More

    ಆರ್​ಸಿಬಿಗೆ ಇಂದು ಪಂಜಾಬ್​ ಕಿಂಗ್ಸ್​ ಚಾಲೆಂಜ್​, ಆರನೇ ಗೆಲುವಿನತ್ತ ಕೊಹ್ಲಿ ಪಡೆ ಗಮನ

    ಅಹಮದಾಬಾದ್​: ಐಪಿಎಲ್​ 14ನೇ ಆವೃತ್ತಿಯಲ್ಲಿ ಕನಸಿನ ಆರಂಭ ಕಂಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ, ಕಳೆದ ವರ್ಷದಂತೆ ನೀರಸ ಆರಂಭದಿಂದ ಕಂಗೆಟ್ಟಿರುವ ಪಂಜಾಬ್​ ಕಿಂಗ್ಸ್​ ತಂಡವನ್ನು ಶುಕ್ರವಾರ ಎದುರಿಸಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾದಾಟದಲ್ಲಿ ಗೆಲುವಿನ ಓಟವನ್ನು ವಿಸ್ತರಿಸುವತ್ತ ವಿರಾಟ್​ ಕೊಹ್ಲಿ ಬಳಗ ಗಮನಹರಿಸಿದ್ದರೆ, ಕೆಎಲ್​ ರಾಹುಲ್​ ಪಡೆ ಗೆಲುವಿನ ಹಾದಿಗೆ ಮರಳುವ ಹಂಬಲದಲ್ಲಿದೆ. ಸಿಎಸ್​ಕೆ ವಿರುದ್ಧದ ಪಂದ್ಯವನ್ನು ಹೊರತಾಗಿ ಆರ್​ಸಿಬಿ ತಂಡ ಉಳಿದ 5 ಪಂದ್ಯಗಳಲ್ಲೂ ಸರ್ವಾಂಗೀಣ ನಿರ್ವಹಣೆಯೊಂದಿಗೆ ಗೆಲುವು ಕಂಡಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 1 ರನ್​ನಿಂದ ದಾಖಲಿಸಿದ ರೋಚಕ ಗೆಲುವು ಆರ್​ಸಿಬಿ ತಂಡವನ್ನು ಮತ್ತೆ ಗೆಲುವಿನ ಹಾದಿಗೆ ಮರಳಿ ತಂದಿದೆ. ಹೀಗಾಗಿ ಅಸ್ಥಿರ ನಿರ್ವಹಣೆಯಿಂದ ಪರದಾಡುತ್ತಿರುವ ಪಂಜಾಬ್​ ಕಿಂಗ್ಸ್​ ವಿರುದ್ಧ ಆರ್​ಸಿಬಿ ಆರನೇ ಗೆಲುವು ಒಲಿಸಿಕೊಳ್ಳುವ ನಿರೀೆ ಹೆಚ್ಚಿದೆ.

    ವಿಶ್ವಾಸದಲ್ಲಿ ಆರ್​ಸಿಬಿ
    ನಾಯಕ ವಿರಾಟ್​ ಕೊಹ್ಲಿ ಲೆಕ್ಕಾಚಾರಗಳೆಲ್ಲ ಈ ಬಾರಿ ಕೈಗೂಡುತ್ತಿವೆ. ಪ್ರಮುಖವಾಗಿ ಬ್ಯಾಟಿಂಗ್​ ವಿಭಾಗದಲ್ಲಿ ದೇವದತ್​ ಪಡಿಕಲ್​, ಗ್ಲೆನ್​ ಮ್ಯಾಕ್ಸ್​ವೆಲ್​ ಮತ್ತು ಎಬಿ ಡಿವಿಲಿಯರ್ಸ್​ ಆಟ ಸಾಕಷ್ಟು ಬಲ ತುಂಬಿದೆ. ಕೊಹ್ಲಿ ಕೂಡ ಆರಂಭಿಕರಾಗಿ ಉತ್ತಮ ಲಯದಲ್ಲಿದ್ದಾರೆ. ವನ್​ಡೌನ್​ ಆಟಗಾರರಾಗಿ ರಜತ್​ ಪಟಿದಾರ್​ ಕಳೆದ ಪಂದ್ಯದಲ್ಲಿ ಉತ್ತಮ ಕೊಡುಗೆ ನೀಡಿದ್ದಾರೆ. ಡೇನಿಯಲ್​ ಸ್ಯಾಮ್ಸ್​ ಕರೊನಾದಿಂದ ಗುಣಮುಖರಾಗಿ ಮರಳಿದ ಬಳಿಕ ತಂಡ ಸಂಯೋಜನೆಗೆ ಬಲ ತುಂಬಿದ್ದಾರೆ. ಬೌಲಿಂಗ್​ನಲ್ಲಿ ಹರ್ಷಲ್​ ಪಟೇಲ್​ ಟೂನಿರ್ಯಲ್ಲಿ ಇದುವರೆಗೆ ಗರಿಷ್ಠ ವಿಕೆಟ್​ ಸಾಧಕರೆನಿಸಿದ್ದರೆ, ಮೊಹಮದ್​ ಸಿರಾಜ್​ ಕಳೆದ ಪಂದ್ಯದಲ್ಲಿ ಪಂತ್​-ಹೆಟ್ಮೆಯರ್​ರಂಥ ಸ್ಫೋಟಕ ಬ್ಯಾಟ್ಸ್​ಮನ್​ಗಳ ಎದುರು 14 ರನ್​ ರಸುವಲ್ಲಿ ಸಲರಾಗಿದ್ದರು. ಆದರೆ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಈ ಬಾರಿ ವಿಕೆಟ್​ ಕಬಳಿಸುವ ಕಲೆಯನ್ನು ಮರೆತಂತಿರುವುದು ಮಾತ್ರ ಆರ್​ಸಿಬಿಗೆ ತುಸು ಹಿನ್ನಡೆಯಾಗಿದೆ.

    ಪಂಜಾಬ್​ ಪರದಾಟ
    ಇದುವರೆಗೆ ಆಡಿದ ಆರು ಪಂದ್ಯಗಳಲ್ಲಿ ಎರಡಲ್ಲಷ್ಟೇ ಗೆದ್ದು, 4ರಲ್ಲಿ ಸೋತಿರುವ ಪಂಜಾಬ್​ ತಂಡ, ಕಾಗದದ ಮೇಲೆ ಬಲಿಷ್ಠವಾಗಿ ಕಂಡುಬಂದರೂ, ಮೈದಾನದಲ್ಲಿ ಗೆಲುವಿನ ನಿರ್ವಹಣೆ ಬರುತ್ತಿಲ್ಲ. ಕನ್ನಡಿಗರಾದ ಕೆಎಲ್​ ರಾಹುಲ್​&ಮಯಾಂಕ್​ ಅಗರ್ವಾಲ್​ ಆರಂಭಿಕ ಜೋಡಿಯಾಗಿ ಮಿಂಚುತ್ತಿದ್ದರೆ, ಕ್ರಿಸ್​ ಗೇಲ್​ ಇದುವರೆಗಿನ 6 ಇನಿಂಗ್ಸ್​ಗಳಲ್ಲಿ 2ರಲ್ಲಿ ಮಾತ್ರ ಉತ್ತಮ ಸ್ಕೋರ್​ ಮಾಡಿದ್ದಾರೆ. ನಿಕೋಲಸ್​ ಪೂರನ್​ ವೈಲ್ಯ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. 3 ಶೂನ್ಯ ಸಹಿತ 5 ಇನಿಂಗ್ಸ್​ಗಳಲ್ಲಿ 28 ರನ್​ ಮಾತ್ರ ಗಳಿಸಿರುವ ಪೂರನ್​ ಈ ಬಾರಿ ಮತ್ತೊಂದು ಅವಕಾಶ ಪಡೆಯುವುದು ಅನುಮಾನ. ಆರಂಭಿಕರು ಬೇಗನೆ ಔಟಾದಾಗ ಮಧ್ಯಮ ಕ್ರಮಾಂಕದಲ್ಲಿ ಇನಿಂಗ್ಸ್​ ಬೆಳೆಸುವ ಆಟಗಾರರ ಕೊರತೆ ಕಾಡುತ್ತಿದೆ. ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಈ ವೈಲ್ಯದಿಂದಾಗಿಯೇ ಪಂಜಾಬ್​ ತಂಡ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಗಿರಲಿಲ್ಲ. ಇನ್ನು ಬೌಲರ್​ಗಳೂ ಡೆಲ್ಲಿ ವಿರುದ್ಧ 195 ರನ್​ ಮೊತ್ತ ರಸಿಕೊಳ್ಳಲು ವಿಲರಾಗಿದ್ದರೆ, ರಾಜಸ್ಥಾನ ವಿರುದ್ಧ 221 ರನ್​ ರಸಿಕೊಳ್ಳಲು ಪರದಾಡಿದ್ದರು. ಕ್ರಿಸ್​ ಜೋರ್ಡನ್​ ಸೇರ್ಪಡೆಯಿಂದ ಕೆಕೆಆರ್​ ವಿರುದ್ಧ ತಂಡದ ಬೌಲಿಂಗ್​ ಸ್ವಲ್ಪ ಸುಧಾರಣೆ ಕಂಡಿತ್ತು.

    ಆರ್​ಸಿಬಿ: ಟೂನಿರ್ಯಲ್ಲಿ ಇದುವರೆಗೆ ಬಹುತೇಕ ಅಂದುಕೊಂಡಂತೆಯೇ ನಡೆಯುತ್ತಿದೆ. ಎಲ್ಲ ಆಟಗಾರರು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಹೀಗಾಗಿ ಬದಲಾವಣೆಯ ಅಗತ್ಯ ಕಾಣಿಸುತ್ತಿಲ್ಲ.
    ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 1 ರನ್​ ಜಯ.

    ಪಂಜಾಬ್​ ಕಿಂಗ್ಸ್​: ಜಯದ ಹಾದಿಗೆ ಮರಳಲು ಕೆಲ ಬದಲಾವಣೆ ಅಗತ್ಯವಾಗಿದ್ದು, ಕೆಟ್ಟ ಾಮ್​ರ್ನಲ್ಲಿರುವ ನಿಕೋಲಸ್​ ಪೂರನ್​ ಬದಲಿಗೆ ಇಂಗ್ಲೆಂಡ್​ನ ಡೇವಿಡ್​ ಮಲಾನ್​ ಈ ಸಲವಾದರೂ ಅವಕಾಶ ಪಡೆಯುವ ಸಾಧ್ಯತೆ ಇದೆ.
    ಕಳೆದ ಪಂದ್ಯ: ಕೆಕೆಆರ್​ ವಿರುದ್ಧ 5 ವಿಕೆಟ್​ ಸೋಲು.

    ಮುಖಾಮುಖಿ: 26
    ಆರ್​ಸಿಬಿ: 12
    ಪಂಜಾಬ್​ ಕಿಂಗ್ಸ್​: 14
    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

    ಪಂಜಾಬ್​-ಮ್ಯಾಕ್ಸ್​ವೆಲ್​ ಮುಖಾಮುಖಿ ಕುತೂಹಲ!
    ಕಳೆದ ವರ್ಷ ಪಂಜಾಬ್​ ತಂಡದಲ್ಲಿದ್ದ ಆಸೀಸ್​ ಆಲ್ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​, ಈ ಸಲ ಆರ್​ಸಿಬಿ ಬಳಗದಲ್ಲಿದ್ದಾರೆ. ಕಳೆದ ವರ್ಷ ಪಂಜಾಬ್​ ತಂಡದಲ್ಲಿ ಸತತ ಅವಕಾಶ ಪಡೆದರೂ, ಒಂದೂ ಸಿಕ್ಸರ್​ ಸಿಡಿಸದೆ ಮಧ್ಯಮ ಕ್ರಮಾಂಕದಲ್ಲಿ ನಿರಾಸೆ ಮೂಡಿಸಿದ್ದ ಮ್ಯಾಕ್ಸ್​ವೆಲ್​ ಈ ಬಾರಿ ಆರ್​ಸಿಬಿ ಪರ ರನ್​ಪ್ರವಾಹವನ್ನೇ ಹರಿಸುತ್ತಿದ್ದಾರೆ ಮತ್ತು ತಂಡದ ಗೆಲುವಿಗೆ ಉಪಯುಕ್ತ ಕಾಣಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಈ ಬಾರಿ ತಮ್ಮ ಮಾಜಿ ತಂಡದ ವಿರುದ್ಧವೂ ಮ್ಯಾಕ್ಸ್​ವೆಲ್​ ಅಂಥದ್ದೇ ಆರ್ಭಟ ಪ್ರದಶಿರ್ಸುವರೇ ಮತ್ತು ಪಂಜಾಬ್​ ಪಾಳಯ ಅವರನ್ನು ಕೈಬಿಟ್ಟ ಬಗ್ಗೆ ಪಶ್ಚಾತ್ತಾಪ ಪಡುವಂತೆ ಮಾಡುವರೇ ಎಂಬುದು ಕುತೂಹಲ ಕೆರಳಿಸಿದೆ.

    ಗೆಲುವಿನ ಹಳಿಗೇರಿದ ಮುಂಬೈ ಇಂಡಿಯನ್ಸ್; ರಾಜಸ್ಥಾನ ರಾಯಲ್ಸ್ ಎದುರು 7 ವಿಕೆಟ್ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts