬರ್? ಅಥವಾ ವಿಮಾನವಾ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts