More

    ದೇಶಾದ್ಯಂತ ರೈತ ಮುಖಂಡರ ಸಭೆ; ಮಾತುಕತೆ, ಇಂದು ನಿರ್ಧಾರ

    ನವದೆಹಲಿ: ನೂತನ ಮೂರು ಕೃಷಿ ಕಾಯ್ದೆಗಳ ಕುರಿತು ಚರ್ಚೆಗೆ ಕೇಂದ್ರ ಸರ್ಕಾರ ನೀಡಿರುವ ಪ್ರಸ್ತಾವದ ಬಗ್ಗೆ ಬುಧವಾರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾನಿರತ ರೈತ ಸಂಘಟನೆಗಳು ಹೇಳಿವೆ. ಪಂಜಾಬ್​ನ 32 ರೈತ ಸಂಘಗಳು ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ರ್ಚಚಿಸಿವೆ. ಭಾರತದಾದ್ಯಂತದ ರೈತ ಮುಖಂಡರ ಸಭೆ ಬುಧವಾರ ನಡೆಯಲಿದ್ದು, ಅಲ್ಲಿ ಸರ್ಕಾರದ ಜತೆ ಮಾತುಕತೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರೈತ ಮುಖಂಡ ಕುಲವಂತ್ ಸಿಂಗ್ ಸಂಧು ಹೇಳಿದ್ದಾರೆ.

    ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗಿಯಾಗದಂತೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸ್​ನ್ ಮೇಲೆ ಒತ್ತಡ ಹೇರುವಂತೆ ಕೋರಿ ಬ್ರಿಟನ್​ನಲ್ಲಿನ ಸಂಸದರಿಗೆ ಪತ್ರ ಬರೆಯುವುದಾಗಿಯೂ ಸಂಧು ತಿಳಿಸಿದ್ದಾರೆ. ಪ್ರತಿಭಟನಾ ನಿರತ 40 ಸಂಘಟನೆಗಳ ರೈತ ಮುಖಂಡರಿಗೆ ಭಾನುವಾರ ಪತ್ರ ಬರೆದಿದ್ದ ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್​ವಾಲ್, ಮುಂದಿನ ಸುತ್ತಿನ ಮಾತುಕತೆಗೆ ಬರುವಂತೆ ಕೋರಿದ್ದರು. ಈ ಮಧ್ಯೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ದೆಹಲಿ ಮತ್ತು ಉತ್ತರ ಪ್ರದೇಶದ ಇನ್ನೆರಡು ರೈತ ಸಂಘಟನೆಗಳ ಮುಖಂಡರನ್ನು ಮಂಗಳವಾರ ಭೇಟಿಯಾಗಿದ್ದು, ಆ ಸಂಘಟನೆಗಳು ನೂತನ ಕಾಯ್ದೆಗಳಿಗೆ ಬೆಂಬಲ ವ್ಯಕ್ತಪಡಿಸಿವೆ.

    ಇದನ್ನೂ ಓದಿ: ‘ದೃಶ್ಯ’ ಸಿನಿಮಾ ಕಥೆ ನೆನಪಿಸಿತು ಅರ್ಚಕರ ಕೊಲೆ ರಹಸ್ಯ; ಕ್ಲೈಮ್ಯಾಕ್ಸ್​ನತ್ತ ತನಿಖೆ…

    ವಿಶೇಷ ಅಧಿವೇಶನಕ್ಕೆ ಒಪ್ಪದ ಕೇರಳ ಗವರ್ನರ್: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಲು ಕೇರಳ ಸರ್ಕಾರ ವಿಶೇಷ ಅಧಿವೇಶನ ನಡೆಸಲು ಕೋರಿದ್ದ ಅನುಮೋದನೆಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಿರಾಕರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    Video | ನಿಮ್ಮ ವಾಹನದ ಮೇಲೆ ‘ಆರ್​ಎಸ್ಎಸ್​’ ಸ್ಟಿಕ್ಕರ್ ಇದ್ಯಾ?; ಹಾಗಿದ್ದರೆ ಇಲ್ಲಿಗೆ ಹೋಗುವಾಗ ಒಮ್ಮೆ ಯೋಚಿಸಿ…

    ವಾಟರ್​ ಟ್ಯಾಂಕ್​ನಲ್ಲಿದ್ದವು ನಾಲ್ಕು ಹೆಣ! ವೈರಿಗಳೇ ಇಲ್ಲದ ಕುಟುಂಬದ ನಿಗೂಢ ಸಾವು!

    ಪ್ರಾಪ್ತಳು ಮತಾಂತರಗೊಂಡು ತವರಿಗೆ ಬರದಿದ್ದರೂ ಮಧ್ಯೆ ಪ್ರವೇಶಿಸುವ ಅಗತ್ಯವಿಲ್ಲ ಎಂದ ಹೈಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts