More

    ಕಾಂಗ್ರೆಸ್​ನಿಂದ ಟೋಲ್ ರಾಜಕಾರಣ: ಸಿಎಂ ಬೊಮ್ಮಾಯಿ‌ ಕಟು ಟೀಕೆ

    ಬೆಂಗಳೂರು: ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಕಾನೂನು ಪ್ರಕಾರ ಟೋಲ್ ಸಂಗ್ರಹಿಸುತ್ತಿದ್ದು, ಜನಸಾಮಾನ್ಯರಿಗೆ ಈ ವಿಚಾರ ಗೊತ್ತಿದೆ. ಪ್ರತಿಭಟನೆ ಮೂಲಕ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕಟುವಾಗಿ ಟೀಕಿಸಿದರು.

    ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ಹೆದ್ದಾರಿ ಟೋಲ್ ರಸ್ತೆ ಎಂದು ಎಲ್ಲರಿಗೂ ಗೊತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜಕೀಯ ಮಾಡುತ್ತಿದ್ದಾರೆ. ಅವರು ಬಳಸುವ ಭಾಷೆ, ಅವರು ನಡೆದುಕೊಂಡ ರೀತಿ ಯಾವುದೇ ಕನ್ನಡಿಗರಿಗೆ ಶೋಭೆ ತರುವಂಥದಲ್ಲ ಎಂದು ಬೊಮ್ಮಾಯಿ‌ ತೀವ್ರವಾಗಿ ಆಕ್ಷೇಪಿಸಿದರು. ಬಳಕೆ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶವಿದೆ. ಕಾನೂನು ಬಿಟ್ಟು ಏನು ಮಾಡುವುದಿಲ್ಲ. ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

    ಇದನ್ನೂ ಓದಿ: 18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಕೇಸ್​ ಏನಾಯ್ತು? ತನಿಖಾಧಿಕಾರಿಗಳಿಗೆ ಹೈಕೋರ್ಟ್​ ಶಾಕ್​!

    ಮಹಾ ಧೋರಣೆಗೆ ಕಿಡಿ
    ಕರ್ನಾಟಕದ ಬೆಳಗಾವಿ, ಬೀದರ್ ಜಿಲ್ಲೆಯ 862 ಹಳ್ಳಿಗಳಿಗೂ ಜ್ಯೋತಿಬಾಫುಲೆ ಆರೋಗ್ಯ ವಿಮೆ ಯೋಜನೆ ವಿಸ್ತರಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಣಯ ಪ್ರಚೋದನಾತ್ಮಕ ಧೋರಣೆಯಾಗಿದೆ ಎಂದು ಸಿಎಂ ಬೊಮ್ಮಾಯಿ‌ ಕಿಡಿಕಾರಿದರು. ಯಾವುದೇ ಪ್ರಚೋದನಾಕಾರಿ ನಿರ್ಧಾರ, ಹೇಳಿಕೆ ನೀಡಕೂಡದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಸ್ಪಷ್ಟವಾಗಿ ಸೂಚಿಸಿದ್ದರು. ಆದಾಗ್ಯೂ ಮಹಾರಾಷ್ಟ್ರ ಸಚಿವ ಸಂಪುಟ ಈ ನಿರ್ಣಯ ಕೈಗೊಂಡಿರುವುದು ಸರಿಯಲ್ಲ. ರಾಜ್ಯದ ಹಿತರಕ್ಷಣೆಯಲ್ಲಿ ಯಾವುದೇ ರಾಜಿಯಿಲ್ಲ‌. ಈ ವಿಚಾರವನ್ನು ಅಮಿತ್ ಷಾ ಗಮನಕ್ಕೆ ತಂದು ಆರೋಗ್ಯ ವಿಮೆ ಯೋಜನೆ ಹಿಂಪಡೆಯಲು ಒತ್ತಡ ಹೇರಲಾಗುವುದು ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

    https://www.vijayavani.net/we-have-decided-to-increase-the-salary-of-kptcl-employees-cm-basavaraja-bommai/

    ನಾಳೆ ತೆರೆಗೆ ಅಪ್ಪಲಿಸಲಿದೆ ಕಬ್ಜ: ಸಿನಿಮಾ ತಂಡದಿಂದ ಟೆಂಪಲ್​ ರನ್​

    ಇಡಿ ಇಕ್ಕಳದಲ್ಲಿ ಕವಿತಾ: ಹೈದರಾಬಾದ್​ನಲ್ಲಿ ರಾರಾಜಿಸುತ್ತಿದೆ ಬಿ.ಎಲ್​. ಸಂತೋಷ್​ “ಬೇಕಾಗಿದ್ದಾರೆ” ಪೋಸ್ಟರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts