More

    ರೈತ ಪ್ರತಿಭಟನೆ – ಜೆ.ಪಿ.ನಡ್ಡಾ ಮನೆಯಲ್ಲಿ ಕೇಂದ್ರ ಸಚಿವರ ತುರ್ತುಸಭೆ

    ನವದೆಹಲಿ: ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ರೈತ ಪ್ರತಿಭಟನೆಯ ಕಾವು ಹೆಚ್ಚಾಗತೊಡಗಿದಂತೆ ಡಿಸೆಂಬರ್ 3ಕ್ಕೆ ನಿಗದಿ ಮಾಡಿದ್ದ ಮಾತುಕತೆಯನ್ನು ಕೇಂದ್ರ ಸರ್ಕಾರ ಇಂದಿಗೆ ಮರುನಿಗದಿ ಮಾಡಿತ್ತು. ಇದರ ಬೆನ್ನಿಗೆ ಇಂದು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮನೆಯಲ್ಲಿ ಕೇಂದ್ರದ ಪ್ರಮುಖ ಸಚಿವರು ಸಭೆ ಸೇರಿ ಹೊಸ ಕೃಷಿ ಕಾನೂನು ಕುರಿತು ಚರ್ಚೆ ನಡೆಸಲಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್​, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ ಸಭೆಯಲ್ಲಿ ಭಾಗವಹಿಸಲಿದ್ದು, ರೈತರ ಪ್ರತಿಭಟನೆ ಅವರ ಬೇಡಿಕೆಗಳ ಕುರಿತು ಚರ್ಚಿಸಿ ಒಂದು ನಿರ್ಣಯಕ್ಕೆ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಈ ಬೆಳವಣಿಗೆಗಳ ನಡುವೆ ಅಮಿತ್ ಷಾ ಅವರು ಇಂದು ಭಾಗವಹಿಸಬೇಕಾಗಿದ್ದ ಬಿಎಸ್​ಎಫ್​ ರೈಸಿಂಗ್ ಡೇ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಅವರ ಪರವಾಗಿ ರಾಜ್ಯ ಸಚಿವ ನಿತ್ಯಾನಂದ ರಾಯ್ ಭಾಗವಹಿಸಿದ್ದಾರೆ.

    ಇದನ್ನೂ ಓದಿ: ಬೆಂಗಳೂರಿನ ನಂದಿನಿ ಲೇ ಔಟ್​ನಲ್ಲಿ ನಸುಕಿನಲ್ಲಿ ಮೊಳಗಿತು ಗುಂಡಿನ ಸದ್ದು..

    ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೂಡ ರೈತ ಸಂಘಟನೆಗಳ ನಾಯಕರನ್ನು ಇಂದು ಮಾತುಕತೆಗೆ ಆಹ್ವಾನಿಸಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ರೈತ ಸಂಘಟನೆಗಳ ನಾಯಕರು ಕೂಡ ಇಂದು ಸಂಜೆ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಕೇಂದ್ರ ಸರ್ಕಾರದ ತೀರ್ಮಾನವನ್ನು ಗಮನಿಸಿಕೊಂಡು ಒಮ್ಮತದ ಆಧಾರದಲ್ಲಿ ರೈತರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ರೈತ ಸಂಘಟನೆಗಳ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಸಿಪಿವೈ ಸಚಿವರಾಗೋದು ಗ್ಯಾರೆಂಟಿ- ಸುಳಿವು ನೀಡಿದ್ರು ಬಿಎಸ್​ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts