More

    ಭಾರತೀಯ ಸೇನೆಗೆ ಸಲಾಂ!; ಇಂದು 74ನೇ ಸೇನಾ ದಿನ

    ಭಾರತೀಯ ಸೇನಾ ದಿನ ಆಚರಣೆ ಈ ಬಾರಿ ಕೊಂಚ ಭಿನ್ನವಾಗಿದ್ದು, ಹೆಚ್ಚಿನ ಗಮನಸೆಳೆದಿದೆ. ಕೋವಿಡ್ 19 ಮೂರನೇ ಅಲೆಯ ಆತಂಕದ ನಡುವೆ ಬಿಗಿ ನಿಯಮಪಾಲನೆಯಲ್ಲಿ ಸೇನಾ ದಿನ ದೇಶದ ಎಲ್ಲ ಆರ್ವಿು ಕಮಾಂಡ್ ಹೆಡ್​ಕ್ವಾರ್ಟರ್ಸ್​ನಲ್ಲಿ ಆಚರಿಸಲ್ಪಡುತ್ತಿದೆ. ಪ್ರತಿವರ್ಷ ಜನವರಿ 15ರಂದೇ ಯಾಕೆ ಈ ದಿನಾಚರಣೆ? ಹಿನ್ನೆಲೆ ಮತ್ತು ಈ ಸಲದ ವಿಶೇಷತೆ ಏನು ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

    ಭಾರತೀಯ ಸೇನೆಯ ಪಾಲಿಗೆ ಜನವರಿ 15ಮಹತ್ವದ ಮತ್ತು ಸ್ಮರಣೀಯ ದಿನ. ಈ ವರ್ಷ 74ನೇ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ರಾಷ್ಟ್ರಸೇವೆಗಾಗಿ ನಿಸ್ವಾರ್ಥ ಭಾವದೊಂದಿಗೆ ಕೆಲಸ ಮಾಡುತ್ತ, ಭ್ರಾತೃತ್ವದ ಮಾದರಿಯಾಗಿ ನಿಂತ ಯೋಧರನ್ನು ಈ ದಿನದಂದು ಸನ್ಮಾನಿಸಲಾಗುತ್ತದೆ. ಯೋಧರ ಹೊಸ ಅತ್ಯಾಧುನಿಕ ಸಮವಸ್ತ್ರವನ್ನು ಅನಾವರಣ ಗೊಳಿಸುವುದು ಈ ಸಲದ ವಿಶೇಷ. ಭಾರತೀಯ ಸೇನೆಯನ್ನು ಅಧಿಕೃತವಾಗಿ 1895ರ ಏಪ್ರಿಲ್ 1ರಂದು ಸ್ಥಾಪಿಸಲಾಗಿದೆ. 1947ರಲ್ಲಿ ಬ್ರಿಟಿಷರು ಭಾರತ ಬಿಟ್ಟು ತೆರಳುವಾಗ ಅಧಿಕಾರ ಹಸ್ತಾಂತರ ಮಾಡಿದ ನಂತರದಲ್ಲಿ ನಮ್ಮ ದೇಶದ ಹೊಸ ಅಧ್ಯಾಯ ಆರಂಭವಾಯಿತು. ವಿದೇಶಿ ಆಳ್ವಿಕೆಯಿಂದ ಮುಕ್ತವಾಗಿ ಸ್ವತಂತ್ರ ಆಳ್ವಿಕೆಗೆ ನಾಂದಿ ಹಾಡಿದ ವರ್ಷವದು. ಇದಾಗಿ ಎರಡು ವರ್ಷದ ಆಸುಪಾಸಿನಲ್ಲಿ ಭಾರತದ ಸೇನೆಗೆ ಮೊದಲ ಬಾರಿಗೆ ಮುಖ್ಯಸ್ಥನ ನೇಮಕವಾಯಿತು ಎಂಬುದು ಸೇನಾ ದಿನದ ಐತಿಹಾಸಿಕ ಹಿನ್ನೆಲೆ.

    ಕ್ಯಾಮೊಫ್ಲೇಗ್ ಸಮವಸ್ತ್ರ: ಯೋಧರು ಈಗ ಧರಿಸುತ್ತಿರುವ ಸಮವಸ್ತ್ರಕ್ಕೆ ಸಂಪೂರ್ಣ ಭಿನ್ನವಾಗಿರುವಂಥದ್ದು ಈ ಕ್ಯಾಮೊಫ್ಲೇಗ್ ಸಮವಸ್ತ್ರ. ಭೂಮಿ ಮತ್ತು ಒಲಿವ್ ಸೇರಿ ವೈವಿಧ್ಯಮಯ ಬಣ್ಣ ಇದರ ವಿಶೇಷತೆ. ಭದ್ರತಾ ಕಾರಣಕ್ಕೆ ಈ ಬಟ್ಟೆ ಮತ್ತು ವಿನ್ಯಾಸದ ಉಡುಪುಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರಲ್ಲ.

    ಜೈಸಲ್ಮೇರ್​ನಲ್ಲಿ ಬೃಹತ್ ರಾಷ್ಟ್ರಧ್ವಜ: ಜಮ್ಮು-ಕಾಶ್ಮೀರದ ಲೇಹ್, ಮುಂಬೈ ಬಳಿಕ ಜೈಸಲ್ಮೇರ್​ನಲ್ಲಿ ಬೃಹತ್ ರಾಷ್ಟ್ರಧ್ವಜವನ್ನು ಜನವರಿ 15ರಂದು ಆರೋಹಣ ಮಾಡಲಾಗುತ್ತಿದೆ. ಜೈಸಲ್ಮೇರ್​ನ ಆರ್ವಿು ವಾರ್ ಮ್ಯೂಸಿಯಂನ ಬೆಟ್ಟ ತುದಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಖಾದಿ ಬಟ್ಟೆಯಲ್ಲಿ ಮಾಡಿದ ರಾಷ್ಟ್ರಧ್ವಜ 225 ಅಡಿ ಉದ್ದ, 150 ಅಡಿ ಅಗಲ ಮತ್ತು 1,000 ಕಿಲೋ ತೂಕವಿದೆ. 37,500 ಚದರ ಅಡಿ ಪ್ರದೇಶವನ್ನು ವ್ಯಾಪಿಸುವ ಗಾತ್ರ ಇದರದ್ದು. ಖಾದಿ ಗ್ರಾಮೋದ್ಯೋಗ ಇದನ್ನು ನಿರ್ವಿುಸಿದೆ.

    ಫೀಲ್ಡ್ ಮಾರ್ಷಲ್ ಕಾರ್ಯಪ್ಪ

    • ಫೀಲ್ಡ್ ಮಾರ್ಷಲ್ ಕೋಡಂದೆರ ಮಾದಪ್ಪ ಕಾರ್ಯಪ್ಪ, ಕೊಡಗಿನ ಶನಿವಾರಸಂತೆ ಸ್ವಂತ ಊರು.
    • ಜನನ 28.01.1899 ಮರಣ 15.05.1993
    • ಮೊದಲ ವಿಶ್ವ ಮಹಾಯುದ್ಧ (1914-18)ದ ಅವಧಿಯಲ್ಲಿ ಸೇನಾ ತರಬೇತಿ
    • 1919ರಲ್ಲಿ ಸೇನೆಗೆ ಆಯ್ಕೆಯಾದ ಮೊದಲ ಭಾರತ ತಂಡದಲ್ಲೊಬ್ಬರು ಮತ್ತು ಇಂದೋರ್​ನಲ್ಲಿ ತರಬೇತಿ ಬಳಿಕ ಕರ್ನಾಟಿಕ್ ಪದಾತಿ ದಳಕ್ಕೆ ನಿಯೋಜನೆ
    • 1949ರ ಜ.15ರಂದು ಭಾರತೀಯ ಸೇನೆ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ಸ್ವೀಕಾರ
    • ಫೀಲ್ಡ್ ಮಾರ್ಷಲ್ ಆಫ್ ಇಂಡಿಯಾ, ಸ್ಯಾಮ್ ಮಾಣೆಕ್​ಷಾ ಶ್ರೇಣಿಗೇರಿದ ಗರಿಮೆ
    • ಅಮೆರಿಕದ ಅಂದಿನ ಅಧ್ಯಕ್ಷ ಹ್ಯಾರಿ ಟ್ರೂಮನ್​ರಿಂದ ‘ಆರ್ಡರ್ ಆಫ್ ದ ಚೀಫ್ ಕಮಾಂಡರ್ ಆಫ್ ಲಿಜಿಯನ್ ಆಫ್ ಮೆರಿಟ್’ ಪ್ರಶಸ್ತಿ ಪಡೆದ ಭಾರತದ ಚೊಚ್ಚಲ ಸೇನಾಧಿಕಾರಿ
    • 1956ರಲ್ಲಿ ಸೇನೆಯಿಂದ ನಿವೃತ್ತಿ ಬಳಿಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ನಲ್ಲಿ ಭಾರತದ ಹೈಕಮಿಷನರ್.

    ಈ ವರ್ಷದ ವಿಶೇಷತೆ

    • ದೆಹಲಿಯ ಕಂಟೋನ್ಮೆಂಟ್​ನ ಕಾರ್ಯಪ್ಪ ಪರೇಡ್ ಗ್ರೌಂಡ್​ನಲ್ಲಿ ಮುಖ್ಯ ಪರೇಡ್ ನಡೆಯಲಿದ್ದು, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ ನರವಣೆ ಸಲ್ಯೂಟ್ ಪಡೆಯಲಿದ್ದಾರೆ. ಶೌರ್ಯ ಪ್ರಶಸ್ತಿ, ಸೇನಾ ಮೆಡಲ್, ಯುನಿಟ್ ಕ್ರೆಡೆನ್ಶಿಯಲ್ಸ್ ಅನ್ನು ನೀಡಲಾಗುತ್ತದೆ.
    • ಪ್ರತಿವರ್ಷದಂತೆ ಈ ಬಾರಿಯೂ ಯೋಧರು ಕವಾಯತು ಪ್ರದರ್ಶಿಸಲಿದ್ದಾರೆ. ಯುದ್ಧೋ ಪಕರಣಗಳ ಪ್ರದರ್ಶನವೂ ಇರುತ್ತದೆ.
    • ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ನಿರ್ವಿುತ ಸ್ವದೇಶಿ ಹೊಸ ಲೈಟ್ ಕೊಂಬ್ಯಾಟ್ ಹೆಲಿಕಾಪ್ಟರ್, ಅಡ್ವಾನ್ಸ್ ್ಡಲೈಟ್ ಹೆಲಿಕಾಪ್ಟರ್, ಡ್ರೋನ್​ಗಳ ಪ್ರದರ್ಶನ.
    • ಬಿಎಲ್​ಟಿ ಟಿ-72 ಭಾರತ್ ರಕ್ಷಕ್ ಟ್ಯಾಂಕ್, 155 ಎಂಎಂ ಸೊಲ್ಟಮ್ ಗನ್, ಬ್ರಹ್ಮೋಸ್ ಕ್ಷಿಪಣಿ
    • ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್​ಐಎಫ್​ಟಿ) ಸಹಯೋಗದಲ್ಲಿ ರಚಿಸುತ್ತಿರುವ ಹೊಸ ಕ್ಯಾಮೊಫ್ಲೇಗ್ ಯೂನಿಫಾಮರ್್​ನ ಡಿಜಿಟಲ್ ಪ್ಯಾಟರ್ನ್ ಅನಾವರಣ

    ಜನವರಿ 15ರಂದೇ ಯಾಕೆ?: ಭಾರತದ ಸೇನೆಗೆ ಮೊಟ್ಟ ಮೊದಲ ಮುಖ್ಯಸ್ಥರ ನೇಮವಾಗಿದ್ದು 1949ರ ಜನವರಿ 15ರಂದು. ಇದು ಐತಿಹಾಸಿಕ ದಿನ. ಭಾರತೀಯ ಸೇನೆಯ ಅಧಿಕಾರ ಹಸ್ತಾಂತರ ನಡೆದ ಸಂದರ್ಭ. ಜನರಲ್ ಸರ್ ಫ್ರಾನ್ಸಿಸ್ ಬುಚರ್ ಭಾರತ ಸೇನೆಯ ಮುಖ್ಯಸ್ಥರ ಅಧಿಕಾರ ದಂಡವನ್ನು ಲೆಫ್ಟಿನೆಂಟ್ ಜನರಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಹಸ್ತಾಂತರಿಸಿದರು. ಈ ದಿನ ಐತಿಹಾಸಿಕವಾದ ಕಾರಣ ಪ್ರತಿವರ್ಷ ಜನವರಿ 15ನ್ನು ಸೇನಾ ದಿನವನ್ನಾಗಿ ಆಚರಿಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts