More

    ಒಲಿಂಪಿಕ್ಸ್‌ನಲ್ಲಿ ಉಸೇನ್ ಬೋಲ್ಟ್ ಉತ್ತರಾಧಿಕಾರಿ ಇಂದು ನಿರ್ಧಾರ

    ಟೋಕಿಯೊ: ಕಳೆದ 3 ಒಲಿಂಪಿಕ್ಸ್‌ಗಳಲ್ಲಿ ನಿರ್ವಿವಾದಿತವಾಗಿ ಅತಿವೇಗದ ಓಟಗಾರ ಎನಿಸಿದ್ದ ಜಮೈಕಾದ ದಿಗ್ಗಜ ಉಸೇನ್ ಬೋಲ್ಟ್ ಗೈರಿನಲ್ಲಿ ಈ ಬಾರಿ 100 ಮೀಟರ್ ಓಟದಲ್ಲಿ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಭಾನುವಾರ ಉತ್ತರ ಲಭಿಸಲಿದೆ. ಕೆನಡದ ಆಂಡ್ರೆ ಡಿ ಗ್ರಾಸ್ ಹೀಟ್ಸ್‌ನಲ್ಲಿ 9.91 ಸೆಕೆಂಡ್‌ನಲ್ಲಿ ಓಡಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ಗೇರುವ ಮೂಲಕ ನಿರೀಕ್ಷೆ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ.

    2016ರ ಕಂಚು ವಿಜೇತ ಡಿ ಗ್ರಾಸ್, ಈ ಬಾರಿ ಫೇವರಿಟ್ ಆಗಿ ಮೂಡಿಬಂದಿದ್ದಾರೆ. ಅಮೆರಿಕದ ಬೇಕರ್ ರೋನಿ (10.03), ಫ್ರೆಡ್ ಕೆರ್ಲಿ (9.97ಸೆ.), ಜಮೈಕಾದ ಯೊಹಾನ್ ಬ್ಲೇಕ್ (10.06), ಇಟಲಿಯ ಮಾರ್ಸೆಲ್ ಜೇಕಬ್ಸ್ (9.94ಸೆ.), ನೈಜೀರಿಯಾದ ಎನೋಚ್ ಅಡೆಗೊಕ್ (9.98), ದಕ್ಷಿಣ ಆಫ್ರಿಕಾದ ಲಿಯೊಟ್ಲೆಲ ಗಿಫ್ಟ್​ (10.04) ಮತ್ತು ಆಸ್ಟ್ರೇಲಿಯಾದ ಬ್ರೌನಿಂಗ್ ರೋಹನ್ (10.01) ಫೈನಲ್‌ನಲ್ಲಿ ಗ್ರಾಸ್‌ಗೆ ಸವಾಲೊಡ್ಡುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ಭಾರತ ವಿರುದ್ಧ ಸರಣಿ ಗೆದ್ದ ಶ್ರೀಲಂಕಾ ತಂಡಕ್ಕೆ ಸಂತಸದಿಂದ ಬೋನಸ್ ನೀಡಿದ ಕ್ರಿಕೆಟ್ ಮಂಡಳಿ!

    2008, 2012, 2016ರ ಒಲಿಂಪಿಕ್ಸ್‌ಗಳಲ್ಲಿ 100 ಮತ್ತು 200 ಮೀ. ಓಟಗಳಲ್ಲಿ ಚಿನ್ನ ಗೆದ್ದು ಬೀಗಿದ್ದ ಉಸೇನ್ ಬೋಲ್ಟ್ 2017ರಲ್ಲಿ ನಿವೃತ್ತಿ ಹೊಂದಿದ್ದರು.

    ಅಥ್ಲೆಟಿಕ್ಸ್‌ನಲ್ಲಿ ಇಂದು ಫೈನಲ್ಸ್
    ಬೆಳಗ್ಗೆ 7.05: ಮಹಿಳೆಯರ ಶಾಟ್‌ಪುಟ್; ಮಧ್ಯಾಹ್ನ 3.40: ಪುರುಷರ ಹೈಜಂಪ್; ಸಂಜೆ 4.45: ಮಹಿಳೆಯರ ಟ್ರಿಪಲ್ ಜಂಪ್; ಸಂಜೆ 6.20: ಪುರುಷರ 100 ಮೀ.

    ಮೀರಾ ಗೆದ್ದ ಒಲಿಂಪಿಕ್ಸ್ ಬೆಳ್ಳಿ ಪದಕ ಚಿನ್ನವಾಗುವುದು ನಿಜವೇ? ಇಲ್ಲಿದೆ ರಿಯಲ್​ ಸ್ಟೋರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts