More

    ರಾಜ್ಯದಲ್ಲಿಂದು 25,005 ಜನರಿಗೆ ಕರೊನಾ; ರಾಜಧಾನಿಯಲ್ಲೇ ಇದ್ದಾರೆ ಮುಕ್ಕಾಲು ಭಾಗ ಸೋಂಕಿತರು!

    ಬೆಂಗಳೂರು: ರಾಜ್ಯದಲ್ಲಿ ಕರೊನಾ ರಣಕೇಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇಂದು 25,005 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ವಿಚಾರವಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಗುರುವಾರ 2,01,704 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 25,005 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ‌. ಅದರಲ್ಲಿ 18,374 ಸೋಂಕಿತರು ಬೆಂಗಳೂರು ನಗರ ಒಂದರಲ್ಲೇ ಇದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 31,24,524ಕ್ಕೆ ಏರಿಕೆ ಆಗಿದೆ. ಇಂದು 8 ಮಂದಿ ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 38,397 ಏರಿಕೆಯಾಗಿದೆ.

    ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,15,733ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ರೇಟ್​​ ಶೇ.12.39 ರಷ್ಟಿದ್ದು, 2,363 ಸೋಂಕಿತರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 29,70, 365 ಜನ ಡಿಸ್ಚಾರ್ಜ್ ಆಗಿದ್ದಾರೆ.

    ರಾಜಧಾನಿಯಲ್ಲಿ ರಣಕೇಕೆ: ಬೆಂಗಳೂರಿನಲ್ಲಿಯೂ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, 18,374 ಜನರಲ್ಲಿ ಸೋಂಕು ಪತ್ತೆಯಾಗಿದೆ. ಮೂವರು ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 91 ಸಾವಿರದಷ್ಟು ಇದೆ.

    ಹಳಿ ತಪ್ಪಿದ ಗುವಾಹಟಿ- ಬಿಕಾನೇರ್ ಎಕ್ಸ್‌ಪ್ರೆಸ್ ರೈಲು: ಮೂವರು ಸಾವು, 12 ಬೋಗಿ ಚೆಲ್ಲಾಪಿಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts