More

    Tokyo Olympics| ಭಾರತಕ್ಕೆ ಚೊಚ್ಚಲ ಪದಕ ತಂದುಕೊಟ್ಟ ಮೀರಾಬಾಯಿ ಚಾನುಗೆ ಪ್ರಧಾನಿ ಶ್ಲಾಘನೆ​

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ 49ಕೆಜಿ ವಿಭಾಗದ ವೇಟ್​ ಲಿಫ್ಟಿಂಗ್​ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಸಿದ ಮೀರಾಬಾಯಿ ಚಾನು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

    ಟ್ವೀಟ್​ ಮೂಲಕ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ಮೋದಿ, ಇದೊಂದು ಸಂತೋಷದಾಯಕ ಆರಂಭ. ಇದರಿಂದ ಭಾರತವು ಉಲ್ಲಾಸಗೊಂಡಿದೆ. ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಅಭಿನಂದನೆ. ಅವರ ಯಶಸ್ಸು ಪ್ರತಿಯೊಬ್ಬ ಭಾರತೀಯನನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

    ಇಷ್ಟೇ ಅಲ್ಲದೆ, #Cheer4India ಎಂಬ ಹ್ಯಾಶ್​ಟ್ಯಾಗ್​ ಮೂಲಕ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ಹುರಿದುಂಬಿಸಿದ್ದಾರೆ.

    ಪುರುಷರ 10 ಮೀ ಏರ್​ ಪಿಸ್ತೋಲ್​ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅರ್ಹತಾ ಸುತ್ತಿನಲ್ಲಿ ಮೊದಲಿಗರಾಗಿ ಆಟ ಮುಗಿಸಿದ್ದಾರೆ. ಈ ಮೂಲಕ ಪದಕಗಳಿಗಾಗಿ ಸೆಣಸುವ ಫೈನಲ್ಸ್ ಸ್ಪರ್ಧೆಗೆ ಬಡ್ತಿ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts